ಡೊಮಿನೋಸ್ ಪಿಜ್ಜಾ ಮಹಿಳಾ ಉದ್ಯೋಗಿ ಮೇಲೆ ಯುವತಿಯರಿಂದಲೇ ಹಲ್ಲೆ

Published : Jun 15, 2022, 10:03 AM ISTUpdated : Jun 15, 2022, 10:11 AM IST
ಡೊಮಿನೋಸ್ ಪಿಜ್ಜಾ ಮಹಿಳಾ ಉದ್ಯೋಗಿ ಮೇಲೆ ಯುವತಿಯರಿಂದಲೇ ಹಲ್ಲೆ

ಸಾರಾಂಶ

ಮಹಿಳೆಯರ ಗುಂಪೊಂದು ಡೋಮಿನೋಸ್ ಯುವ ಮಹಿಳಾ ಉದ್ಯೋಗಿಯೊಬ್ಬರನ್ನು ಅಮಾನುಷವಾಗಿ ಥಳಿಸಿದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಆದರೆ ಈ ಹಲ್ಲೆಗೆ ಏನು ಕಾರಣ ಎಂದು ತಿಳಿದು ಬಂದಿಲ್ಲ.

ಇಂದೋರ್: ಮಹಿಳೆಯರ ಗುಂಪೊಂದು ಡೋಮಿನೋಸ್ ಯುವ ಮಹಿಳಾ ಉದ್ಯೋಗಿಯೊಬ್ಬರನ್ನು ಅಮಾನುಷವಾಗಿ ಥಳಿಸಿದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಆದರೆ ಈ ಹಲ್ಲೆಗೆ ಏನು ಕಾರಣ ಎಂದು ತಿಳಿದು ಬಂದಿಲ್ಲ. ಯುವತಿಯರು ಹಾಗೂ ಮಹಿಳೆಯರಿದ್ದ ನಾಲ್ವರ ಗುಂಪು ಡೊಮಿನೋಸ್‌ ಪಿಜ್ಜಾದ ಮಹಿಳಾ ಉದ್ಯೋಗಿ ಮೇಲೆ ದೊಣ್ಣೆಯಿಂದಲೂ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯುವತಿಯೊಬ್ಬಳ ಮೇಲೆ ಹೆಣ್ಣು ಮಕ್ಕಳೇ ಮಾಡಿದ ಹಲ್ಲೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ವಿಡಿಯೋದಲ್ಲಿ ಮಹಿಳೆಯರ ಹಲ್ಲೆಯಿಂದಾಗಿ ನೋವಿಗೊಳಗಾಗಿ ಯುವತಿ ಅಳುತ್ತಿರುವುದನ್ನು ಕಾಣಬಹುದು ಆದರೆ ಯಾರೊಬ್ಬರೂ ಆಕೆಯ ನೆರವಿಗೆ ಧಾವಿಸುವುದಿಲ್ಲ. ಈ ವೇಳೆ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಯುವತಿ ಹೇಳಿದಾಗ ಹಲ್ಲೆ ಮಾಡುತ್ತಿದ್ದ ಮಹಿಳೆಯೊಬ್ಬಳು ಹೋಗು ದೂರು ನೀಡು ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ಕೇಳಿಸುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಡೊಮಿನೋಸ್‌ ಪಿಜ್ಜಾದ ಮಹಿಳಾ ಉದ್ಯೋಗಿ ನಂದಿನಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

ನೀರು ತುಂಬಿದ ರಸ್ತೆಯಲ್ಲಿ ಪಾರ್ಸಲ್ ಹಿಡಿದು ನಿಂತ ಡಿಲೆವರಿ ಬಾಯ್! ಕಮೆಂಟ್ಸ್ ಚೆನ್ನಾಗಿವೆ

ಆರೋಪಿ ಮಹಿಳೆಯರು ಸ್ಥಳೀಯ ಗ್ಯಾಂಗ್‌ನ ಭಾಗವಾಗಿದ್ದಾರೆ. ಹಲ್ಲೆಯ ವಿಡಿಯೋವನ್ನು ಇದೇ ಗ್ಯಾಂಗ್ ಸ್ವತಃ ವೈರಲ್ ಮಾಡಿದೆ ಎನ್ನಲಾಗಿದೆ. ಈ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಗ್ಯಾಂಗ್‌ ಅಮಾನುಷವಾಗಿ ಥಳಿಸುತ್ತಿದ್ದರೂ ಯಾರೊಬ್ಬರು ಯುವತಿಯ ಸಹಾಯಕ್ಕೆ ಧಾವಿಸುವುದಿಲ್ಲ. ಕೊನೆಗೆ ಸಮೀಪದ ನಿವಾಸದಲ್ಲಿ ಬಚ್ಚಿಟ್ಟುಕೊಂಡು ಯುವತಿ ತನ್ನನ್ನು ತಾನು ರಕ್ಷಿಸಿಕೊಂಡಿದ್ದಾಳೆ. ಮಹಿಳೆಯರ ಗುಂಪು ಯುವತಿಯನ್ನು ನಿಂದಿಸಿ ಥಳಿಸಿದ್ದಾರೆ ಎಂದು ಸ್ಥಳೀಯ ಜನರು ಟೀಕಿಸಿದ್ದಾರೆ.

ಯುವತಿಗೆ ಥಳಿಸಿದ ನಾಲ್ವರು ಮಹಿಳೆಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯ ನಂತರ ಯುವತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ಪತ್ತೆಗೆ ಯತ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತುಂಬಾ ಪಿಝಾ ತಿನ್ನಬೇಕು ಎಂದ ಚಾನು..! ಲೈಫ್‌ ಟೈಂ ಫ್ರೀ ಪಿಝಾ ಘೋಷಿಸಿದ ಡೊಮಿನೋಸ್

ಈ ಬಗ್ಗೆ ದೀಪಿಕಾ ನಾರಾಯಣ್ ಭಾರದ್ವಾಜ್ ಎಂಬುವವರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದು, ಕೆಲಸದ ವೇಳೆ ಹಲ್ಲೆಗೆ ಒಳಗಾದ ಈ  ಹುಡುಗಿಗೆ ನೀವು ಕಾನೂನು ಸಹಾಯ ಮಾಡುವಿರಿ ಎಂದು ಭಾವಿಸಿದ್ದೇನೆ. ಈ ಕ್ರೂರಿಗಳ ವಿರುದ್ಧ ಎಲ್ಲಾ ರೀತಿಯಲ್ಲಿ ದೂರು ದಾಖಲಿಸಲು ಸಹಾಯ ಮಾಡುವಿರಿ ಎಂದು ಭರವಸೆ ಇಟ್ಟಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ತಮಿಳುನಾಡಿನಲ್ಲಿ ಸ್ವಿಗ್ಗಿ ಡೆಲಿವರಿ ಏಜೆಂಟ್‌ಗೆ ಪೊಲೀಸ್ ಪೇದೆಯೊಬ್ಬ ಅಮಾನುಷವಾಗಿ ಥಳಿಸಿದ್ದ. ತಮಿಳುನಾಡಿನ  ಅವಿನಾಶಿ ರಸ್ತೆಯ ( Avinashi Road) ಟ್ರಾಫಿಕ್ ಜಂಕ್ಷನ್‌ನಲ್ಲಿ ಈ ಘಟನೆ ನಡೆದಿತ್ತು. ಸಿಂಗಾನಲ್ಲೂರಿನ ಟ್ರಾಫಿಕ್‌ ಪೊಲೀಸ್‌ ಪೇದೆಯೊಬ್ಬ ( Singanallur police station) ಫುಡ್‌ ಡೆಲಿವರಿ ಮಾಡುತ್ತಿದ್ದ ಯುವಕನೋರ್ವನ ಮೇಲೆ ಅಮಾನಷವಾಗಿ ಕಪಾಳಮೋಕ್ಷ ಮಾಡಿದ್ದ. ಟ್ರಾಫಿಕ್ ಪೊಲೀಸ್‌ ಪೇದೆ ಡೆಲಿವರಿ ಬಾಯ್‌ಗೆ ಥಳಿಸುತ್ತಿರುವ ದೃಶ್ಯವನ್ನು ಅಲ್ಲೇ ಇದ್ದ ವ್ಯಕ್ತಿಯೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ವಿಡಿಯೋ ವೈರಲ್‌ ಆಗುತ್ತಿದ್ದಂತೆ ಪೊಲೀಸ್‌ ಪೇದೆಯ ಕ್ರಮಕ್ಕೆ ಜನ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ನಂತರದಲ್ಲಿ ಆತನನ್ನು ವರ್ಗಾವಣೆ ಮಾಡಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!