ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸಿಸಿಬಿ ಪೊಲೀಸರಿಂದ ತನಿಖೆ ಚುರುಕುಗೊಂಡಿದ್ದು, ಮೂವರು ಶಂಕಿತರನ್ನು ಈಗಾಗಲೇ ಬಂಧಿಸಲಾಗಿದೆ. ಓರ್ವನನ್ನು ಡಿಜೆ ಹಳ್ಳಿಯಿಂದ ಬಂಧಿಸಲಾಗಿದೆ.
ಬೆಂಗಳೂರು (ಮಾ.2): ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸಿಸಿಬಿ ಪೊಲೀಸರಿಂದ ತನಿಖೆ ಚುರುಕುಗೊಂಡಿದ್ದು, ಮೂವರು ಶಂಕಿತರನ್ನು ಈಗಾಗಲೇ ಬಂಧಿಸಲಾಗಿದೆ. ಮಡಿವಾಳದ ಟೆಕ್ನಿಕಲ್ ಸೆಂಟರ್ ನಲ್ಲಿ ಬೇರೆ ಬೇರೆ ಸ್ಥಳದಲ್ಲಿರಿಸಿ ಮೂವರನ್ನೂ ಸಿಸಿಬಿ ವಿಚಾರಣೆ ನಡೆಸುತ್ತಿದೆ. ಸ್ಪೋಟಕಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿಗಳನ್ನ ಸಿಸಿಬಿ ಕಲೆ ಹಾಕುತ್ತಿದ್ದು, ಓರ್ವನನ್ನು ಡಿಜೆಹಳ್ಳಿಯಿಂದ ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ತಡ ರಾತ್ರಿ ಡಿಜೆ ಹಳ್ಳಿಗೆ ಬಂದ ಪೊಲೀಸರು ಶಂಕಿತನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಕರೆದುಕೊಂಡು ಹೋಗಿದ್ದು, ಈಗ ಮಡಿವಾಳದ ಟೆಕ್ನಿಕಲ್ ಸೆಂಟರ್ ನಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.
ಪರಪ್ಪನ ಅಗ್ರಹಾರಕ್ಕೂ ರಾಮೇಶ್ವರಂ ಕೆಫೆ ಬ್ಲಾಸ್ಟ್‌ಗೂ ಇದೆಯಾ ಲಿಂಕ್!?
ಇದೀಗ ಶಂಕಿತ ವ್ಯಕ್ತಿಗಳ ಬಂಧನ ಮತ್ತು ಪರಪ್ಪನ ಅಗ್ರಹಾರಕ್ಕೂ ಲಿಂಕ್ ಇದೆಯಾ ಎಂಬ ಬಗ್ಗೆ ತೀವ್ರ ಅನುಮಾನ ವ್ಯಕ್ತವಾಗಿದೆ. ಕರ್ನಾಟಕದಲ್ಲಿ ನಡೆದ ಹಲವು ಉಗ್ರ ಕೃತ್ಯಗಳ ಆರೋಪಿಗಳಿಗೂ ಈ ಘಟನೆಗೂ ಲಿಂಕ್ ಇದೆ ಎಂಬ ಸಾಧ್ಯತೆಯ ಬಗ್ಗೆ ಅದರಲ್ಲೂ ಇತ್ತೀಚಿಗೆ ನಿಷೇಧಿಸಿದ್ದ ಸಂಘಟನೆಯ ಸದಸ್ಯ ಮೇಲೆ ಪೊಲೀಸರಿಗೆ ಅನುಮಾನ ಹೆಚ್ಚಿದೆ. ಬೆಂಗಳೂರಿನ ಡಿಜೆ ಹಳ್ಳಿ ಸೇರಿ ಹಲವೆಡೆ ಆರೋಪಿಯ ಮಾಹಿತಿ ಸಂಗ್ರಹ ಮಾಡಲಾಗಿದೆ. ಜೈಲಿನಲ್ಲಿ ಇರುವ ಉಗ್ರರ ಸೂಚನೆ ಮೇರೆಗೆ ಈ ಕೃತ್ಯ ನಡೆಸಲಾಗಿದೆ ಎಂಬ ಬಗ್ಗೆ ಬಲವಾದ ಶಂಕೆ ವ್ಯಕ್ತವಾಗಿದೆ. ಬೆಂಗಳೂರು ಜೈಲಿನಲ್ಲಿರುವ ಉಗ್ರರ ಸಂಪೂರ್ಣ ಸಂಪರ್ಕ ಮಾಹಿತಿ ಸಂಗ್ರಹಿಸುತ್ತಿರುವ ಪೊಲೀಸರು ಇದೊಂದು ಉಗ್ರ ಸಂಘಟನೆ ಅಥವಾ ನಿಷೇಧಿತ ಸಂಘಟನೆ ಕೃತ್ಯ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.
undefined
ರಾಮೇಶ್ವರಂ ಕೆಫೆ ಸ್ಫೋಟಿಸಿದವ ಕೇರಳ, ಉಡುಪಿ-ಮಂಗಳೂರು ಭಾಗದವನು ಎಂಬ ಶಂಕೆ!
ಹೀಗಾಗಿ ನಿಷೇದಿತ ಸಂಘಟನೆಗಳ ಕಾರ್ಯಕರ್ತರ ಬಂಧನ ಸಂದರ್ಭದಲ್ಲಿ ನಾಪತ್ತೆಯಾದವರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಯಾರ್ಯಾರು ನಾಪತ್ತೆ ಆಗಿದ್ರು...? ಅವರ ಬಗ್ಗೆ ಮತ್ತಷ್ಟು ಮಾಹಿತಿ ಸಂಗ್ರಹಿಸುತ್ತಿದ್ದು, ಈಗ ಅವರು ಇರುವ ಸ್ಥಳದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಅಥವಾ ನಿಷೇಧಿತ ಸಂಘಟನೆಯ ಗುರುತಿಸಿಕೊಂಡು ನಾಪತ್ತೆ ಆದವರ ಪೋಟೋದೊಂದಿಗೆ ಶಂಕಿತನ ಲಿಂಕ್ ಸಾಧ್ಯತೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಬಿಎಂಟಿಸಿ ಬಸ್‌ನಿಂದ ಸಿಕ್ತಾ ಶಂಕಿತನ ಸುಳಿವು?
ರಾಮೇಶ್ವರ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣದ ಉಗ್ರ ಬಿಎಂಟಿಸಿ ಬಸ್ಸಲ್ಲಿ ಓಡಾಟ ಮಾಡಿದ್ದ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ಬಿಎಂಟಿಸಿ ಅಧಿಕಾರಿಗಳಿಂದ ಪೊಲೀಸ್ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ. ಶಂಕಿತ ಓಡಾಡಿರುವ ಬಿಎಂಟಿಸಿ ಬಸ್ ಆಧರಿಸಿ ಸಿಸಿ ಟಿವಿ ವಿಷ್ಯುವಲ್ಸ್ ಕೊಡುವಂತೆ ಬಿಎಂಟಿಸಿಯ ಭದ್ರತೆ ವಿಭಾಗಕ್ಕೆ ಪೊಲೀಸರು ಮನವಿ ಮಾಡಿದ್ದಾರೆ. ಪೊಲೀಸರು ಮಾಹಿತಿ ಕೇಳ್ತಾ ಇದ್ದಾರೆ ಮಾಹಿತಿ ಕೊಡುತ್ತೇವೆ. ಎಲ್ಲಾ ಚೆಕ್ ಮಾಡ್ತಾ ಇದ್ದೇವೆ ಎಂದು ಬಿಎಂಟಿಸಿ ಭದ್ರತಾ ವಿಭಾಗದ ಅಧಿಕಾರಿಗಳು ಏಷ್ಯಾನೆಟ್ ಸುವರ್ಣನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.
ಬೆಂಗಳೂರು ಬಾಂಬ್ ಸ್ಫೋಟ, ರಾಮೇಶ್ವರಂ ಕೆಫೆಯೇ ಟಾರ್ಗೆಟ್ ಯಾಕೆ?
ಬಿಎಂಟಿಸಿ ಬಸ್‌ನಿಂದ ಸಿಕ್ತಾ ಶಂಕಿತನ ಸುಳಿವು?
ರಾಮೇಶ್ವರ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣದ ಉಗ್ರ ಬಿಎಂಟಿಸಿ ಬಸ್ಸಲ್ಲಿ ಓಡಾಟ ಮಾಡಿದ್ದ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ಬಿಎಂಟಿಸಿ ಅಧಿಕಾರಿಗಳಿಂದ ಪೊಲೀಸ್ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ. ಶಂಕಿತ ಓಡಾಡಿರುವ ಬಿಎಂಟಿಸಿ ಬಸ್ ಆಧರಿಸಿ ಸಿಸಿ ಟಿವಿ ವಿಷ್ಯುವಲ್ಸ್ ಕೊಡುವಂತೆ ಬಿಎಂಟಿಸಿಯ ಭದ್ರತೆ ವಿಭಾಗಕ್ಕೆ ಪೊಲೀಸರು ಮನವಿ ಮಾಡಿದ್ದಾರೆ. ಪೊಲೀಸರು ಮಾಹಿತಿ ಕೇಳ್ತಾ ಇದ್ದಾರೆ ಮಾಹಿತಿ ಕೊಡುತ್ತೇವೆ. ಎಲ್ಲಾ ಚೆಕ್ ಮಾಡ್ತಾ ಇದ್ದೇವೆ ಎಂದು ಬಿಎಂಟಿಸಿ ಭದ್ರತಾ ವಿಭಾಗದ ಅಧಿಕಾರಿಗಳು ಏಷ್ಯಾನೆಟ್ ಸುವರ್ಣನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.
ಶಂಕಿತ ವ್ಯಕ್ತಿ ಕುಂದಲಹಳ್ಳಿ ಯಿಂದ ಕಾಡುಗೋಡಿಗೆ ಹೊರಡುವ ಬಸ್ ಹತ್ತಿದ್ದಾನೆ. CMRIT ಕಾಲೇಜ್ ಬಸ್ ಸ್ಟಾಪ್ ನಲ್ಲಿ ಇಳಿದು ನಂತರ 300 ಮೀಟರ್ ನಡೆದುಕೊಂಡು ಹೋಗಿದ್ದಾನೆ. ಹೀಗಾಗಿ ಅಕ್ಕಪಕ್ಕದ ಸುಮಾರು 300ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಸಿಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.