ಕಾವೇರಿ ನದಿಯಲ್ಲಿ ಅಪರಿಚಿತ ಶವ ಪತ್ತೆ: ಹಲವು ಅನುಮಾನಗಳಿಗೆ ಕಾರಣ? ತನಿಖೆ ಶುರು!

Published : Apr 22, 2026, 06:15 PM IST
Chamarajanagar

ಸಾರಾಂಶ

ಸುಮಾರು ಒಂದು ತಿಂಗಳ ಹಿಂದೆ ಸಾವನ್ನಪ್ಪಿರುವ 50 ರಿಂದ 70 ವರ್ಷದ ಅಪರಿಚಿತ ಪುರುಷನ ಶವವು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಬೂದುಗಟ್ಟೆ ದೊಡ್ಡಿಯ ಕಾವೇರಿ ನದಿಯ ಬಳಿ ಪತ್ತೆಯಾಗಿದೆ.

ವರದಿ: ಪುಟ್ಟರಾಜು. ಆರ್.ಸಿ ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.

ಚಾಮರಾಜನಗರ (ಏ.22): ಸುಮಾರು ಒಂದು ತಿಂಗಳ ಹಿಂದೆ ಸಾವನ್ನಪ್ಪಿರುವ 50 ರಿಂದ 70 ವರ್ಷದ ಅಪರಿಚಿತ ಪುರುಷನ ಶವವು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಬೂದುಗಟ್ಟೆ ದೊಡ್ಡಿಯ ಕಾವೇರಿ ನದಿಯ ಬಳಿ ಪತ್ತೆಯಾಗಿದ್ದು, ಸಂಪೂರ್ಣವಾಗಿ ದೇಹ ಕುಸಿದು ಮೂಳೆಗಳ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಾವೇರಿ ನದಿಯ ಮಧ್ಯಭಾಗದಲ್ಲಿ ಶವವೊಂದು ಬಿದ್ದಿರುವ ಫೋಟೋವನ್ನು ಬೆಂಗಳೂರಿನ ಪ್ರವಾಸಿಗನೊಬ್ಬನು ಮೊಬೈಲ್‌ನಲ್ಲಿ ಸೆರೆಹಿಡಿದು ಮೊಬೈಲ್‌ನಲ್ಲಿ ಹಾಕಿದ್ದರು.

ತಕ್ಷಣವೇ ಕಾರ್ಯಪ್ರವೃತ್ತರಾದ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಕಾವೇರಿ ನದಿಯ ಬಳಿ ಶವವನ್ನು ಹುಡುಕಲಾರಂಬಿಸಿದರು ಪತ್ತೆಯಾಗದ ಕಾರಣ ಅರಣ್ಯ ಇಲಾಖೆಯ ಸಿಬ್ಬಂದಿಗಳ ಜೊತೆ ಜಂಟಿ ಕಾರ್ಯಾಚರಣೆ ಮಾಡುವ ವೇಳೆ ಕಾವೇರಿನದಿಯ ಮಧ್ಯಭಾಗದಲ್ಲಿ ಶವ ದೊರೆತ್ತಿದ್ದು, ಒಂದು ತಿಂಗಳ ಹಿಂದೆ ಮೃತಪಟ್ಟಿದ್ದು ಮೃತದೇಹ ಸಂಪೂರ್ಣ ಕುಸಿದಿದ್ದು ಬರೀ ಮೂಳೆಗಳು ಮಾತ್ರ ಇದ್ದು, ಶವವು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ವಾರಸುದಾರರಿಗಾಗಿ ಹುಡುಕಾಟ

ಈ ಶವವು ಮದ್ಯಸೇವನೆ ಮಾಡಿ ಸಾವನ್ನಪ್ಪಿರಬಹುದೆಂದು ಇಲ್ಲಾ ನದಿಗೆ ಯಾರಾದರೂ ಕೊಲೆ ಮಾಡಿ ಬೀಸಾಡಿರಬಹುದು ಅಥವಾ ಆಕಸ್ಮಿಕವಾಗಿ ಜಾರಿ ಮೃತಪಟ್ಟಿರಬಹುದೆಂದು ಊಹಿಸಲಾಗಿದ್ದು, ನಿಖರ ಮಾಹಿತಿ ತನಿಖೆಯಿಂದಷ್ಟೆ ಹೊರ ಬರಬೇಕಿದೆ. ಅಪರಿಚಿತ ಶವ ಎಂದು ದೂರು ದಾಖಲಾಗಿದ್ದು, ವಾರಸುದಾರರಿಗಾಗಿ ಹುಡುಕಾಟ ನಡೆದಿದ್ದು, ಶವವನ್ನು ಚಾಮರಾಜನಗರ ಸಿಮ್ಸ್ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ. ಇದು ಕೊಲೆಯೋ ಆತ್ಮ*ಹತ್ಯೆಯೋ ತನಿಖೆಯಿಂದಷ್ಟೆ ತಿಳಿಯಬೇಕಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮನೆಯಲ್ಲೇ ಲೈಂ**ಕ ದೌರ್ಜನ್ಯವೆಸಗಿ IRS ಅಧಿಕಾರಿಯ ಪುತ್ರಿಯ ಭೀಕರ ಹತ್ಯೆ
ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!