ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಪ್ರತ್ಯುಶಾ ಗರಿಮೆಲ್ಲಾ ಆತ್ಮಹತ್ಯೆ!

Published : Jun 11, 2022, 09:37 PM ISTUpdated : Jun 11, 2022, 09:47 PM IST
ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಪ್ರತ್ಯುಶಾ ಗರಿಮೆಲ್ಲಾ ಆತ್ಮಹತ್ಯೆ!

ಸಾರಾಂಶ

ಸೆಲೆಬ್ರಿಟಿ ಫ್ಯಾಶನ್ ಡಿಸೈನರ್ ಪ್ರತ್ಯುಶಾ ಗರಿಮೆಲ್ಲಾ ಶನಿವಾರ ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮನೆಯ ಬಾತ್ ರೂಮ್ ನಲ್ಲಿ ಅವರ ಶವ ಪತ್ತೆಯಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಪೊಲೀಸರು ಇದು ಆತ್ಮಹತ್ಯೆ ಇರಬಹುದು ಎಂದು ಹೇಳಿದ್ದಾರೆ.  

ಹೈದರಾಬಾದ್ (ಜೂನ್ 11): ಟಾಲಿವುಡ್ ಖ್ಯಾತ ಫ್ಯಾಷನ್ ಡಿಸೈನರ್  ಪ್ರತ್ಯುಶಾ ಗರಿಮೆಲ್ಲಾ (Prathyusha Garimella) ಅವರು ಹೈದರಾಬಾದ್‌ನ (hyderabad) ಬಂಜಾರಾ ಹಿಲ್ಸ್‌ನಲ್ಲಿರುವ (Banjara Hills ) ತಮ್ಮ ಅಪಾರ್ಟ್‌ಮೆಂಟ್‌ನ ಬಾತ್ ರೂಮ್ ನಲ್ಲಿ ಶನಿವಾರ ಶವವಾಗಿ ಪತ್ತೆಯಾಗಿದ್ದಾರೆ. ಆಕೆಯ ಕೋಣೆಯಲ್ಲಿ ಕಾರ್ಬನ್ ಮಾನಾಕ್ಸೈಡ್ (carbon monoxide) ಬಾಟಲ್ ಪತ್ತೆಯಾಗಿದ್ದು, ಇದನ್ನು ಉಸಿರಾಟ ಮಾಡಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ.

35 ವರ್ಷದ ಪ್ರತ್ಯುಶಾ ಗರಿಮೆಲ್ಲಾ ಆತ್ಮಹತ್ಯೆಯನ್ನು ಪೊಲೀಸರು (Police) ಶಂಕಾಸ್ಪದ ಸಾವು ಎಂದು ದೂರು ದಾಖಲಿಸಿಕೊಂಡಿದ್ದು, ಆಕೆಯ ಕುಟುಂಬ ಹಾಗೂ ಸ್ನೇಹಿತರಿಗೆ ಈ ಮಾಹಿತಿ ತಿಳಿಸಲಾಗಿದೆ. ಪ್ರತ್ಯುಶಾ ಖಿನ್ನತೆಯಿಂದ (depression) ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ತನಿಖೆ ನಡೆಯುತ್ತಿದ್ದು, ಆಕೆಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

ಅಮೆರಿಕದಲ್ಲಿ ಫ್ಯಾಷನ್ ಡಿಸೈನಿಂಗ್ ವ್ಯಾಸಂಗ ಮಾಡಿದ್ದ ಪ್ರತ್ಯುಶಾ, ಹೈದರಾಬಾದ್‌ನಲ್ಲಿ ವೃತ್ತಿ ಜೀವನ ಆರಂಭಿಸಿದ್ದರು. 2013ರಲ್ಲಿ ತಮ್ಮನೇ ಹೆಸರಿನಲ್ಲಿ ಫ್ಯಾಷನ್ ಲೇಬಲ್ ಪ್ರಾರಂಭ ಮಾಡಿದ ಬಳಿಕ ಆಕೆ ಯಶ್ಸಸಿನ ಉತ್ತುಂಗಕ್ಕೇರಿದ್ದರು. ಟಾಲಿವುಡ್ ನ ಹಲವಾರು ಜನಪ್ರಿಯ ಸೆಲೆಬ್ರಿಟಿಗಳು, ಬಾಲಿವುಡ್ ನ ಕೆಲ ಪ್ರಖ್ಯಾತರ ಜೊತೆಗೂ ಆಕೆ ಕೆಲಸ ಮಾಡಿದ್ದು. ಈಕೆಯ ಕ್ಲೈಂಟ್ ಲಿಸ್ಟ್ ನಲ್ಲಿ ದೇಶದ ಕೆಲ ಗಣ್ಯವ್ಯಕ್ತಿಗಳ ಹೆಸರೂ ಇದ್ದವು. ಆಕೆಯ ಮಲಗುವ ಕೋಣೆಯಿಂದ ಕಾರ್ಬನ್ ಮಾನಾಕ್ಸೈಡ್ ಸಿಲಿಂಡರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 

ಕಳೆದ ವರ್ಷ, ಪ್ರತ್ಯುಶಾ ಫೆಮಿನಾ (Femina) ಮ್ಯಾಗಜೀನ್ ಗೆ ನೀಡಿದ್ದ ಸಂದರ್ಶನದಲ್ಲಿ, ತನ್ನ ಫ್ಯಾಶನ್ ವೃತ್ತಿಜೀವನವನ್ನು ಪ್ರಾರಂಭಿಸುವ ಮೊದಲು, ಮಾಸ್ಟರ್ಸ್ ಸಲುವಾಗಿ ಅಮೆರಿಕ ( USA ) ಮತ್ತು ಇಂಗ್ಲೆಂಡ್ ನಲ್ಲಿ ( England)  ಅಧ್ಯಯನ ಮಾಡಿದ್ದಾಗಿ ತಿಳಿಸಿದ್ದರು. ವಿದ್ಯಾಭ್ಯಾಸ ಮುಗಿಸಿ ತವರಿಗೆ ಬಂದಾಗ ತಂದೆಯ ಎಲ್ ಇಡಿ ( LED ) ಉತ್ಪಾದನಾ ಕಂಪನಿಯಲ್ಲಿ ಕೆಲಸ ಆರಂಭಿಸಿದ್ದರು. ಆದರೆ, ಕೆಲ ವರ್ಷ ಮಾತ್ರವೇ ಇಲ್ಲಿ ಕೆಲಸ ಮಾಡಿದ್ದ ಪ್ರತ್ಯುಶಾ ಬಳಿಕ ಫ್ಯಾಷನ್ ಜಗತ್ತಿಗೆ ಧುಮುಕಿದ್ದರು.

ಆತ್ಮಹತ್ಯೆಗೆ ಮುಂದಾದ ಪ್ರೇಮಿಗಳು: ಕೊನೆ ಕ್ಷಣದಲ್ಲಿ ಕಹಾನಿ ಮೇ ಟ್ವಿಸ್ಟ್: ದೂರು ದಾಖಲು

ಫ್ಯಾಶನ್ ಡಿಸೈನರ್ ಸಾವಿನ ಸುದ್ದಿಯನ್ನು ಭದ್ರತಾ ಸಿಬ್ಬಂದಿ ( security guards ) ಪೊಲೀಸರಿಗೆ ನೀಡಿದ್ದಾರೆ. ಬಹಿರಂಗವಾದ ಮಾಹಿತಿಯ ಪ್ರಕಾರ, ಶನಿವಾರ ಮಧ್ಯಾಹ್ನ, ಭದ್ರತಾ ಸಿಬ್ಬಂದಿ ಏನೂ ಅಹಿತಕರವಾಗಿರುವುದು ನಡೆದಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರತ್ಯುಶಾ ಅವರ ಮನೆಯಿಂದ ಯಾವುದೇ ಪ್ರತಿಕ್ರಿಯೆ ಬರದ ಹಿನ್ನಲೆಯಲ್ಲಿ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ಪೊಲೀಸರು ಆತನ ಮನೆಯ ಬಾಗಿಲು ಒಡೆದು ಒಳ ಪ್ರವೇಶಿಸಿ ನೋಡಿದಾಗ ಪ್ರತ್ಯುಶಾ ಶವ ಬಾತ್ ರೂಂನಲ್ಲಿ ಪತ್ತೆಯಾಗಿದೆ.

ಮೊಬೈಲ್ ಅಲ್ಲಿ ಗೇಮ್ ಆಡ್ಬೇಡ ಅಂದ್ಲು ತಾಯಿ, ನನಗೆ ಈ ಜಗತ್ತೇ ಬೇಡ ಅಂತಾ ಸೂಸೈಡ್ ಮಾಡ್ಕೊಂಡ ಮಗ!

ದೇಶದ ಅಗ್ರ ಫ್ಯಾಷನ್ ಡಿಸೈನರ್: ಭಾರತದ ಅತ್ಯಂತ ಪ್ರಮುಖ ಫ್ಯಾಷನ್ ಡಿಸೈನರ್ ಗಳ ಸಾಲಿನಲ್ಲಿ ನಿಲ್ಲುವ ಪ್ರತ್ಯುಶಾ ಗರಿಮೆಲ್ಲಾ, ತಮ್ಮದೇ ಹೆಸರಿನ ಬ್ರ್ಯಾಂಡ್ ನೇಮ್ ಹೊಂದಿದ್ದಲ್ಲದೆ, ಹೈದರಾಬಾದ್ ಹಾಗೂ ಮುಂಬೈನಂಥ ಪ್ರತಿಷ್ಠಿತ ನಗರಗಳಲ್ಲಿ ಮಳಿಗೆಗಳನ್ನು ಹೊಂದಿದ್ದರು. ಅದಲ್ಲದೆ, ಸಾಮಾಜಿಕ ಮಾಧ್ಯಮಗಳಲ್ಲೂ ಆಕೆಗೆ ಉತ್ತಮ ಬೆಂಬಲ ವ್ಯಕ್ತವಾಗಿತ್ತು. ಆಕೆಯ ಭಾರತೀಯ ಔಟ್ ಫಿಟ್ ಗಳನ್ನು ಅಭಿಮಾನಿಗಳು ಸದಾಕಾಲ ಮೆಚ್ಚುತ್ತಿದ್ದರು.

ರವೀನಾ ಟಂಡನ್, ಪರಿಣಿತಿ ಚೋಪ್ರಾ, ಹುಮಾ ಖುರೇಷಿ, ಕಾಜೋಲ್, ಶ್ರೇಯಾ ಸರಣ್, ಕಾಜಲ್ ಅಗರ್ವಾಲ್, ಮಾಧುರಿ ದೀಕ್ಷಿತ್, ಜೂಹಿ ಚಾವ್ಲಾ, ಗೌಹರ್ ಖಾನ್, ನೇಹಾ ಧೂಪಿಯಾ, ಭೂಮಿ ಫಡ್ನೇಕರ್ ಸೇರಿದಂತೆ ಹಲವರ ಜೊತೆ ಪ್ರತ್ಯುಶಾ ಕೆಲಸ ಮಾಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು