Suicide Case: ಪ್ರತ್ಯೇಕ ಘಟನೆ, ಯುವತಿ, ಯುವಕ, ಯೋಧ ಆತ್ಮಹತ್ಯೆ

By Suvarna News  |  First Published Dec 5, 2021, 8:26 PM IST

* ಯುವತಿ, ಯುವಕ, ಯೋಧ ಆತ್ಮಹತ್ಯೆ
* ಅಪ್ಪ-ಅಮ್ಮ ದಯವಿಟ್ಟು ಕ್ಷಮಿಸಿ ಎಂದು ಪತ್ರ ಬರೆದಿಟ್ಟು ಯುವಕ ಹತ್ಯಹತ್ಯೆ
* ದೆಹಲಿ ಸೇನಾ ಕ್ಯಾಂಪ್‌ನಲ್ಲಿ ವಿಜಯಪುರದ ಯೋಧ ಆತ್ಮಹತ್ಯೆಗೆ ಶರಣು


ಕಲಬುರಗಿ, (ಡಿ.05): ಇಂದು (ಡಿ.05) ಒಟ್ಟು ಮೂವರು ಆತ್ಮಹತ್ಯೆ (suicide)ಮಾಡಿಕೊಂಡಿರುವ ಪ್ರಕರಣದ ಸುದ್ದಿ ಇದು. ಆದ್ರೆ, ಪ್ರತ್ಯೇಕವಾಗಿ ನಡೆದ ಘಟನೆಗಳು.

ದೆಹಲಿಯಲ್ಲಿ(New Delhi) ವಿಜಯಪುರದ ಯೋಧ(Soldier), ಕಲಬುರಗಿಯಲ್ಲಿ (Kalaburagi) ಯುವಕ ಹಾಗೂ ಬೆಂಗಳೂರಿನಲ್ಲಿ (Bengaluru) ಯುವತಿಯೊಬ್ಬಳು ಆತ್ಮಹತ್ಯೆ ಮಾಡಿದ್ದಾಳೆ. ಈ ಮೂರು ಪ್ರತ್ಯೇಕ ಘಟನೆಯ ಸುದ್ದಿ ಈ ಕೆಳಗಿನಂತಿದೆ ನೋಡಿ..

UP Crime: 2 ದಿನದಿಂದ ನಾಪತ್ತೆಯಾಗಿದ್ದ ಬಾಲಕಿ ಶವ ನೆರೆಮನೆಯಲ್ಲಿದ್ದ ಪೆಟ್ಟಿಗೆಯಲ್ಲಿ ಪತ್ತೆ!

Tap to resize

Latest Videos

ಕಲಬುರಗಿ ಘಟನೆ
ನನ್ನಿಂದ ಓದೋಕೆ ಆಗುತ್ತಿಲ್ಲ.. ಅಪ್ಪ-ಅಮ್ಮ ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡಿ' ಎಂದು ಡೆತ್‌ನೋಟ್ ಬರೆದಿಟ್ಟು ಯುವಕನೊಬ್ಬ ಪೊಲೀಸ್ ತರಬೇತಿ ಕೇಂದ್ರದ ವಸತಿ ಗೃಹದಲ್ಲೇ ನೇಣಿಗೆ ಶರಣಾಗಿದ್ದಾನೆ.

ಇಂತಹ ದುರ್ಘಟನೆ ಕಲಬುರಗಿ (Kalaburagi) ಹೊರವಲಯದ ನಾಗನಹಳ್ಳಿ ಪೊಲೀಸ್ ತರಬೇತಿ ಕೇಂದ್ರದಲ್ಲಿ ಸಂಭವಿಸಿದೆ. ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ತಿಗಟಿ ಗ್ರಾಮದ ಮಂಜುನಾಥ ಮಾರುತಿ(23) ಆತ್ಮಹತ್ಯೆ (suicide) ಮಾಡಿಕೊಂಡವ.

ಪೊಲೀಸ್ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಗಾಗಿ ಪೋಷಕರು ಮಗನನ್ನ ಕಲಬುರಗಿಗೆ ಕಳುಹಿಸಿದ್ದರು. ನಾಗನಹಳ್ಳಿ ಪೊಲೀಸ್ ತರಬೇತಿ ಕೇಂದ್ರದ ಅಧಿಕಾರಿಯೊಬ್ಬರ ಮನೆಯಲ್ಲಿ ಇದ್ದುಕೊಂಡು ಮಂಜುನಾಥ ತರಬೇತಿ ಪಡೆಯುತ್ತಿದ್ದ. ಪಿಎಸ್‌ಐ ಪರೀಕ್ಷೆಯಲ್ಲಿ 2 ಅಂಕ ಕಡಿಮೆ ಬಂದು ಮಂಜುನಾಥ್ ಫೇಲ್ ಆಗಿದ್ದ. ಇದರಿಂದ ನೊಂದ ಮಂಜುನಾಥ್​, 'ನನ್ನ ಸಾವಿಗೆ ನಾನೇ ಕಾರಣ. ನನ್ನಿಂದ ಓದೋಕೆ ಆಗುತ್ತಿಲ್ಲ… ಅಪ್ಪ-ಅಮ್ಮ ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡಿ' ಎಂದು ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯೋಧ ಆತ್ಮಹತ್ಯೆ

ದೆಹಲಿಯ ಸೇನಾ ಕ್ಯಾಂಪಿನಲ್ಲಿ ವಿಜಯಪುರ ಜಿಲ್ಲೆಯ ಯೋಧ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮುದ್ದೇಬಿಹಾಳ ತಾಲೂಕಿನ ಜಟ್ಟಗಿ ಗ್ರಾಮದ ಮಂಜುನಾಥ ಹೂಗಾರ್ (22) ಸೇನಾ ಕ್ಯಾಂಪ್ ಆವರಣದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾರೆ. ಈ ಬಗ್ಗೆ ಸೇನಾ ಕ್ಯಾಂಪ್ ಅಧಿಕಾರಿಗಳಿಂದ ಮಂಜುನಾಥ್ ಕುಟುಂಬದವರಿಗೆ ಮಾಹಿತಿ ಬಂದಿದೆ.

ಯೋಧ ಮಂಜುನಾಥ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕಳೆದ ಒಂದೂವರೆ ತಿಂಗಳ ಹಿಂದೆ ಸೇನಾ ತರಬೇತಿಯನ್ನು ಮುಗಿಸಿಕೊಂಡು ಕರ್ತವ್ಯಕ್ಕೆ ಹಾಜರಾಗಿದ್ದ. 

ನಾಡಿದ್ದು ಸ್ವಗ್ರಾಮಕ್ಕೆ ಯೋಧನ ಶವ ಆಗಮಿಸೋ ಸಾಧ್ಯತೆ ಇದ್ದು, ಕುಟುಂಬದಲ್ಲಿ ಮನೆ ಮಾಡಿದ ಆಕ್ರಂದನ ಮುಗಿಲು ಮುಟ್ಟಿದೆ.

14 ವರ್ಷದ ಬಾಲಕಿ ಆತ್ಮಹತ್ಯೆ

ಬೆಂಗಳೂರು: 14 ವರ್ಷದ ಬಾಲಕಿ ಅಪಾರ್ಟ್ ಮೆಂಟ್ ನ 12 ನೇ ಮಹಡಿಯಿಂದ ಜಿಗಿದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಹುಳಿಮಾವು ನಲ್ಲಿ ಭಾನುವಾರ ನಡೆದಿದೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ ಇದು ಆತ್ಮಹತ್ಯೆ ಪ್ರಕರಣವಾಗಿದ್ದು, ಕಾರಣ ಇನ್ನಷ್ಟೇ ತಿಳಿಯಬೇಕಿದೆ. ಮೃತ 
ಬಾಲಕಿ ಖಾಸಗಿ ಶಾಲೆಯಲ್ಲಿ 9 ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು.

ಮೃತ ಬಾಲಕಿಯನ್ನು ವೈಷ್ಣವಿ ಎಂದು ಗುರುತಿಸಲಾಗಿದ್ದು ಸಿವಿಲ್ ಕಾಂಟ್ರಾಕ್ಟರ್ ವೀರೇಂದ್ರ ಅವರ ಪುತ್ರಿಯಾಗಿದ್ದಾಳೆ.  ಈಕೆ ಹುಳಿಮಾವುನ ವೇಣುಗೋಪಾಲ್ ನಗರದ ನಿವಾಸಿಯಾಗಿದ್ದಾರೆ. 

ರಾತ್ರಿ 10:30 ಕ್ಕೆ ಈ ಘಟನೆ ನಡೆದಿದ್ದು, ಊಟದ ನಂತರ  ಡ್ರಾಯಿಂಗ್ ರೂಮ್ ನಲ್ಲಿರುವ ಬಾಲ್ಕನಿಗೆ ತೆರಳಿದ್ದರು. ಕೆಲವು ಸಮಯದ ಬಳಿಕ ಆಕೆಯ ಸಹೋದರನಿಗೆ ಆಕೆ ಚೀರುತ್ತಿದ್ದ ಶಬ್ದ ಕೇಳಿಬಂದಿದ್ದು ಆತ ಅಲ್ಲಿಗೆ ತೆರಳಿ ನೋಡುವ ವೇಳೆಗೆ ಯುವತಿ ಕೆಳಗೆ ಬಿದ್ದಿದ್ದಳು. ಭದ್ರತಾ ಸಿಬ್ಬಂದಿಯೂ ಸಹ ಆಕೆ ಕೆಳಗೆ ಬಿದ್ದ ಶಬ್ದ ಕೇಳಿದ್ದು ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆ ವೇಳೆಗಾಗಲೇ ಆಕೆ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. 

click me!