Crime News: ಮೊಬೈಲ್ ಜಾಸ್ತಿ ಬಳಸಬೇಡ ಎಂದಿದ್ದಕ್ಕೆ ಅತ್ತೆಯನ್ನೇ ಕೊಂದ ಸೊಸೆ

By Suvarna NewsFirst Published Jun 11, 2022, 7:59 PM IST
Highlights

ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ತಡರಾತ್ರಿ ಮೊಬೈಲ್ ಫೋನಿನಲ್ಲಿ ನಿರಂತರವಾಗಿ ಮಾತನಾಡುವುದನ್ನು ವಿರೋಧಿಸಿದ್ದಕ್ಕಾಗಿ ಅತ್ತೆಯನ್ನು ಕೊಂದಿದ್ದಾರೆ. 

ಮಧ್ಯಪ್ರದೇಶ (ಜೂ. 11): ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ತಡರಾತ್ರಿ ಮೊಬೈಲ್ ಫೋನಿನಲ್ಲಿ ನಿರಂತರವಾಗಿ ಮಾತನಾಡುವುದನ್ನು ವಿರೋಧಿಸಿದ್ದಕ್ಕಾಗಿ ಅತ್ತೆಯನ್ನೇ ಕೊಂದಿದ್ದಾರೆ. ಮೃತನ ಮಗ ಅಜಯ್ ಬರ್ಮನ್ ತನ್ನ ತಾಯಿಯ ಅನುಮಾನಾಸ್ಪದ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಾಗ ವಿಷಯ ಬೆಳಕಿಗೆ ಬಂದಿದೆ. ಸ್ಥಳಕ್ಕಾಗಮಿಸಿದ ಪೊಲೀಸರಿಗೆ ಗಾಯದ ಗುರುತುಗಳಿದ್ದ ಮೃತದೇಹ ಪತ್ತೆಯಾಗಿದೆ.

"ತಾನು ಕೆಲಸದಲ್ಲಿದ್ದ ಸಮಯದಲ್ಲಿ ಹೆಂಡತಿ ಕರೆ ಮಾಡಿದ್ದಳು ಹಾಗೂ ತನ್ನ ತಾಯಿ ಗಾಯಗೊಂಡ ಸ್ಥಿತಿಯಲ್ಲಿ ಹೊರಗಿನಿಂದ ಮನೆಗೆ ಬಂದಿದ್ದಾಳೆ ಎಂದು ತಿಳಿಸಿದ್ದಳು" ಎಂದು ತನಿಖೆಯ ವೇಳೆ ಅಜಯ್‌ ತಿಳಿಸಿದ್ದಾರೆ. ಹೀಗಾಗಿ ತಕ್ಷಣ ಮನೆಗೆ ತಲುಪಿ ಪರೀಶಿಲಿಸಿದಾಗ ತಾಯಿ ಅದಗಾಲೇ ತೀರಿಕೊಂಡಿದ್ದರು ಎಂದು ಅಜಯ್‌ ಹೇಳಿದ್ದಾರೆ. 

ತಪ್ಪೊಪ್ಪಿಕೊಂಡ ಮಹಿಳೆ: ಪೊಲೀಸರು ಸೊಸೆಯನ್ನು ವಿಚಾರಣೆಗೊಳಪಡಿಸಿದಾಗ, ಆಕೆ ಆರಂಭದಲ್ಲಿ ಪೊಲೀಸರನ್ನು ದಾರಿತಪ್ಪಿಸಲು ಪ್ರಯತ್ನಿಸಿದಳು, ಆದರೆ ಮತ್ತಷ್ಟು ವಿಚಾರಣೆ ಬಳಿಕ ಅಳುತ್ತಾ ತನ್ನ ಅತ್ತೆಯನ್ನು ಕೊಂದ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. 

ಆಜ್ ತಕ್‌ನೊಂದಿಗೆ ಮಾತನಾಡಿದ ಹಟ್ಟಾ ಪೊಲೀಸ್ ಠಾಣೆಯ ಪ್ರಭಾರಿ ಎಚ್‌ಆರ್ ಪಾಂಡೆ, "ವಿಚಾರಣೆ ವೇಳೆ ಮಹಿಳೆ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ಅಲ್ಲದೇ ಮೊಬೈಲ್ ಫೋನ್ ಬಳಸುತ್ತಿರುವ ಬಗ್ಗೆ ಅತ್ತೆ ತನ್ನ ಪತಿಗೆ ಪದೇ ಪದೇ ದೂರು ನೀಡುತ್ತಿದ್ದರು ಎಂದು ಮಹಿಳೆ ತಿಳಿಸಿದ್ದಾರೆ" ಎಂದು ಹೇಳಿದರು. 

ಕೆಲ ದಿನಗಳ ಹಿಂದೆ ರಾತ್ರಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ ಅತ್ತೆ ಮತ್ತೆ ಪತಿಗೆ ದೂರು ನೀಡಿದ್ದು, ಬಳಿಕ ಆಕೆಯಿಂದ ಪತಿ ಫೋನ್ ಕಿತ್ತುಕೊಂಡಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಕುಪಿತಗೊಂಡ ಆಕೆ ಅತ್ತೆಯ ತಲೆಗೆ ಹೊಡೆದು ಕೊಂದು ಹಾಕಿದ್ದಾಳೆ. ನಂತರ ಇದರಿಂದ ಪಾರಾಗಲು ಕಥೆಯೊಂದನ್ನು ಹೆಣೆದಿದ್ದಾಳೆ. ಆದರೆ, ಇದೀಗ ಮಹಿಳೆ ಬಣ್ಣ ಬಯಾಲಾಗಿದ್ದು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ‘ಹೋಟೆಲ್‌ಗೆ ಬಾ’: ನಕಲಿ ಖಾತೆ ತೆರದು ಪತಿಯೊಂದಿಗೇ ಚಾಟ್: ಪತ್ನಿಯ ಖತರ್ನಾಕ್‌ ಐಡಿಯಾಗೆ ದಂಗಾದ ಪೊಲೀಸಪ್ಪ

ಇದನ್ನೂ ಓದಿ: ಪ್ರಿಯಕರನ ಜತೆ ಸೇರಿ ತಾಯಿಗೆ ಚೂರಿ ಇರಿದ ಮಗಳು

click me!