ಮೊಬೈಲ್ ಶಾಪ್‌ಗೆ ಕನ್ನ: 25 OnePlus phone ಕದ್ದೊಯ್ದ ಕಳ್ಳರು: ಸಿಸಿಯಲ್ಲಿ ದೃಶ್ಯ ಸೆರೆ

By Anusha KbFirst Published Sep 21, 2022, 1:04 PM IST
Highlights

ಮೊಬೈಲ್ ಶಾಪೊಂದಕ್ಕೆ ನುಗ್ಗಿದ ಕಳ್ಳರ ಗ್ಯಾಂಗ್‌ ಅಂಗಡಿಯಲ್ಲಿದ್ದ ಇದ್ದ 25 OnePlus Smartphones ಮೊಬೈಲ್‌ಗಳನ್ನು ಎಗರಿಸಿ ಪರಾರಿಯಾಗಿದ್ದಾರೆ. ಪಂಜಾಬ್‌ನ ಲೂಧಿಯಾನದಲ್ಲಿ ಈ ಘಟನೆ ನಡೆದಿದೆ.

ಲೂಧಿಯಾನ: ಮೊಬೈಲ್ ಶಾಪೊಂದಕ್ಕೆ ನುಗ್ಗಿದ ಕಳ್ಳರ ಗ್ಯಾಂಗ್‌ ಅಂಗಡಿಯಲ್ಲಿದ್ದ ಇದ್ದ 25 OnePlus Smartphones ಮೊಬೈಲ್‌ಗಳನ್ನು ಎಗರಿಸಿ ಪರಾರಿಯಾಗಿದ್ದಾರೆ. ಪಂಜಾಬ್‌ನ ಲೂಧಿಯಾನದಲ್ಲಿ ಈ ಘಟನೆ ನಡೆದಿದೆ. ಕಳ್ಳರ ಕರಾಮತ್ತು ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಸೆಪ್ಟೆಂಬರ್ 19 ರಂದು ಈ ಘಟನೆ ನಡೆದಿದೆ. ಲೂಧಿಯಾನದ (Ludhiana) ಮಲ್ಹಾರ್‌ನ ಫೇಮ್ಜ್ ಮಾಲ್‌ನಲ್ಲಿ(Flamez Mall) ಈ ಘಟನೆ ನಡೆದಿದೆ. 

ಅವುಗಳ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದೆ. ಐದರಿಂದ ಆರು ಜನರಿದ್ದ ಕಳ್ಳರ ತಂಡ 25 ಒನ್‌ಪ್ಲಸ್ ಸ್ಮಾರ್ಟ್‌ಪೋನ್ (OnePlus mobile phone) ಅನ್ನು ಎಗರಿಸಿ ಪರಾರಿಯಾಗಿದ್ದಾರೆ. ಕದ್ದ ಫೋನ್‌ಗಳ ಮೌಲ್ಯ ಬರೋಬ್ಬರಿ 6 ಲಕ್ಷ ರೂಪಾಯಿ ಎಂದು ತಿಳಿದು ಬಂದಿದೆ. 

ಕಳ್ಳತನದ ಬಳಿಕ ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದಾಗ, ಶೋರೂಮ್‌ಗೆ ಶಟರ್ ಇಲ್ಲದಿರುವುದು ಗೊತ್ತಾಗಿದೆ. ಶಾಪ್‌ನ ಮುಖ್ಯ ದ್ವಾರವು ದಪ್ಪ ಗಾಜಿನ ಬಾಗಿಲನ್ನು ಹೊಂದಿದ್ದು, ಸಾಮಾನ್ಯವಾಗಿ ರಾತ್ರಿಯ ವೇಳೆ ಕಬ್ಬಿಣದ ಸರಪಳಿಯಿಂದ ಇದನ್ನು ಕಟ್ಟಿರಲಾಗಿತ್ತು. ಮಾಲ್ ಆಡಳಿತ ಮಂಡಳಿಯೇ ತನ್ನ ಕಟ್ಟಡದ ಒಳಗೆ ಇರುವ ಎಲ್ಲಾ ಶಾಪ್‌ಗಳಿಗೆ ಭದ್ರತೆ ನೀಡುವಂತೆ ಇದಕ್ಕೂ ನೀಡುತ್ತಿತ್ತು. ಈ ಮಧ್ಯೆ ಕರ್ತವ್ಯದಲ್ಲಿದ್ದ ಐವರು ನಿಯೋಜಿತ ಭದ್ರತಾ ಸಿಬ್ಬಂದಿ ಕಳ್ಳತನದ  ಸಮಯದಲ್ಲಿ ಮಲಗಿದ್ದರು ಎಂದು ತಿಳಿದು ಬಂದಿದೆ. ಭದ್ರತಾ ಸಿಬ್ಬಂದಿ ಬೆಳಗ್ಗೆ ಎದ್ದು ನೋಡಿದಾಗ ಮಾಲ್‌ನಲ್ಲಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. 

ಬೆಂಗಳೂರಿನ ಗೆಳತಿಯ ಮನೆಯಿಂದಲೇ ಚಿನ್ನ ಕದ್ದ ಮಹಿಳೆ ಮೈಸೂರಿನಲ್ಲಿ ಸೆರೆ!

ಈ ಘಟನೆಯ ದೃಶ್ಯ ಶಾಪ್‌ನಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಇನ್ಸ್ಟಾಗ್ರಾಮ್‌ನಲ್ಲಿ (Instagram) ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. 1000 things in Ludhiana ಎಂಬ ಇನ್ಸ್ಟಾಗ್ರಾಂ ಖಾತೆಯಿಂದ ವಿಡಿಯೋ ಶೇರ್ ಆಗಿದೆ. ಶಾಪ್ ಬಗ್ಗೆ ಗೊತ್ತಿದ್ದವರೇ ಈ ಕಳ್ಳತನದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತಿವಾಗಿದೆ. ಈ ಬಗ್ಗೆ ಪೊಲೀಸ್ ಅಧಿಕಾರಿ ಜಸ್ಬೀರ್ ಸಿಂಗ್ (Jasbir Singh) ಶಂಕೆ ವ್ಯಕ್ತಪಡಿಸಿದ್ದಾರೆ. ಕಳ್ಳರಿಗೆ ಈ ಮೊಬೈಲ್ ಶಾಪ್ ಬಗ್ಗೆ ಚೆನ್ನಾಗಿ ತಿಳಿದಿದ್ದು, ಈ ಸ್ಮಾರ್ಟ್‌ಫೋನ್ ಅನ್ನು ಯಾವ ಕಪಾಟಿನಲ್ಲಿ ಇಡಲಾಗಿತ್ತು ಎಂಬುದು ಅವರಿಗೆ ತಿಳಿದಿತ್ತು ಎಂದು ಹೇಳಿದ್ದಾರೆ. 

Bengaluru Crime News: ಮೋಜು ಮಸ್ತಿಗಾಗಿ ಬೈಕ್ ಕದಿಯುತ್ತಿದ್ದ ಗ್ಯಾಂಗ್ ಬಂಧನ 

ಕಳ್ಳರು ಸ್ಮಾರ್ಟ್‌ಫೋನ್‌ನಂತೆ ದಿನದಿಂದ ದಿನಕ್ಕೆ ಮತ್ತಷ್ಟು ಸ್ಮಾರ್ಟ್ ಆಗುತ್ತಿದ್ದಾರೆ. ಕೆಲ ದಿನಗಳ ಹಿಂದೆ, ಚಾಲಕರು ಲಾರಿಯಲ್ಲಿ ಮಲಗಿದ್ದಾಗಲೇ, ಟಯರ್ ಎಗರಿಸಿಕೊಂಡು ಹೋಗುವ, ದರೋಡೆ ಗ್ಯಾಂಗ್‌ನ್ನು ಉಡುಪಿ ಜಿಲ್ಲೆ, ಬೈಂದೂರು ಪೊಲೀಸರು ವಶಕ್ಕೆ ಪಡೆದಿದ್ದರು. ರಾತ್ರಿ ವಿಶ್ರಾಂತಿಗೆ ಲಾರಿ ನಿಲ್ಲಿಸಿ ಚಾಲಕ ಒಳಗಡೆ ಮಲಗಿದ್ದರೆ, ಆತನ ಅರಿವಿಗೆ ಬಾರದಂತೆ ಲಾರಿಯ ಟೈರುಗಳನ್ನು ಈ ಗ್ಯಾಂಗ್ ಕದ್ದು ಕೊಂಡೊಯ್ಯುತ್ತಿತ್ತು.ಉಡುಪಿ(udupi) ಮತ್ತು ಉತ್ತರ ಕನ್ನಡ(Uttara Kannada) ಜಿಲ್ಲೆಯ ಗಡಿಭಾಗದಲ್ಲಿರುವ ಶ್ರೀರೂರು ಟೋಲ್ ಪ್ಲಾಜಾ(Shriruru Toll Plaz) ಬಳಿ ಈ ಗ್ಯಾಂಗ್ ತಮ್ಮ ಕೈಚಳಕ ತೋರಿಸಿತ್ತು. ರಾತ್ರಿ ವಿಶ್ರಾಂತಿಗೆ ನಿಲ್ಲಿಸಿದ್ದ ಹೊಚ್ಚ ಹೊಸ ಲಾರಿಯ ಟೈಯರ್ ಗಳು ಕಳ್ಳತನವಾಗಿತ್ತು. ಚಾಲಕರು ನಿದ್ರೆಯಲ್ಲಿದ್ದಾಗ ರಿಮ್ ಡಿಸ್ಕ್ ಸಹಿತ ಐದು ಟೈರುಗಳನ್ನು ಕಳುವು ಮಾಡಲಾಗಿತ್ತು.

ನಾಲ್ಕು ಚಕ್ರ ಮತ್ತು ಒಂದು ಸ್ಪೇರ್ ಟಯರ್ ನ್ನು ಕಳ್ಳರು ದೋಚಿದ್ದರು. ಮರದ ತುಂಡೊಂದನ್ನು ಜಾಕ್ ನಂತೆ ಇಟ್ಟು ಈ ಕೃತ್ಯ ಎಸೆಗಲಾಗಿತ್ತು. ಅಂಕೋಲ(Ankola)ದಿಂದ ಮಂಗಳೂರು(Mangaluru) ಕಡೆಗೆ ಈ ಲಾರಿ ಹೋಗುತ್ತಿದ್ದು, ವಿಶ್ರಾಂತಿಯ ಸಲುವಾಗಿ ಟೋಲ್ ಪ್ಲಾಜಾ ಬಳಿ ನಿಲ್ಲಿಸಲಾಗಿತ್ತು. ಈ ಹೊಚ್ಚ ಹೊಸ ಲಾರಿಯನ್ನು ಖರೀದಿ ಮಾಡಿ ಕೇವಲ ಎರಡೇ ಟ್ರಿಪ್ ಓಡಿಸಲಾಗುತ್ತಿತ್ತು. 50 ಲಕ್ಷ ರೂಪಾಯಿ ಸಾಲ ಮಾಡಿ, ಕಷ್ಟಪಟ್ಟು ಮಾಲಕ ಈ ಲಾರಿ ಖರೀದಿ ಮಾಡಿದ್ದ. ಅಷ್ಟರಲ್ಲಿ ದರೋಡೆಕೋರರ ಗ್ಯಾಂಗ್ ಟಯರ್ ಕಳ್ಳತನ ಮಾಡಿದ್ದರಿಂದ, ಸುಮಾರು ಮೂರು ಲಕ್ಷ ರೂಪಾಯಿ ನಷ್ಟ ಉಂಟಾಗಿತ್ತು.

click me!