ಚಾಮರಾಜನಗರದ ಜೆಎಸ್‌ಎಸ್ ಕಾಲೇಜ್ ಉಪನ್ಯಾಸಕಿ ಚಂದನಾ ಆತ್ಮಹತ್ಯೆಗೆ ಮುನ್ನ ಬರೆದುಕೊಂಡಿರುವ ಡೆತ್ ನೋಟ್ ಹಲವು ಪ್ರಶ್ನೆಗಳು ಉದ್ಭವಿಸಿವೆ.
ಚಾಮರಾಜನಗರ, (ಆಗಸ್ಟ್.10): ಚಾಮರಾಜನಗರದ ಜೆಎಸ್‌ಎಸ್ ಕಾಲೇಜ್ ಹಾಸ್ಟೆಲ್ನಲ್ಲಿ ಉಪನ್ಯಾಸಕಿ ಆತ್ಮಹತ್ಯೆ ಕೇಸ್ ಗೊಂದಲಕ್ಕೆ ಕಾರಣವಾಗಿದೆ.
ಹೌದು.... ಆಗಸ್ಟ್ 9ರಂದು ತಮ್ಮ ಬರ್ತ್ ಡೇ ದಿನವೇ ಉಪನ್ಯಾಸಕಿ ಚಂದನಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಆದ್ರೆ, ಆತ್ಮಹತ್ಯೆಗೆ ಮುನ್ನವೇ ಡೆತ್ ಬರೆದಿಟ್ಟಿದ್ದಾರೆ. ಡೆತ್ ನೋಟ್‌ನಲ್ಲಿ ತಮ್ಮೆಲ್ಲ ನೋವುಗಳನ್ನ ಹಂಚಿಕೊಂಡಿದ್ದಾರೆ.
undefined
ಕಾಲೇಜು ಉಪನ್ಯಾಸಕಿ ಆತ್ಮಹತ್ಯೆ: ಹುಟ್ಟು ಹಬ್ಬದಂದೇ ದುರಂತ ಅಂತ್ಯ
ಯಾರೂ ನನ್ನ ಅರ್ಥ ಮಾಡಿಕೊಳ್ಳುತ್ತಿಲ್ಲ. ನನ್ನ ಜೊತೆ ಒಬ್ಬೊಬ್ಬರು ಒಂದೊಂದು ಥರ ನಡೆದುಕೊಳ್ಳುತ್ತಿದ್ದೀರಾ? ಅಂತೆಲ್ಲಾ ಕಾಲೇಜು ಹಾಗೂ ಮನೆಯ ವಿಚಾರಗಳನ್ನ ಡೆತ್‌ನೋಟ್‌ನಲ್ಲಿ ಉಲ್ಲೇಖವಾಗಿದೆ. ಆದ್ರೆ, ಡೆತ್ ನೋಟು ಹಲವು ಗೊಂದಲಗಳನ್ನ ಮೂಡಿಸಿದೆ. ಅವರಿಗೆ ಯಾರಾದರೂ ತೊಂದರೆ ಕೊಡುತ್ತಿದ್ದರಾ? ಏನಾದ್ರೂ ಅವರ ಮೇಲೆ ಒತ್ತಡ ಹಾಕುತ್ತಿದ್ರಾ? ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಅಷ್ಟಕ್ಕೂ ಡೆತ್ ನೋಟ್‌ನಲ್ಲಿ ಏನೆಲ್ಲಾ ಬರೆದುಕೊಂಡಿದ್ದಾರೆ ಎನ್ನುವುದು ಈ ಕೆಳಗಿನಂತಿದೆ ನೋಡಿ.
ಡೆತ್‌ನೋಟ್‌ನಲ್ಲಿ ಏನಿದೆ?
ನನ್ನ ಸಾವಿಗೆ ನಾನೇ ಕಾರಣ. 'ಯಾಕೆ ಯಾರೂ ನನ್ನ ಅರ್ಥ ಮಾಡಿಕೊಳ್ಳುತ್ತಿಲ್ಲ. ನನ್ನ ಜೊತೆ ಒಬ್ಬೊಬ್ಬರು ಒಂದೊಂದು ಥರ ನಡೆದುಕೊಳ್ಳುತ್ತಿದ್ದೀರಾ? ನಾನು ಯಾರ ಪರ ಇರಲಿ, ಯಾರ ಮಾತು ಕೇಳಿಲಿ? ಎಂದು ಗೊತ್ತಾಗುತ್ತಿಲ್ಲ. ನಾನು ಏನು ಅಂದುಕೊಂಡರೂ ಮಾಡಲು ಆಗುತ್ತಿಲ್ಲ, ಮಾಡೋಕ್ಕೆ ಬಿಡುತ್ತಿಲ್ಲ. ಎಲ್ಲರೂ ಹೇಳಿದ್ದನ್ನು ಕೇಳಿ ಸಾಕಾಗಿದೆ. ಮುಂದೆ ಏನು ಮಾಡಬೇಕು? ಹೇಗೆ ಇರಬೇಕು? ಎಲ್ಲ ಪ್ರಶ್ನೆಯಾಗಿಯೇ ಉಳಿದಿದೆ. ನನ್ನ ಮೈಂಡ್ ಫುಲ್ ಬ್ಲ್ಯಾಂಕ್ ಆಗಿದೆ. ಏನು ಮಾಡೋಕು ಆಗುತ್ತಿಲ್ಲ'.
'ಈ ಕಡೆ ಕಾಲೇಜು, ಆ ಕಡೆ ಮನೆ. ಎರಡೂ ಕಡೆ ಒಟ್ಟಿಗೆ ಹೇಗೆ ಇರೋದಿಕ್ಕೆ ಆಗುತ್ತೆ? ಕೆಲಸ ಹೊಸದು. ಮಕ್ಕಳಿಗೆ ಅರ್ಥ ಆಗೋ ಹಾಗೆ ಪಾಠ ಮಾಡಬೇಕು, ಓದಬೇಕು. ನೋಟ್ಸ್ ಮಾಡಬೇಕು. ನಾನು ಓದೋದು ನಿಧಾನ. ಟೈಂ ಹೇಗೆ ಮ್ಯಾನೇಜ್ ಮಾಡಬೇಕು ಗೊತ್ತಾಗುತ್ತಿಲ್ಲ. ಅದಕ್ಕೆ ನಾನು ಮನೆಗೂ ಬರ್ತಾ ಇರಲಿಲ್ಲ. ಸಾರಿ ಪಪ್ಪಾ.. ನನಗೆ ಆಗುತ್ತಿಲ್ಲ. ಯಾರೂ ನನ್ನ ಅರ್ಥ ಮಾಡಿಕೊಳ್ಳುತ್ತಿಲ್ಲ. ನಿಮ್ಮದೇ ಆದ ದೃಷ್ಟಿಯಲ್ಲಿ ನೋಡ್ತೀರ. ಸಾರಿ ಫ್ರೆಂಡ್ಸ್ ಆಲ್ ನಾನು ಯಾರನ್ನೂ ಪ್ರೀತಿ ಮಾಡ್ತಿಲ್ಲ. ನನ್ನ ಸಾವಿಗೆ ನಾನೇ ಕಾರಣ'.
'ಮೇಘ ಅಕ್ಕ ಯಾರಿಗೂ ಹಿಂಸೆ ಕೊಡಬೇಡ. ಅನು ಅಕ್ಕ ಸಾರಿ ಕಣೆ, ನೀನು ನನಗೆ ಎಲ್ಲ ಮಾಡಿದ್ರೂ ಯೂ ಆರ್ ಮೈ ಬೆಸ್ಟ್. ನಿತ್ಯ ಚೆನ್ನಾಗಿ ಓದಿ ಒಳ್ಳೆಯ ಕೆಲಸ ತೆಗೆದುಕೊ. ಈ ಕೆಲಸ ಬೇಡ. ಆರೋಗ್ಯ ಹಾಳಾಗುತ್ತೆ. ಅಜ್ಜಿ, ಅಮ್ಮ ಎಲ್ಲರೂ ಚೆನ್ನಾಗಿರಿ. ರಮ್ಯ ಮೇಡಂ ಸಾರಿ… ಮಿಸ್ ಯು ಆಲ್' ಎಂದು ಡೆತ್‌ನೋಟ್‌ನಲ್ಲಿ ಇದೆ.
ಈ ಮೇಲಿನ ಡೆತ್ ನೋಟ್ ನೋಡಿದ್ರೆ ಹಲವು ಪ್ರಶ್ನೆಗಳು ಉದ್ಭವಿಸಿದ್ದು, ಇದನ್ನು ಸ್ವಯಂ ಪ್ರೇರಿತ ಆತ್ಮಹತ್ಯೆಯೋ? ಇಲ್ಲ ಮನೆ ಹಾಗೂ ಕಾಲೇಜುಗಳಲ್ಲಿನ ಒತ್ತಡಗಳಿಂದ ಸುಸೈಡ್ ಮಾಡಿಕೊಂಡಿದ್ದಾರೋ ಎನ್ನುವುದು ಪೊಲೀಸರಿಗೆ ಒಂದು ತಿಳಿಯದಂತಾಗಿದೆ.