
ಪ್ರಯಾಗ್ ರಾಜ್ (ಜೂನ್ 14): ಇದೊಂಥರ ವಿಚಿತ್ರ ಪ್ರಕರಣ. ಅತಿಯಾಗಿ ಪ್ರೀತಿ ಮಾಡುತ್ತಿದ್ದ ಹುಡುಗ-ಹುಡುಗಿ ಜೊತೆಯಾಗಿ ಇರಲು ಅನುಮತಿ ಸಿಕ್ಕಿರಲಿಲ್ಲ. ಅದಕ್ಕಾಗಿ ಬೇಸತ್ತಿದ್ದ ಜೋಡಿ ನದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದರು. ಅದರಂತೆ ಪ್ರಯಾಗ್ ರಾಜ್ ನ (Prayagraj) ನೈನಿ (Naini River) ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ (Bridge) ಮೇಲಿಂದ ಜಿಗಿದು ಪ್ರಾಣ ಬಿಡಲು ಬಯಸಿದ್ದರು.
ಒಂದೇ ಸಮಯದಲ್ಲಿ ಇಬ್ಬರು ನದಿಗೆ ಹಾರುವುದು ಅವರ ಯೋಜನೆಯಾಗಿತ್ತು. ಅದರಂತೆ ಹುಡುಗಿ ನದಿಗೆ ಹಾರಿದ್ದಾಳೆ. ಆದರೆ, ಹುಡುಗನಿಗೆ ಹೆದರಿಕೆಯಾಗಿ ಎಸ್ಕೇಪ್ ಆಗಿದ್ದಾನೆ. ಹುಡುಗ ತನ್ನ ಜೊತೆ ಆತ್ಮಹತ್ಯೆ ಮಾಡಿಕೊಳ್ಳದ ಕಾರಣ, ನದಿಗೆ ಬಿದ್ದಿದ್ದ ಹುಡುಗಿ ಈಜಿ ದಡ ಸೇರಿದ್ದಲ್ಲದೆ, ಹುಡುಗನ ವಿರುದ್ಧ ಪೊಲೀಸ್ ಸ್ಟೇಷನ್‌ನಲ್ಲಿ ದೂರು ಕೂಡ ದಾಖಲಿಸಿದ್ದಾಳೆ. ನನ್ನ ಹುಡುಗ ನನ್ನ ಜೊತೆ ನದಿಗೆ ಹಾರಿಲ್ಲ. ಆತ್ಮಹತ್ಯೆ ಟೈಮ್‌ನಲ್ಲೂ ಮೋಸ ಮಾಡಿದ್ದಾನೆ ಎಂದು ದೂರು ದಾಖಲು ಮಾಡಿದ್ದಾಳೆ.
ವಿಚಾರವೇನೆಂದರೆ, 32 ವರ್ಷದ ವಿವಾಹಿತ ಮಹಿಳೆ 30 ವರ್ಷದ ಹುಡುಗನ್ನು ಪ್ರೀತಿಸುತ್ತಿದ್ದಳು. ಇಬ್ಬರ ಪ್ರೀತಿ ಎಷ್ಟರಮಟ್ಟಿಗೆ ಬೆಳೆಯಿತೆಂದರೆ, ಬದುಕಿದರೆ ಒಟ್ಟಾಗಿ ಬದುಕುತ್ತೇವೆ. ಇಲ್ಲದಿದ್ದರೆ, ಜೊತೆಯಾಗಿ ಸಾಯುತ್ತೇವೆ ಎಂದು ತೀರ್ಮಾನ ಮಾಡಿದ್ದರು. ಆದರೆ, ತನ್ನ ಮಕ್ಕಳೊಂದಿಗೆ ಹುಡುಗಿ ಪುಣೆಗೆ ಹೋದಾಗ ಹುಡುಗ ಬಹಳ ಬೇಸರಗೊಂಡಿದ್ದ. ಎಷ್ಟೇ ಪ್ರಯತ್ನ ಮಾಡಿದರೂ ಆಕೆಯೊಂದಿಗೆ ಸಂಪರ್ಕ ಪಡೆಯುವುದು ಸಾಧ್ಯವಾಗಿರಲಿಲ್ಲ. ಇದರ ನಡುವೆ ಹುಡುಗನ ಮನೆಯವರು ಹುಡುಗನಿಗೆ ಮದುವೆಯನ್ನೂ ಮಾಡಿದ್ದರು. ಒಲ್ಲದ ಮನಸ್ಸಿನಿಂದಲೇ ಹುಡುಗ ಬೇರೆ ಹುಡುಗಿಗೆ ತಾಳಿ ಕಟ್ಟಿದ್ದ.
ಇದರ ನಡುವೆ ಪ್ರೀತಿಸುತ್ತಿದ್ದ ಹುಡುಗಿ ಪುಣೆಯಿಂದ ವಾಪಾಸಾಗಿದ್ದರು. ತಾನು ಪ್ರೀತಿ ಮಾಡುತ್ತಿದ್ದ ಹುಡುಗನಿಗೆ ಮದುವೆಯಾಗಿದ್ದ ಕೇಳಿ ಆಘಾತಗೊಂಡಿದ್ದಳು. ಸಮದುವೆಯಾದ ಹುಡುಗಿಗೆ ಡೈವೋರ್ಸ್ ಕೊಡು ಎಂದು ಪೀಡಿಸುತ್ತಿದ್ದ ಹುಡುಗಿ ಪ್ರತಿ ನಿತ್ಯ ಈ ವಿಚಾರವಾಗಿ ಹುಡುಗನೊಂದಿಗೆ ಗಲಾಟೆ ಮಾಡುತ್ತಿದ್ದಳು.
Davanagere; ಪತಿಯ ಕಿರುಕುಳಕ್ಕೆ ಬೇಸತ್ತು 11 ತಿಂಗಳ ಮಗು ಸಹಿತ ಅಮ್ಮ ಆತ್ಮಹತ್ಯೆ!
ವಿಚ್ಚೇದನ ನೀಡಿದ ಬಳಿಕ ನಾವಬ್ಬರೂ ಮದುವೆಯಾಗಿ ಹೊಸ ಬಾಳು ಆರಂಭಿಸುವ ಯೋಚನೆ ಹುಡುಗಿಗೆ ಇತ್ತು.ಆದರೆ, ಆಕೆಯ ಹುಡುಗ ಇದಕ್ಕೆ ಒಪ್ಪಿರಲಿಲ್ಲ. ಹಾಗಾಗಿ ಇಬ್ಬರೂ ಜೊತೆಯಾಗಿ ಸಾಯುವ ತೀರ್ಮಾನ ಮಾಡಿದ್ದರು. ನೈನಿ ನದುವೆ ಇತ್ತೀಚೆಗೆ ಕಟ್ಟಲಾಗಿದ್ದ ಹೊಸ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿ ಬಂದಿದ್ದರು. ಈ ವೇಳೆ ಹುಡುಗಿ, ನದಿಗೆ ಹಾರಿದರೆ, ಹುಡುಗ ಹಾರಿರಲಿಲ್ಲ. ಹುಡುಗಿ ನದಿಗೆ ಹಾರಿದ ಬೆನ್ನಲ್ಲೇ ಸೇತುವೆಯಿಂದ ಎಸ್ಕೇಪ್ ಆಗಿದ್ದಾನೆ.
ಸಿಗರೇಟ್ ಲೈಟರ್‌ಗಾಗಿ ಸಂಘರ್ಷ, ಅಂಗಡಿ ಮಾಲೀಕನ ಮೇಲೆ ಹಲ್ಲೆ!
ಇಡೀ ಪ್ರಯಾಗ್ ರಾಜ್ ನಲ್ಲಿಯೇ ಈ ಆತ್ಮಹತ್ಯೆ ಸುದ್ದಿ ವೈರಲ್ ಆಗಿದೆ. ತನ್ನ ಜತೆ ಆತ್ಮಹತ್ಯೆ ಮಾಡಿಕೊಳ್ಳದ ಹುಡುಗನ ಬಗ್ಗೆ ಪೊಲೀಸ್ ಸ್ಟೇಷನ್ ನಲ್ಲಿ ಹುಡುಗಿ ದೂರು ಕೊಟ್ಟಿರೋದು ಇದೇ ಮೊದಲ ಬಾರಿ. ಇಂಥದ್ದೊಂದು ದೂರು ಕಂಡು ಸ್ವತಃ ಪೊಲೀಸರು ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕಿಡ್ಗಂಜ್ ಪೋಲೀಸ್ (Kydganj police station) ಠಾಣೆಯಲ್ಲಿ ಹುಡುಗಿ ಎಫ್‌ಐಆರ್ ದಾಖಲಿಸಿದ್ದು, ಹುಡುಗನ ವಿರುದ್ಧ ಕೆಲವು ಗಂಭೀರ ಆರೋಪಗಳನ್ನೂ ಮಾಡಿದ್ದಾಳೆ. ಪೊಲೀಸರುಕೊಲೆ ಪ್ರಯತ್ನದ ಕೇಸ್ ದಾಖಲಿಸಿಕೊಂಡಿದ್ದಾರೆ. ಹುಡುಗ ತನ್ನ ಮೊಬೈಲ್ ಫೋನ್ ಅನ್ನು ಹಾಳು ಮಾಡಿದ್ದಾನೆ ಎಂದೂ ದೂರಿನಲ್ಲಿ ದಾಖಲಿಸಿದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ