* ತನ್ನ ಬದಲು ಬೇರೊಬ್ಬ ಅಭ್ಯರ್ಥಿಯಿಂದ ಪರೀಕ್ಷೆ ಬರೆಯಿಸಿದ ಪ್ರಕರಣ
* ಈ ಕುರಿತು ವಿದ್ಯಾಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದ ಕಾಲೇಜು ಪ್ರಾಚಾರ್ಯರು
* ಇಬ್ಬರಿಗೂ ತಲಾ ಎರಡೂವರೆ ವರ್ಷಗಳ ಜೈಲು ಶಿಕ್ಷೆ
ಧಾರವಾಡ(ಡಿ.05): ತನ್ನ ಬದಲು ಬೇರೊಬ್ಬ ಅಭ್ಯರ್ಥಿಯಿಂದ ಪರೀಕ್ಷೆ(Exam) ಬರೆಯಿಸಿದ ಪ್ರಕರಣ ಸಾಬೀತಾದ ಹಿನ್ನೆಲೆಯಲ್ಲಿ ಪರೀಕ್ಷೆ ಬರೆದ ನಕಲಿ ವಿದ್ಯಾರ್ಥಿ ಹಾಗೂ ಬರೆಯಿಸಿದ ಅಸಲಿ ವಿದ್ಯಾರ್ಥಿ(Student) ಇಬ್ಬರಿಗೂ ನ್ಯಾಯಾಲಯವು(Court) ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದೆ.
2007ನೇ ಸಾಲಿನಲ್ಲಿ ಧಾರವಾಡದ(Dharwad) ಎಸ್‌ಡಿಎಂ ಎಂಜನೀಯರಿಂಗ್ ಕಾಲೇಜಿನಲ್ಲಿ(SDM Engineering College) ನಡೆಸಲಾದ ಪರೀಕ್ಷೆಗಳಲ್ಲಿ ಅದೇ ಕಾಲೇಜಿನ ಓರ್ವ ವಿದ್ಯಾರ್ಥಿಯು ತನ್ನ ಬದಲಿಗೆ ಬೇರೆಯೊಬ್ಬ ಅಭ್ಯರ್ಥಿಯನ್ನು ನಕಲಿ ದಾಖಲೆಗಳನ್ನು(Duplicate Documents) ಸೃಷ್ಟಿಸುವ ಮೂಲಕ ಅಸಲಿ ಅಭ್ಯರ್ಥಿಯನ್ನಾಗಿ(Candidate) ರೂಪಗೊಳಿಸಿ ಪರೀಕ್ಷೆ ಬರೆಯಲು ಅವಕಾಶ ಮಾಡಿದ್ದನು. ನಕಲಿ ವಿದ್ಯಾರ್ಥಿಯು ಮೂರನೇ ಸೆಮಿಸ್ಟೆರ್ ಪರೀಕ್ಷೆ ಬರೆಯುವಾಗ ಪರಿಶೀಲನಾ ಅಧಿಕಾರಿಗಳು ಈತನು ನಕಲಿ ವಿದ್ಯಾರ್ಥಿ ಎಂದು ಗೊತ್ತಾಗಿತ್ತು. ಆದ್ದರಿಂದ ಕಾಲೇಜು ಪ್ರಾಚಾರ್ಯರು ಈ ಕುರಿತು ವಿದ್ಯಾಗಿರಿ ಪೊಲೀಸ್(Police) ಠಾಣೆಗೆ ದೂರು(Complaint) ನೀಡಿದ್ದರು.
Rape Case: 4ರ ಕಂದನ ರೇಪ್, ಒಂದೇ ದಿನದಲ್ಲಿ ತೀರ್ಪು ಪ್ರಕಟಿಸಿದ ಕೋರ್ಟ್, ಬಾಲಾಪರಾಧಿಗೆ ಜೈಲು!
ಈ ಬಗ್ಗೆ ತನಿಖೆ(Investigation) ಕೈಗೊಂಡಿದ್ದ ಎಎಸೈ ಎಸ್.ಎಫ್. ದೊಡಮನಿ, ಇನ್ಸ್‌ಪೆಕ್ಟರ್ ವಿಜಯ ಬಿರಾದರ್ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಮೂರನೇ ಹೆಚ್ಚುವರಿ ಪ್ರಧಾನ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಧೀಶ ಮಹೇಶ ಚಂದ್ರಕಾಂತ ಅವರು ಇಬ್ಬರು ಆರೋಪಿತರು(Accused) ತಪ್ಪಿತಸ್ಥರೆಂದು ತಿರ್ಮಾನಿಸಿ ಕಳೆದ ನವೆಂಬರ್ 27ರಂದು ಇಬ್ಬರಿಗೂ ತಲಾ ಎರಡೂವರೆ ವರ್ಷಗಳ ಜೈಲು(Jail) ಶಿಕ್ಷೆ ಮತ್ತು ತಲಾ .6 ಸಾವಿರ ದಂಡ ವಿಧಿಸಿ ತೀರ್ಪು(Verdict) ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ವಕೀಲರಾದ ಆರ್.ಜಿ. ದೇವರೆಡ್ಡಿ ಹಾಗೂ ಅನೀಲಕುಮಾರ ಆರ್. ತೊರವಿ ವಕಾಲತ್ತು ವಹಿಸಿದ್ದರು.
ಚಪ್ಪಲಿಯ ಒಳಗೆ ಬ್ಲ್ಯೂಟೂತ್ ಯಂತ್ರ ಇಟ್ಟು ಪರೀಕ್ಷೆಯಲ್ಲಿ ಅಕ್ರಮ!
ರಾಜಸ್ಥಾನ ಶಿಕ್ಷಕರ ನೇಮಕಾತಿ ಪರೀಕ್ಷೆಯ(REET) ವೇಳೆ ಅಭ್ಯರ್ಥಿಗಳು ಚಪ್ಪಲಿಯ ಒಳಗಡೆ ಬ್ಲ್ಯೂಟೂತ್(Bluetooth) ಯಂತ್ರ ಹಾಗೂ ಮೊಬೈಲ್ ಅನ್ನು ಅಡಗಿಸಿಟ್ಟು ಚೀಟಿಂಗ್ ಮಾಡುತ್ತಿದ್ದ ದಂಧೆಯೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ಐವರು ಅಭ್ಯರ್ಥಿಗಳನ್ನು ಬಂಧಿಸಲಾಗಿದೆ.
ಪರೀಕ್ಷೆಯ ಬರೆಯುವ ಅಭ್ಯರ್ಥಿಗಳ ಚಪ್ಪಲಿಯ ಒಳಗಡೆ ಫೋನ್ ಹಾಗೂ ಬ್ಲ್ಯೂಟೂತ್ ಅನ್ನು ಅಳವಡಿಸಿರಲಾಗುತ್ತದೆ. ಚಿಕ್ಕದಾದ ಇಯರ್ ಬಡ್‌ಗಳ ಮೂಲಕ ಅಭ್ಯರ್ಥಿಗಳು ಬ್ಲ್ಯೂಟೂತ್‌ನೊಂದಿಗೆ ಸಂಪರ್ಕ ಹೊಂದಿರುತ್ತಾರೆ.
ಪರೀಕ್ಷಾ ಕೊಠಡಿಯ ಹೊರಗಡೆ ಇದ್ದ ವ್ಯಕ್ತಿಗಳು ಅಭ್ಯರ್ಥಿಗಳಿಗೆ ಉತ್ತರವನ್ನು ಹೇಳಿಕೊಡುತ್ತಿದ್ದರು. ಅಜ್ಮೇರ್‌ನಲ್ಲಿ(Ajmer) ಈ ರೀತಿಯಾಗಿ ಚೀಟಿಂಗ್ ನಡೆಸುತ್ತಿದ್ದ ವ್ಯಕ್ತಿಯೊಬ್ಬ ಸಿಕ್ಕಿಬಿದ್ದಿರಿಂದ ದಂಧೆ ಬೆಳಕಿಗೆ ಬಂದಿತ್ತು.
ಬಿಕಾನೇರ್ ಐವರು ಅಭ್ಯರ್ಥಿಗಳು ಬ್ಲ್ಯೂಟೂತ್ ಇದ್ದ ಚಪ್ಪಲಿ ಧರಿಸಿ ಪರೀಕ್ಷಾ ಕೊಠಡಿಯನ್ನು ಪ್ರವೇಶಿಸುವ ಮುನ್ನವೇ ಅವರನ್ನು ತಡೆಯಲಾಗಿದೆ. ಅಲ್ಲದೇ ದಂಧೆಯಲ್ಲಿ ಭಾಗಿಯಾದ ಇತರ ಏಳು ಮಂದಿಯನ್ನು ಕೂಡ ಬಂಧಿಸಲಾಗಿದೆ. ಚೀಟಿಂಗ್‌ಗೆ ಬಳಕೆ ಆಗುತ್ತಿದ್ದ ಚಪ್ಪಲಿಗಳನ್ನು 2 ರಿಂದ 6 ಲಕ್ಷ ರು.ವರೆಗೂ ಮಾರಾಟ ಮಾಡಲಾಗುತ್ತಿತ್ತು.
Mangaluru Rape Case : ವಿದ್ಯಾರ್ಥಿನಿ ಅಪಹರಿಸಿ ಅತ್ಯಾಚಾರ : 7 ವರ್ಷ ಕಠಿಣ ಶಿಕ್ಷೆ
ಬ್ಲೂಟೂತ್ ಬಳಸಿ ಪೇದೆ ಪರೀಕ್ಷೆಯಲ್ಲಿ ನಕಲು..!
ಪೊಲೀಸ್(Police) ಪೇದೆ ನೇಮಕಾತಿ(Recruitment) ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಇಬ್ಬರು ಪರೀಕ್ಷಾರ್ಥಿಗಳು ಮತ್ತು ನಕಲು ಮಾಡಲು ಸಹಾಯ ಮಾಡುತ್ತಿದ್ದ 12 ಮಂದಿ ಸೇರಿ ಒಟ್ಟು 14 ಮಂದಿಯನ್ನು ಬೆಳಗಾವಿ(Belagavi) ಜಿಲ್ಲೆಯ ವಿವಿಧೆಡೆ ಕಾರ್ಯಾಚರಣೆ ನಡೆಸಿದ ಪೊಲೀಸರು ಭಾನುವಾರ ಬಂಧಿಸಿದ್ದರು.
ಗೋಕಾಕ(Gokak) ತಾಲೂಕಿನ ಮಸಗುಪ್ಪಿ ಗ್ರಾಮದ ಲಕ್ಷ್ಮಣ ಹಸಿರೊಟ್ಟಿ ಹಾಗೂ ಮೂಡಲಗಿ ತಾಲೂಕಿನ ತಿಗಡಿ ಗ್ರಾಮದ ಸರಸ್ವತಿ ಪೂಜಾರಿ ನಕಲು ಮಾಡುವ ವೇಳೆ ಸಿಕ್ಕಿಬಿದ್ದಿದ್ದರೆ, ರಾಮತೀರ್ಥ ನಗರದ ಒಂದು ಕೊಠಡಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಬ್ಲೂಟೂತ್(Bluetooth) ಉಪಯೋಗಿಸಿ ನಕಲು ಮಾಡಲು ಸಹಾಯ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ 12 ಮಂದಿಯನ್ನು ಬಂಧಿಸಲಾಗಿತ್ತು(Arrest). ಬಂಧಿತರಿಂದ 33 ಮೊಬೈಲ್(Mobile), 9 ಮಾಸ್ಟರ್ ಕಾರ್ಡ್ ಡಿವೈಸರ್, 19 ಬ್ಲೂಟೂತ್, 3 ಟ್ಯಾಬ್(Tab), 1 ಲ್ಯಾಪ್‌ಟಾಪ್(Laptop), ಒಂದು ಪ್ರಿಂಟರ್(Printer), ಮೂರು ಬೈಕ್(Bike)ಮತ್ತು ಒಂದು ಕಾರ್(Car) ವಶಪಡಿಸಿಕೊಂಡಿದ್ದರು.