ಚಿತ್ರದುರ್ಗ: ತಲೆಮರೆಸಿಕೊಂಡ ಆರೋಪಿ ಸೆರೆಹಿಡಿಯಲು ತೆಲಂಗಾಣ ಪೊಲೀಸರಿಗೆ ನೆರವಾದ ಭಿಕ್ಷುಕರ ಪುನರ್ವಸತಿ ಕೇಂದ್ರ!

By Kannadaprabha News  |  First Published Mar 2, 2024, 2:54 PM IST

ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ್ದ ವ್ಯಕ್ತಿಯನ್ನು ಇತ್ತೀಚೆಗೆ ಗೋಣೂರಿನ ಭಿಕ್ಷುಕರ ಪುನರ್ವಸತಿ ಕೇಂದ್ರದ ಅಧಿಕಾರಿಗಳು ಬಂಧಿಸಿದ್ದರು, ನಂತರ ವಿಚಾರಣೆಗೊಳಪಡಿಸಿದಾಗ ಆತ ಹಲವು ಪ್ರಕರಣಗಳ ಆರೋಪಿಯಾಗಿದ್ದಾನೆ ಎಂದು ತಿಳಿದು ಬಂದಿದೆ.


ಚಿತ್ರದುರ್ಗ (ಮಾ.2): ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ್ದ ವ್ಯಕ್ತಿಯನ್ನು ಇತ್ತೀಚೆಗೆ ಗೋಣೂರಿನ ಭಿಕ್ಷುಕರ ಪುನರ್ವಸತಿ ಕೇಂದ್ರದ ಅಧಿಕಾರಿಗಳು ಬಂಧಿಸಿದ್ದರು, ನಂತರ ವಿಚಾರಣೆಗೊಳಪಡಿಸಿದಾಗ ಆತ ಹಲವು ಪ್ರಕರಣಗಳ ಆರೋಪಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಪೈಲಾರ ವಂಶಿ (22) ಎಂಬಾತ ಹೆದ್ದಾರಿಯಲ್ಲಿ ಭಿಕ್ಷೆ ಬೇಡುತ್ತಾ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ಪುನರ್ವಸತಿ ಕೇಂದ್ರದ ಸೂಪರಿಂಟೆಂಡೆಂಟ್ ಆತನನ್ನು ಪ್ರಶ್ನಿಸಿದಾಗ, ತಾನು ಕಟ್ಟಡ ನಿರ್ಮಾಣ ಕಾರ್ಮಿಕನಾಗಿದ್ದು, ಕೆಲಸಕ್ಕೆ ಹೋಗುತ್ತಿರುವುದಾಗಿ ಹೇಳಿದ್ದ.

Tap to resize

Latest Videos

undefined

ವಿವಾಹಿತನೊಂದಿಗೆ ಸಂಬಂಧ: ಅಪ್ರಾಪ್ತ ಮಗಳನ್ನು ಕೊಂದ ಪೋಷಕರು

ನಂತರ ಆತನನ್ನು ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ದರು . ವಿಚಾರಣೆ ಮಾಡುವ ವೇಳೆ ವಂಶಿ ತೆಲಂಗಾಣದಲ್ಲಿ ಅಪರಾಧಗಳಲ್ಲಿ ಭಾಗಿಯಾಗಿದ್ದಾನೆ ಮತ್ತು ಮೈಲಾರ್‌ದೇವಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆತನ ವಿರುದ್ಧ ಪ್ರಕರಣಗಳಿವೆ ಎಂದು ಬಹಿರಂಗಪಡಿಸಿದ್ದಾನೆ.

ವಂಶಿ ನೀಡಿದ ವಿವರಗಳೊಂದಿಗೆ ಅಧಿಕಾರಿಗಳು ತೆಲಂಗಾಣ ಪೊಲೀಸರನ್ನು ಸಂಪರ್ಕಿಸಿದರು. ಈ ವೇಳೆ ಆರೋಪಿಯನ್ನು ಬಿಡುಗಡೆ ಮಾಡದಂತೆ ಪೊಲೀಸ್ ಅಧಿಕಾರಿಗಳು ಪುನರ್ವಸತಿ ಕೇಂದ್ರದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಂಶಿ ಅತ್ಯಾಚಾರ ಮತ್ತು ಕೊಲೆ ಯತ್ನದಂತಹ ವಿವಿಧ ಅಪರಾಧಗಳಿಗಾಗಿ 18 ತಿಂಗಳ ಕಾಲ ಜೈಲಿನಲ್ಲಿದ್ದನು. ಎರಡು ವರ್ಷಗಳ ಹಿಂದೆ ತನ್ನ ತಾತನ ಸಹಾಯದಿಂದ ಜಾಮೀನು ಪಡೆದಿದ್ದನು, ಜಾಮೀನು ಪಡೆದ ಆತ ತಲೆಮರೆಸಿಕೊಂಡಿದ್ದಾನೆ.

ವಿಮೆ ಹಣಕ್ಕಾಗಿ ತನ್ನೆರಡು ಕಾಲನ್ನೇ ಕತ್ತರಿಸಿಕೊಂಡ ಭೂಪ…!

ಆತ ಮೊದಲು ಕೋಲಾರದ ಬಾಗೇಪಲ್ಲಿಗೆ ಆಗಮಿಸಿ ತೃತೀಯಲಿಂಗಿಗಳ ಗುಂಪನ್ನು ಸೇರಿಕೊಂಡು ಅವರೊಂದಿಗೆ ಭಿಕ್ಷೆ ಬೇಡಲು ಪ್ರಾರಂಭಿಸಿದ್ದ. ದಿನಕ್ಕೆ 3,000-4,000 ಸಂಗ್ರಹಿಸಿ ಗ್ರೂಪ್ ಲೀಡರ್ ಗೆ ನೀಡುತ್ತಿದ್ದ.

ಗುಂಪಿನ ನಾಯಕನು ವಂಶಿ ಹಿಂದಿನ ಚರಿತ್ರೆ ತಿಳಿದಾಗ, ಆತನನ್ನು ಹೊರಹಾಕಿದಳು. ಸ್ವಲ್ಪ ಸಮಯ ಅಲ್ಲಿ ಇಲ್ಲಿ ಅಲೆದಾಡಿ ನಂತರ ಚಿತ್ರದುರ್ಗಕ್ಕೆ ಬಂದ. ತೆಲಂಗಾಣ ಪೊಲೀಸರು ಆರೋಪಿಯನ್ನು ಮಾರ್ಚ್ 13 ರಂದು ತನ್ನ ಮುಂದೆ ಹಾಜರುಪಡಿಸಲು ಎಲ್‌ಬಿ ನಗರದಿಂದ 13 ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಿಂದ ವಾರಂಟ್ ಪಡೆದಿದ್ದಾರೆ.

ಚಿತ್ರದುರ್ಗಕ್ಕೆ ಬಂದು ವಂಶಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ತೆಲಂಗಾಣ ಪೊಲೀಸರು ಆರೋಪಿಯನ್ನು ಬಂಧಿಸಲು ಸಹಾಯ ಮಾಡಿದ್ದಕ್ಕಾಗಿ ಭಿಕ್ಷುಕರ ಪುನರ್ವಸತಿ ಕೇಂದ್ರದ ಮಹದೇವಯ್ಯ ಅವರಿಗೆ ಧನ್ಯವಾದ ಅರ್ಪಿಸಿದರು.
 

click me!