Hubballi: ಕಾರು ಡಿಕ್ಕಿ, ಪಾದಚಾರಿ ಸಾವು: ನಡು ರಸ್ತೆಯಲ್ಲಿಯೇ ಶವವಿಟ್ಟು ಗ್ರಾಮಸ್ಥರ ಪ್ರತಿಭಟನೆ

By Govindaraj S  |  First Published Jun 8, 2023, 7:23 AM IST

ಕಾರು ಡಿಕ್ಕಿ ಹೊಡೆದು ಪಾದಚಾರಿ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯ ಶಿರಗುಪ್ಪಿ ಗ್ರಾಮದ ಬಳಿ ನಡೆದಿದೆ. ಅಪಘಾತದಲ್ಲಿ ಪಾದಚಾರಿ ಸಾವನ್ನಪ್ಪಿದ್ದು, ನಡು ರಸ್ತೆಯಲ್ಲಿಯೇ ಶವ ಇಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. 


ಹುಬ್ಬಳ್ಳಿ (ಜೂ.08): ಕಾರು ಡಿಕ್ಕಿ ಹೊಡೆದು ಪಾದಚಾರಿ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯ ಶಿರಗುಪ್ಪಿ ಗ್ರಾಮದ ಬಳಿ ನಡೆದಿದೆ. ಅಪಘಾತದಲ್ಲಿ ಪಾದಚಾರಿ ಸಾವನ್ನಪ್ಪಿದ್ದು, ನಡು ರಸ್ತೆಯಲ್ಲಿಯೇ ಶವ ಇಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ರಸ್ತೆ ದಾಟುತ್ತಿದ್ದ ಪಾದಚಾರಿ ಬಸವರಾಜ್ ಮಲನಾಡ ಎಂಬವರು ಹುಬ್ಬಳ್ಳಿ ಕಡೆಯಿಂದ ಗದಗ ಕಡೆಗೆ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. 

ನಡು ರಸ್ತೆಯಲ್ಲಿಯೇ ಮೃತ ದೇಹವಿಟ್ಟು ಪ್ರತಿಭಟನೆ ನಡೆಸಿ ಸ್ಥಳಕ್ಕೆ ಜಿಲ್ಲಾಧಿಕಾರಿ, ತಹಶಿಲ್ದಾರರ ಆಗಮನಕ್ಕೆ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಈ  ಹಿಂದೆ ಮೇಲಸೇತುವೆ ಮಾಡುವಂತೆ ಗ್ರಾಮಸ್ಥರು ಹೋರಾಟ ಮಾಡಿದ್ದರು. ದಿನೇ ದಿನೇ ಹೆಚ್ಚುತ್ತಿರುವ ರಸ್ತೆ ಅಪಘಾತದ ಕಾರಣಕ್ಕೆ ಶವವಿಟ್ಟು ಪ್ರತಿಭಟನೆ ನಡೆಸಿ ಗ್ರಾಮಸ್ಥರು. ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಹುಬ್ಬಳ್ಳಿ ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Tap to resize

Latest Videos

ಜಾತಿ ಗಣತಿ ವರದಿ ಅಂಗೀಕರಿಸಿ ಮೀಸಲಾತಿ ಗೊಂದಲಕ್ಕೆ ತೆರೆ: ಸಿಎಂ ಸಿದ್ದರಾಮಯ್ಯ ಭರವಸೆ

ಲಾರಿ ಹಾಯ್ದು ವ್ಯಕ್ತಿ ಸಾವು: ಎರಡು ಲಾರಿಗಳ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಓರ್ವ ಪಾದಚಾರಿ ಸ್ಥಳದಲ್ಲೇ ಮೃತಪಟ್ಟಘಟನೆ ಬೆಳಗಾವಿ ರಾಯಚೂರು ರಾಜ್ಯ ಹೆದ್ದಾರಿ ರಸ್ತೆ ತುಳಸಿಗೇರಿ ಬಳಿ ನಡೆದಿದೆ. ತುಳಸಿಗೇರಿ ಗ್ರಾಮದ ದಶರಥ ಜೋಗಿನ್‌(51) ಮೃತ ವ್ಯಕ್ತಿ. ಬಾಗಲಕೋಟೆ ಕಡೆಯಿಂದ ಬರುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ತುಳಸಿಗೇರಿ ಬಸ್‌ ನಿಲ್ದಾಣದ ಬಳಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದು ಅದೇ ವೇಳೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಮೇಲೆ ಹಾಯ್ದು ವ್ಯಕ್ತಿ ಸಾವನ್ನಪ್ಪಿದ್ದಾನೆ. ಬರುತ್ತಿದ್ದ ಲಾರಿಯ ಹಿಂದೆಯೇ ಬರುತ್ತಿದ್ದ ಕ್ಯಾಂಟರ್‌ ಲಾರಿ ಹಿಂಬದಿಗೆ ಗುದ್ದಿ ಜಖಂಗೊಂಡಿದೆ. ಲಾರಿಗಳ ಸರಣಿ ಅಪಘಾತ ಸ್ಥಳಕ್ಕೆ ಕಲಾದಗಿ ಪೊಲೀಸ್‌ ಠಾಣಾ ಪಿಎಸೈ ಪ್ರಕಾಶ ಬಣಕಾರ ಭೇಟಿ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಟ್ಟಿಗೆ ಕೊಡ್ಡ ಬಡೆದು ಯುವಕ ಸಾವು: ಕೆಟ್ಟು ನಿಂತ ಲಾರಿಯೊಂದನ್ನು ಆರಂಭ ಮಾಡಲು ಮತ್ತೊಂದು ಲಾರಿ ಬಳಕೆ ಮಾಡಿಕೊಂಡಾಗ ಇವೆರಡರ ನಡುವೆ ಇಟ್ಟಿದ್ದ ದೊಡ್ಡ ಕಟ್ಟಿಗೆಯೊಂದು ಸಿಡಿದು ಪಕ್ಕದಲ್ಲೇ ನಿಂತಿದ್ದ ಲಾರಿಯ ಕಿನ್ನರ ಸ್ಥಳದಲ್ಲೇ ಮೃತಪಟ್ಟಘಟನೆ ಬುಧವಾರ ಸಂಜೆ ಬೆಳಗಾವಿ ರಾಯಚೂರು ಹೆದ್ದಾರಿ ರಸ್ತೆ ತುಳಸಿಗೇರಿ ರಾಜ್ಯ ಹೆದ್ದಾರಿ ಪಕ್ಕದ ಶ್ರೀಮಾರುತೇಶ್ವರ ದೇವಸ್ಥಾನದ ಪ್ರವೇಶ ದ್ವಾರದ ಮುಂಭಾಗದಲ್ಲಿ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗೊಡಚಿಯ ಶಿವಾನಂದ ಹನಮಂತ ಮಕಾಳಿ(20) ಮೃತ ಯುವಕ. 

ಉಚಿತ ವಿದ್ಯುತ್‌ಗೆ ರಾಜ್ಯದ 2.14 ಕೋಟಿ ಸಂಪರ್ಕಗಳು ಅರ್ಹ: ಸಚಿವ ಕೆ.ಜೆ.ಜಾರ್ಜ್‌

ಬೆಳಗಾವಿ-ರಾಯಚೂರು ಹೆದ್ದಾರಿ ರಸ್ತೆ ತುಳಸಿಗೇರಿ ರಾಜ್ಯ ಹೆದ್ದಾರಿ ಪಕ್ಕದ ಶ್ರೀಮಾರುತೇಶ್ವರ ದೇವಸ್ಥಾನದ ಪ್ರವೇಶ ದ್ವಾರದ ಮುಂಭಾಗದಲ್ಲಿ ಬಂದ್‌ ಆಗಿ ನಿಂತಿದ್ದ ಲಾರಿಯನ್ನು ಚಾಲೂ ಮಾಡಲು ಮತ್ತೊಂದು ಲಾರಿ ಹಿಂಬದಿ ನಿಲ್ಲಿಸಿ ಎರಡು ಲಾರಿ ಮಧ್ಯೆ ಕಟ್ಟಿಗೆ ಕೊಡ್ಡ ಇಟ್ಟು ಒಂದು ಲಾರಿ ಚಾಲೂ ಮಾಡುವ ವೇಳೆ ಕಟ್ಟಿಗೆ ಕೊಡ್ಡ ಸ್ಲಿಪ್‌ ಆಗಿ ಅಲ್ಲೇ ನಿಂತದ್ದ ಕಿನ್ನರಗೆ ಬಡೆದಿದೆ. ಈ ವೇಳೆ ಆ ಯುವಕ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಕುರಿತು ಕಲಾದಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!