ಭೋಪಾಲ್: ಕೆಲಸದಾಕೆಯೊಬ್ಬಳು ಮಗುವನ್ನು ಥಳಿಸುತ್ತಿರುವ ವಿಡಿಯೋವೊಂದು ಮನೆಯಲ್ಲಿ ಅಳವಡಿಸಿದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಪೋಷಕರನ್ನು ಬೆಚ್ಚಿ ಬೀಳಿಸುವಂತಿದೆ. ಮಧ್ಯಪ್ರದೇಶದ ಜಬಲ್ಪುರದಲ್ಲಿ ಈ ಭಯಾನಕ ಅಮಾನವೀಯ ಘಟನೆ ನಡೆದಿದೆ. ಅಪ್ಪ ಅಮ್ಮ ಇಬ್ಬರೂ ಉದ್ಯೋಗದಲ್ಲಿರುವ ವಿಭಕ್ತ ಕುಟುಂಬವಿರುವ ಇಂದಿನ ಕಾಲಘಟ್ಟದಲ್ಲಿ ಬಹುತೇಕ ಪೋಷಕರು ತಮ್ಮ ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ಹಣ ನೀಡಿ ಕೆಲಸದವನ್ನು ಇರಿಸಿಕೊಳ್ಳುತ್ತಾರೆ. ಅವರಿಗೆ ಸಂಬಳದ ಜೊತೆ ಎಲ್ಲಾ ಸವಲತ್ತನ್ನು ನೀಡಿ ಮಗುವನ್ನು ನೋಡಿಕೊಳ್ಳುವಂತೆ ಹೇಳುತ್ತಾರೆ. ಆದರೆ ಅವರ ಮಧ್ಯೆ ನಮ್ಮ ಮಕ್ಕಳು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಈಗ ಮೂಡಿದೆ. ಈ ವಿಡಿಯೋ ನೋಡಿದ ಬಹುತೇಕ ಪೋಷಕರು ಬೆಚ್ಚಿ ಬೀಳುವುದಂತೂ ಗ್ಯಾರಂಟಿ. ಇದೇ ರೀತಿ ಮನೆಯಲ್ಲಿ ತಮ್ಮ ಮಕ್ಕಳನ್ನು ಕೆಲಸದವರೊಂದಿಗೆ ಬಿಟ್ಟು ಬಂದಿರುವ ಪೋಷಕರು ಈ ಘಟನೆ ನೋಡಿ ಒಂದು ಕ್ಷಣ ಕುಳಿತಲ್ಲೇ ಬೆವರಿದಲ್ಲಿ ಅಚ್ಚರಿ ಏನಿಲ್ಲ.
ಮಧ್ಯಪ್ರದೇಶದ (Madhya Pradesh) ಜಬಲ್ಪುರದಲ್ಲಿ (Jabalpur)ನಡೆದ ಈ ಅಮಾನವೀಯ ಘಟನೆಯಲ್ಲಿ ಮಗುವಿನ ಇಬ್ಬರೂ ಪೋಷಕರು ಕೂಡ ಉದ್ಯೋಗಿಗಳೇ. ಈ ಕಾರಣಕ್ಕೆ ಅವರು ಮಾಸಿಕ ಐದು ಸಾವಿರ ರೂ ವೇತನ ನೀಡಿ ಕೆಲಸದಾಕೆಯೊಬ್ಬಳನ್ನು ಮಗುವನ್ನು ನೋಡಿಕೊಳ್ಳುವ ಸಲುವಾಗಿ ನೇಮಿಸಿದ್ದರು. ಆರಂಭದಲ್ಲಿ ಬಾಲಕನ ಪೋಷಕರು ಎರಡು ವರ್ಷದ ಮಾತು ಬಾರದ ಮಗುವಿನಲ್ಲಾದ ಬದಲಾವಣೆಯನ್ನು ಗಮನಿಸಿದರು. ಅಂಬೆಗಾಲಿಡುತ್ತಾ ಸಾಗುವ ಮಗುವದಿನದಿಂದ ದಿನಕ್ಕೆ ಚುರುಕುತನ ಚಟುವಟಿಕೆ ಕಡಿಮೆಗೊಳಿಸಿತ್ತು ಅಲ್ಲದೇ ಕೃಶವಾಗುತ್ತ ಸಾಗಿತ್ತು. ಇದಾಗಿ ಸ್ವಲ್ಪ ದಿನಕ್ಕೆ ಮಗುವಿನ ಖಾಸಗಿ ಭಾಗ ಊದಿಕೊಂಡಿದ್ದನ್ನು ಗಮನಿಸಿದ ಪೋಷಕರು ಮಗುವನ್ನು ವೈದ್ಯರ ಬಳಿ ಕರೆದೊಯ್ದಿದ್ದಾರೆ. ಈ ವೇಳೆ ಮಗುವಿಗೆ ಚಿತ್ರಹಿಂಸೆ ನೀಡಲಾಗಿದೆ ಎಂಬುದು ಖಚಿತವಾಗಿದೆ. ಆದರೆ ಕೆಲಸದವಳು ಈ ರೀತಿ ಮಾಡಲಾರಳು ಎಂಬ ವಿಶ್ವಾಸದಲ್ಲಿದ್ದ ಅವು ಯಾರೂ ಈ ಕೃತ್ಯವೆಸಗಿರಬಹುದು ಎಂದು ಅರ್ಥ ಮಾಡಿಕೊಳ್ಳಲಾಗದೇ ಕೊನೆಯದಾಗಿ ಮನೆಯಲ್ಲಿ ಸಿಸಿಟಿವಿ ಅಳವಡಿಸಿದ್ದಾರೆ. ಆದರೆ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಕಂಡು ಪೋಷಕರು ದಂಗಾಗಿದ್ದರು.
ಚಡ್ಡಿಯಲ್ಲಿ ಸೂಸು ಮಾಡಿದ ಮಗುವಿಗೆ ಚಾಕುವಿನಿಂದ ಹಲ್ಲೆ
ಸಿಸಿಟಿವಿ ದೃಶ್ಯದಲ್ಲಿ ಮಗುವಿನ ಖಾಸಗಿ ಭಾಗದ ಮೇಲೆ ಮಹಿಳೆ ಹಲ್ಲೆ ಮಾಡುವುದು. ಪುಟ್ಟ ಮಗುವಿಗೆ ಕೆನ್ನೆಗೆ ಬಾರಿಸುವುದು, ಮಗುವನ್ನು ಕತ್ತಿನಲ್ಲಿ ಹಿಡಿದು ಎತ್ತುತ್ತಿರುವುದು ಮುಂತಾದ ಭಯಾನಕ ದೃಶ್ಯಗಳು ಕ್ಯಾಮರಾದಲ್ಲಿ ಸೆರೆ ಆಗಿದೆ. ಹೀಗೆ ಮಗುವಿನ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ ಕೆಲಸದಾಕೆಯನ್ನು ರಜಿನಿ ಚೌಧರಿ ಎಂದು ಗುರುತಿಸಲಾಗಿದೆ. ಈಕೆಗೆ ಮಾಸಿಕ 5,000 ರೂಪಾಯಿ ಪಾವತಿ ಮಾಡಲಾಗುತ್ತಿತ್ತು. ಅಲ್ಲದೇ ಕುಟುಂಬವು ಅಕೆಗೆ ಆಹಾರವನ್ನು ಸಹ ನೀಡುತ್ತಿದೆ. ತಂದೆ ತಾಯಿ ಕೆಲಸಕ್ಕೆ ಹೋದ ಮೇಲೆ ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಆಕೆಗೆ ವಹಿಸಲಾಗಿತ್ತು. ಆದರೆ ಅವಳು ಮಾಡಿದ ಕೆಲಸ ಎಲ್ಲರನ್ನು ಬೆಚ್ಚಿಬೀಳಿಸಿದೆ.
ವಿಸಿಟಿಂಗ್ ಕಾರ್ಡ್ ಹೊಂದಿದ ಮನೆ ಕೆಲಸದಾಕೆ ಈಗ ಸ್ಟಾರ್!
ಮಗುವಿನ ನಡವಳಿಕೆಯಲ್ಲಿ ಬದಲಾವಣೆಯಾದ ನಂತರ, ವೈದ್ಯರು ಹೇಳಿದ್ದನ್ನು ಅನುಸರಿಸಿ, ವೈದ್ಯರ ಸಲಹೆಯಂತೆ ಪೋಷಕರು ಮನೆಯಲ್ಲಿ ಸಿಸಿಟಿವಿ ಅಳವಡಿಸಿದ್ದರು. ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿದಾಗ, ಅವರು ನಂಬಿದ ದಾದಿ ತಮ್ಮ ಮಗನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ. ವೀಡಿಯೊದಲ್ಲಿ, ಆರೋಪಿ ಕೆಲಸದಾಕೆ ಮಗುವನ್ನು ಥಳಿಸುವುದು, ಕೂದಲಿನಿಂದ ಎಳೆದುಕೊಂಡು ಹೋಗುವುದನ್ನು ಕಾಣಬಹುದು. ಇದರ ನಂತರ, ಪೊಲೀಸರಿಗೆ ಮಾಹಿತಿ ನೀಡಲಾಯಿತು ಮತ್ತು ಕೆಲಸದಾಕೆಯ ವಿರುದ್ಧ ಕಾನೂನು ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ