ಕಲಬುರಗಿಯಲ್ಲಿ ಮನೆ​ಗ​ಳ್ಳನ ಬಂಧ​ನ: ಚಿನ್ನಾ​ಭ​ರಣ ಜಪ್ತಿ

Published : Jun 07, 2023, 11:26 PM IST
ಕಲಬುರಗಿಯಲ್ಲಿ ಮನೆ​ಗ​ಳ್ಳನ ಬಂಧ​ನ: ಚಿನ್ನಾ​ಭ​ರಣ ಜಪ್ತಿ

ಸಾರಾಂಶ

ಬಂಧಿತ ಆರೋಪಿಯಿಂದ 25 ಗ್ರಾಂ.ಬಂಗಾರದ ಆಭರಣ ಮತ್ತು 150 ಗ್ರಾಂ.ಬೆಳ್ಳಿ ಆಭರಣ ಜಪ್ತಿ. 

ಕಲಬುರಗಿ(ಜೂ.07):  ರಾತ್ರಿ ಮನೆ ಕಳ್ಳತನ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಘವೇಂದ್ರ ನಗರ ಪೊಲೀಸರು ಬಾಲಕನೊಬ್ಬನನ್ನು ಬಂಧಿಸಿ 25 ಗ್ರಾಂ. ಬಂಗಾರ ಮತ್ತು 150 ಗ್ರಾಂ. ಬೆಳ್ಳಿ ಆಭರಣ ಜಪ್ತಿ ಮಾಡಿದ್ದಾರೆ.

ಮನೆ ಬೀಗ ಮುರಿದು 10 ಗ್ರಾಂ. ಬಂಗಾರದ ಆಭರಣ ಮತ್ತು 17 ಸಾವಿರ ರು. ನಗದು ಕಳವು ಮಾಡಲಾಗಿದೆ ಎಂದು ನಗರದ ಎಂಎಸ್‌ಕೆಮಿಲ್‌ ಬಡಾವಣೆಯ ಇಕ್ಬಾಲ್‌ ಕಾಲೋನಿಯ ಮೊಹ್ಮದ್‌ ಜುಲ್ಪೇಖಾರೋದ್ದಿನ್‌ ಅವರು ರಾಘವೇಂದ್ರ ನಗರ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. 

10 ಕೋಟಿ ಮೌಲ್ಯದ 15000 ಎಲ್‌ಎಸ್‌ಡಿ ಮಾತ್ರೆಗಳು ವಶ: ಇತಿಹಾಸದಲ್ಲೇ ಬೃಹತ್‌ ಮೊತ್ತದ ಡ್ರಗ್ಸ್ ಜಪ್ತಿ

ಈ ದೂರಿನ ಅನ್ವಯ ನಗರ ಉಪ ಪೊಲೀಸ್‌ ಆಯುಕ್ತ ಅಡ್ಡೂರು ಶ್ರೀನಿವಾಸಲು ಅವರ ಮಾರ್ಗದರ್ಶನದಲ್ಲಿ ದಕ್ಷಿಣ ಉಪ ವಿಭಾಗದ ಎಸಿಪಿ ಭೂತೇಗೌಡ, ರಾಘವೇಂದ್ರ ನಗರ ಪೊಲೀಸ್‌ ಠಾಣೆ ಪಿಐ ಕುಬೇರ ಎಸ್‌.ರಾಯಮಾನೆ ಅವರ ನೇತೃತ್ವದಲ್ಲಿ ಸಿಬ್ಬಂದಿ ಸಿಕ್ರೇಶ್ವರ, ಉಮೇಶ, ಮುಜಾಹಿದ್‌ ತೊತ್ವಾಲ್‌, ಶರಣಬಸವ, ಉಮೇಶ, ಆತ್ಮಕುಮಾರ ಅವರು ತನಿಖೆ ನಡೆಸಿ ಕಾನೂನು ಸಂಘರ್ಷಕ್ಕೆ ಒಳಪಟ್ಟ 16 ವರ್ಷದ ಬಾಲಕನನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ ಬಾಲಕ ಮೂರು ಮನೆ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. 

ಬಂಧಿತ ಆರೋಪಿಯಿಂದ 25 ಗ್ರಾಂ.ಬಂಗಾರದ ಆಭರಣ ಮತ್ತು 150 ಗ್ರಾಂ.ಬೆಳ್ಳಿ ಆಭರಣ ಜಪ್ತಿ ಮಾಡಿದ್ದಾರೆ. ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಕಾರ್ಯಕ್ಕೆ ನಗರ ಪೊಲೀಸ್‌ ಆಯುಕ್ತ ಚೇತನ್‌ ಆರ್‍.ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!