ಮೊಬೈಲ್ ಅಂಗಡಿಗೆ ಬಂದ ಕಳ್ಳನೋರ್ವ ಸ್ವಲ್ಪ ಕಾಲ ಮೊಬೈಲ್ ನೋಡಿದಂತೆ ಮಾಡಿ ಬಳಿಕ ಮೊಬೈಲ್ ಎತ್ತಿಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಸೆನ್ಸಾರ್ ಚಾಲಿತ ಡೋರ್ ಲಾಕ್ ಆಗಿದ್ದರಿಂದ ಆತ ಅಲ್ಲೇ ಬಾಕಿಯಾಗಿದ್ದು, ಇಂಗು ತಿಂದ ಮಂಗನಂತಾಗಿದ್ದಾನೆ. ಬ್ರಿಟನ್‌ನಲ್ಲಿ ಈ ತಮಾಷೆಯ ಘಟನೆ ನಡೆದಿದೆ. ಮೊಬೈಲ್ ಶಾಪ್‌ಗೆ ಬಂದ ಯುವಕನೋರ್ವ ಮೊಬೈಲ್ ಫೋನ್ ಖರೀದಿಸುವಂತೆ ಮಾಡಿದ್ದಾನೆ. ಈತನಿಗೆ ಶಾಪ್‌ನ ಮಾಲೀಕ ಹೊಸ ಹೊಸ ಮೊಬೈಲ್ ಫೋನ್‌ಗಳನ್ನು ನೀಡಿದ್ದು, ಇದನ್ನು ಕೆಲ ಕಾಲ ನೋಡಿದಂತೆ ಮಾಡಿದ ಕಳ್ಳ ಮೊಬೈಲ್‌ನೊಂದಿಗೆ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಸಮಯಪ್ರಜ್ಞೆ ತೋರಿದ ಶಾಪ್ ಮಾಲೀಕರು ತಂತ್ರಜ್ಞಾನದ ಸಹಾಯದಿಂದ ಬಾಗಿಲು ಬಂದ್ ಆಗುವಂತೆ ಮಾಡಿದ್ದು, ಇದರಿಂದ ಮೊಬೈಲ್ ಕದಿಯಲು ಹೋದ ಕಳ್ಳ ಬಂದ ದಾರಿಗೆ ಸುಂಕವಿಲ್ಲ ಎಂಬಂತಾಗಿದ್ದಾನೆ.
ಇಂಗ್ಲೆಂಡ್‌ನ (UK) ಪಶ್ಚಿಮ ಯಾರ್ಕ್ ಶೈರ್‌ನಲ್ಲಿರುವ ( West Yorkshire) ಡ್ಯೂಸ್‌ಬರಿ (Dewsbury)ಯಲ್ಲಿ ಈ ಘಟನೆ ನಡೆದಿದೆ. ಅಂಗಡಿ ಮಾಲೀಕನ ಚುರುಕುತನ ಹಾಡಹಗಲೇ ನಡೆಯೇಕಿದ್ದ ಕಳವು ಪ್ರಕರಣವನ್ನು ವಿಫಲಗೊಳಿಸಿದೆ. ಅಂಗಡಿಯಲ್ಲಿದ್ದ ಸಿಸಿಟಿವಿಯಲ್ಲಿ ಕಳ್ಳನೇ ನಗೆಪಾಟಾಲಿಗೀಡಾದ ಕ್ಷಣದ ವಿಡಿಯೋ ಸೆರೆ ಆಗಿದೆ. ಮೊಬೈಲ್ ಅಂಗಡಿಗೆ ಬಂದಿದ್ದ ಈತ 1,600 ಪೌಂಡ್ ಮೌಲ್ಯದ ಅಂದರೆ ಸುಮಾರು ಒಂದು ಲಕ್ಷದ 62 ಸಾವಿರ ಭಾರತೀಯ ರೂಪಾಯಿ ಮೌಲ್ಯದ ಮೊಬೈಲ್ ಫೋನ್ ಕಳ್ಳತನಕ್ಕೆ ಯತ್ನಿಸಿದ್ದ. ಡಿಸೆಂಬರ್ 4 ರಂದು ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ನಂತರ ಈತ ಅಂಗಡಿ ಮಾಲೀಕರಿಗೆ ಮೊಬೈಲ್ ಹಿಂದಿರುಗಿಸಿದ್ದು, ತನ್ನನ್ನು ಕ್ಷಮಿಸುವಂತೆ ಕೇಳಿ ಬಾಗಿಲು ತೆರೆದು ಹೊರಗೆ ಬಿಡುವಂತೆ ಕೇಳಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಮೊಬೈಲ್ ಶಾಪ್ ಮಾಲೀಕ 52 ವರ್ಷದ ಅಫ್ಜಲ್ ಅದಂ (Afzal Adam) ಈ ಬಗ್ಗೆ ಪ್ರತಿಕ್ರಿಯಿಸಿದ್ದು, 2020ರಲ್ಲಿ ಅವರು 250 ಪೌಂಡ್ ವೆಚ್ಚದೊಂದಿಗೆ ಈ ಯಂತ್ರಚಾಲಿತ ಬಾಗಿಲನ್ನು ತಮ್ಮ ಅಂಗಡಿಗೆ ಅಳವಡಿಸಿದ್ದರು. ಆ ಸಂದರ್ಭದಲ್ಲಿ ಕೋವಿಡ್ ಹೆಚ್ಚಿದ್ದ ಸಂದರ್ಭದಲ್ಲಿ ಜನ ಮುಖಕ್ಕೆ ಮಾಸ್ಕ್, ಧರಿಸಿ ಬರುತ್ತಿದ್ದುದ್ದರಿಂದ ಯಾರ ಗುರುತು ಕೂಡ ಸಿಗುತ್ತಿರಲಿಲ್ಲ. ಅಲ್ಲದೇ ಅವರು ಮೊಬೈಲ್ ಎತ್ತಿಕೊಂಡು ಹೋದರೂ ತಿಳಿಯುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ತಾವು ಆಗ ತಮ್ಮ ಅಂಗಡಿಗೆ ಸ್ವಯಂ ಲಾಕ್ ಆಗುವ ಬಾಗಿಲನ್ನು ಅಳವಡಿಸಿದಾಗಿ ಅಂಗಡಿ ಮಾಲೀಕ ಅಫ್ಜಲ್ ಅದಂ ಹೇಳಿದ್ದಾರೆ. ಅಂಗಡಿಗೆ ಬಂದ ಕಳ್ಳ ತಲೆ ಮುಚ್ಚುವ ಟೀ ಶರ್ಟ್ ಧರಿಸಿದ್ದು, ಸುಮಾರು 1,600 ಪೌಂಡ್ ಮೌಲ್ಯದ ಮೊಬೈಲ್ ಎತ್ತಿಕೊಂಡು ಪರಾರಿಯಾಗಲು ಯತ್ನಿಸಿದ್ದ. ಆದರೆ ಈ ಡೋರ್ ಆತನನ್ನು ತಡೆಯಿತು ಎಂದು ಅವರು ಹೇಳಿಕೊಂಡಿದ್ದಾರೆ.
ಎಟಿಎಂ ಕಾರ್ಡ್ ಬದಲಿಸಿ ಹಣ ಕದಿಯುತ್ತಿದ್ದ ಕಳ್ಳ ಬಂಧನ
ಶೋಕಿಗೆ ಜೀವನಕ್ಕಾಗಿ ದೇವಸ್ಥಾನದ ಬಾಗಿಲು ಒಡೆದು ಕಳ್ಳತನ ಮಾಡ್ತಿದ್ದ ಸರ್ಕಾರಿ ಶಾಲೆ ಶಿಕ್ಷಕ!
Dharwad: ಹೊಲದಲ್ಲಿ ಮಣ್ಣು ಕಳ್ಳತನವಾಗಿದೆ ಹುಡುಕಿ ಕೊಡಿ: ರೈತರಿಂದ ದೂರು ದಾಖಲು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ