ಕೈಗೆ ಬಳೆ ಹಣೆಗೆ ಕುಂಕುಮ... ಸೀರೆಯುಟ್ಟು ಸಾವಿಗೆ ಶರಣಾದ ಬಾಲಕ

Published : Dec 13, 2022, 09:07 PM IST
ಕೈಗೆ ಬಳೆ ಹಣೆಗೆ ಕುಂಕುಮ... ಸೀರೆಯುಟ್ಟು ಸಾವಿಗೆ ಶರಣಾದ ಬಾಲಕ

ಸಾರಾಂಶ

ಮಹಿಳೆಯರ ಒಳ ಉಡುಪು ಧರಿಸಿ ಸೀರೆಯುಟ್ಟ, ಹಣೆಗೆ ಕುಂಕುಮವಿಟ್ಟು ಬಾಲಕ ನೇಣಿಗೆ ಶರಣಾಗಿದ್ದಾನೆ. ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಬಾಲಕನ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ಕೋಲ್ಕತ್ತಾ:10ನೇ ತರಗತಿ ಓದುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿಯೋರ್ವ ಅನುಮಾನಾಸ್ಪದ ಸ್ಥಿತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆದಿದೆ.   ಮಹಿಳೆಯರ ಒಳ ಉಡುಪು ಧರಿಸಿ ಸೀರೆಯುಟ್ಟ, ಹಣೆಗೆ ಕುಂಕುಮವಿಟ್ಟು ಬಾಲಕ ನೇಣಿಗೆ ಶರಣಾಗಿದ್ದಾನೆ. ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಬಾಲಕನ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ (Siliguri) ಈ ಘಟನೆ ನಡೆದಿದೆ. ಸಾವಿಗೆ ಮೊದಲು ಬಾಲಕ ಸೀರೆಯುಟ್ಟು (saree) ಹಣೆಗೆ ಕುಂಕುಮವಿಟ್ಟು (bindi), ಕೈಗೆ ಬಳೆಯನ್ನು ತೊಟ್ಟು ಸ್ತ್ರೀಯರಂತೆ  ಅಲಂಕರಿಸಿಕೊಂಡಿದ್ದು, ನಂತರ ಮನೆಯಲ್ಲೇ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಮೃತ ಬಾಲಕನನ್ನು ದೀಪೇಶ್ ಮಂಡಲ್ (Deepesh Mandal) ಎಂದು ಗುರುತಿಸಲಾಗಿದ್ದು, ಸಿಲಿಗುರಿಯ ಬರಡಕಂತಾ ವಿದ್ಯಾಪೀಠದಲ್ಲಿ 10ನೇ ತರಗತಿಯಲ್ಲಿ ಅಧ್ಯಯನ ನಡೆಸುತ್ತಿದ್ದ. ಈ ಘಟನೆ ನಡೆಯುವ ಮೊದಲು ಬಾಲಕ ದೀಪೇಶ್ ಮನೆಯಲ್ಲಿ ಒಬ್ಬನೇ ಇದ್ದು, ಮಧ್ಯಂತರ ಪರೀಕ್ಷೆಗೆ ಸಿದ್ಧತೆ ನಡೆಸಿಕೊಳ್ಳುತ್ತಿದ್ದ. ಮನೆಯ ಬಾಗಿಲು ಕೂಡ ಒಳಗಿನಿಂದ ಲಾಕ್ ಆಗಿದ್ದು, ಮನೆಯಲ್ಲಿದ್ದ ಟಿವಿ ಚಾಲನೆಯಲ್ಲಿತ್ತು. 

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಂತಹ ಆಘಾತಕಾರಿ ನಿರ್ಧಾರ ಕೈಗೊಳ್ಳಲು ಕಾರಣವೇನಿರಬಹುದು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ದಿಪೇಶ್ ಅವರ ಹಿರಿಯ ಸಹೋದರ ಕೂಡ ಅಸಹಜ ಸ್ಥಿತಿಯಲ್ಲಿ (unnatural death) ಸಾವಿಗೀಡಾಗಿದ್ದ. ಮೃತ ದಿಪೇಶ್ ಕಲಿಯುವುದರಲ್ಲಿ ಪ್ರತಿಭಾನ್ವಿತನಾಗಿದ್ದು, ಉತ್ತಮ ನಡತೆಯುಳ್ಳವನಾಗಿದ್ದ. ಮದ್ಯಪಾನ ಮುಂತಾದ ಯಾವುದೇ ಕೆಟ್ಟ ಚಟಗಳು (intoxication) ಆತನಿಗಿರಲಿಲ್ಲ. ಅಲ್ಲದೇ ಆತ ಯಾವತ್ತೂ ಸ್ತ್ರೀಯಂತೆ (feminine) ನಡೆದುಕೊಂಡಿರಲಿಲ್ಲ. ಅಲ್ಲದೇ ಆ ಬಗ್ಗೆ ಆಸಕ್ತಿಯನ್ನು ಆತ ಹೊಂದಿರಲಿಲ್ಲ ಎಂದು ನೆರೆಹೊರೆಯ ಮನೆಯವರು ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಇದೇ ರೀತಿಯ ಪ್ರಕರಣ ಸಿಲಿಗುರಿಯ ಟಿಕಿಪರ (Tikiapara) ಪ್ರದೇಶದಲ್ಲಿ ನಡೆದಿತ್ತು. ಯುವಕನೋರ್ವ ಹೆಣ್ಣಿನಂತೆ ಸೀರೆ ಧರಿಸಿ ಸಾವಿಗೆ ಶರಣಾಗಿದ್ದ. 

Transgender ಪಾತ್ರದಲ್ಲಿ ಸುಶ್ಮಿತಾ ಸೇನ್, ಹೇಗಿದೆ ನೋಡಿ ಫಸ್ಟ್ ಲುಕ್‌!

Vijayapura; ಮತ್ತೈದೆಯರಂತೆ ಮಂಗಳಮುಖಿಯರಿಗೂ ಗೌರವ ಸಲ್ಲಿಸಿದ ದುರ್ಗಾದೇವಿ ಅರ್ಚಕ!

'ಹೆಂಡತಿಯ ಆಶೀರ್ವಾದ' ಮಂಗಳಮುಖಿಯನ್ನು ಮದುವೆಯಾದ ವಿವಾಹಿತ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ