Karnataka Rains: ಅಕಾಲಿಕ ಮಳೆ ತಂದಿಟ್ಟ ಸಂಕಷ್ಟ: ಒಂದೇ ವಾರದಲ್ಲಿ ಮೂವರು ರೈತರು ಆತ್ಮಹತ್ಯೆ

Kannadaprabha News   | Asianet News
Published : Dec 05, 2021, 12:45 PM IST
Karnataka Rains: ಅಕಾಲಿಕ ಮಳೆ ತಂದಿಟ್ಟ ಸಂಕಷ್ಟ: ಒಂದೇ ವಾರದಲ್ಲಿ ಮೂವರು ರೈತರು ಆತ್ಮಹತ್ಯೆ

ಸಾರಾಂಶ

*  ಬಳ್ಳಾರಿ ಜಿಲ್ಲೆಯಲ್ಲಿ ಅನ್ನದಾತರ ಆತ್ಮಹತ್ಯೆ *  ಸಾಲ ಮಾಡಿ ಮೆಣಸಿನಕಾಯಿ ಬೆಳೆದಿದ್ದ ರೈತರು *  ಅಕಾಲಿಕ ಮಳೆಗೆ ಮೆಣಸಿನಕಾಯಿ ಬೆಳೆಗೆ ಹಾನಿ  

ಬಳ್ಳಾರಿ(ಡಿ.05):  ಅಕಾಲಿಕ ಮಳೆ(Untimely Rain) ತಂದಿಟ್ಟ ಅವಾಂತರದಿಂದ ಒಂದೇ ವಾರದಲ್ಲಿ ಮೂವರು ರೈತರು(Farmers) ಆತ್ಮಹತ್ಯೆ(Suicide) ಶರಣಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಗಾದಿಲಿಂಗಪ್ಪ, ಮೋಹನ ಹಾಗೂ ನರಸಿಂಹ ರೆಡ್ಡಿ ಎಂಬುವರೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ರೈತರಾಗಿದ್ದಾರೆ. 

ಮೃತ ರೈತರು ಪೊಲೀಸರಿಂದ(Police) ‌ಲಾಠಿ ಏಟು ತಿಂದು ಮೆಣಸಿನಕಾಯಿ ಬೀಜ ತಂದು ಬೆಳೆ ಬೆಳೆದಿದ್ದರು. ಆದರೆ, ಇದೀಗ ಅಕಾಲಿಕ ಮಳೆಯಿಂದ ಮೆಣಸಿನಕಾಯಿ ಬೆಳೆ(Chilli Crop) ಸಂಪೂರ್ಣವಾಗಿ ಹಾನಿಯಾಗಿದೆ. ಸಾಲ ಸೋಲ ಮಾಡಿ ಬೆಳೆದ ಬೆಳೆ ಹಾಳಾಗಿದ್ದರಿಂದ(Crop Damage) ತೀವ್ರವಾಗಿ ಮನನೊಂದ ಬಾದನಟ್ಟಿ ಗ್ರಾಮದ ಗಾದಿಲಿಂಗಪ್ಪ, ಮದಿರೆ ಗ್ರಾಮದ ಮೋಹನ ಮತ್ತು ಚಾನಾಳ್ ಗ್ರಾಮದ ನರಸಿಂಹ ರೆಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. 

Farmers Suicide: ರೈತರ ಆತ್ಮಹತ್ಯೆಯಲ್ಲಿ ಮಹಾರಾಷ್ಟ್ರ ನಂ.1: ಕರ್ನಾಟಕಕ್ಕೆ ಎರಡನೇ ಸ್ಥಾನ!

ಕಳೆದ ವಾರ ಸುರಿದ ನಿರಂತರ ಮಳೆಯಿಂದ ಮೆಣಸಿನಕಾಯಿ, ಬತ್ತ(Paddy) ಸೇರಿದಂತೆ ಹಲವು ಬೆಳೆಗಳು ನಾಶವಾಗಿದೆ. ಹೀಗಾಗಿ ಒಂದೇ ವಾರದಲ್ಲಿ ಸಾಲಬಾಧೆ ತಾಳದೇ ಮೂವರು ಅನ್ನಾದಾತರು ಸಾವಿನ ಕದ ತಟ್ಟಿದ್ದಾರೆ. ಇವರೆಲ್ಲರೂ ಮೆಣಸಿನಕಾಯಿ ಮತ್ತು ಬತ್ತ ಬೆಳೆದ ರೈತರಾಗಿದ್ದಾರೆ. ಹೆಚ್ಚು ಕಡಿಮೆ ಆರರಿಂದ ಹತ್ತು ಲಕ್ಷದವರೆಗೂ ಸಾಲ(Loan) ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಕಳೆದ ವರ್ಷ ಮೆಣಸಿನಕಾಯಿಗೆ ಹೆಚ್ಚು ಬೆಲೆ ಬಂದಿತ್ತು . ಹೀಗಾಗಿ ಈ ವರ್ಷವೂ ಕೂಡ ಉತ್ತಮ ಬೆಲೆ ಸಿಗಬಹುದು ಎಂಬ ಅಸೆಯಿಂದ ಸಾಲ ಮಾಡಿ ಬಳ್ಳಾರಿ(Ballari), ಕುರುಗೋಡು(Kurugodu) ಮತ್ತು ಸಿರಗುಪ್ಪ(Siruguppa) ತಾಲೂಕಿನಲ್ಲಿ ರೈತರು ಅತಿಹೆಚ್ಚು ಮೆಣಸಿನಕಾಯಿ ಬೆಳೆದಿದ್ದಾರೆ. ಆದರೆ, ಅನ್ನದಾತರ ಆಸೆಗೆ ವರುಣ ಇತಿಶ್ರೀ ಹಾಡಿದ್ದಾನೆ. ಅಕಾಲಿಕ ಮಳೆಯಿಂದ ಬೆಳೆ ಸಂಪೂರ್ಣ ನಾಶವಾಗಿದೆ. ಆದರೆ, ಈವರೆಗೂ ಯಾವೊಬ್ಬ ಜನಪ್ರತಿನಿಧಿಗಳು ಹೊಲಗಳಿಗೆ ಭೇಟಿ ನೀಡಿ ನೊಂದ ರೈತರಿಗೆ ಪರಿಹಾರ ಕೊಡಿಸುವ ಬಗ್ಗೆ ಕಿಂಚಿತ್ತೂ ಮಾತನಾಡದಿರುವುದು ಮಾತ್ರ ನೋವಿನ ಸಂಗತಿಯಾಗಿದೆ. 

ಸರ್ಕಾರದ ರೂಲ್ಸ್‌ಗಳೇ ರೈತರಿಗೆ ಮಾರಕ

ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕೆಲವು ನಿಯಮಗಳು ರೈತರಿಗೆ ಮಾರಕವಾಗಿ ಮಾರ್ಪಟ್ಟಿವೆ. ಇದರಿಂದ ಸಾಲಬಾಧೆಯಿಂದ ಮೃತಪಟ್ಟ ರೈತ ಕುಟುಂಬಗಳಿಗೆ ಪರಿಹಾರ(Compensation) ಸಿಗುತ್ತಿಲ್ಲ. ಖಾಸಗಿಯಾಗಿ ಸಾಲ ತೆಗೆದುಕೊಂಡವರಿಗೆ ಸರ್ಕಾರದ ಕೆಲವು ರೂಲ್ಸ್‌ಗಳು ಮಾರಕವಾಗಿ ಪರಿಣಮಿಸಿವೆ. ಅಕಾಲಿಕ ಮಳೆಯಿಂದ ರಾಯಚೂರು(Raichur) ಜಿಲ್ಲೆಯಾದ್ಯಂತ ನೂರಾರು ಎಕರೆ ಬೆಳೆನಾಶವಾಗಿದೆ. ಇದರಿಂದ ಮನೊಂದ ಮೂವರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಒಂದೇ ವಾರದಲ್ಲಿ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಮೂರು ರೈತ ಆತ್ಮಹತ್ಯೆಯೂ ರೈತ ಆತ್ಮಹತ್ಯೆಯೇ ಅಲ್ಲ ಅಂತ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಅಕಾಲಿಕ ಮಳೆ, ಬೆಳೆ ಹಾನಿಯಿಂದ ರೈತರು ಮೃತಪಟ್ಟಿದ್ದಾರೆ. ಇವು ಆತ್ಮಹತ್ಯೆ ಅಲ್ಲ ಅಂತ ಹೇಳಿದ್ದಾರೆ. ಬ್ಯಾಂಕ್‌ ನೋಟಿಸ್‌(Bank Notice) ನೀಡಿದ್ದು ಇದ್ರೆ ಮಾತ್ರ ರೈತ ಆತ್ಮಹತ್ಯೆ ಎಂದು ಪರಿಗಣಿಸಲಾಗುವುದು ಅಂತ ಡಿಸಿ ಸ್ಪಷ್ಟಡಿಸಿದ್ದಾರೆ. ಹೀಗಾಗಿ ಸರ್ಕಾರದ ಕೆಲವು ರೂಲ್ಸ್‌ಗಳು ಆತ್ಮಹತ್ಯೆಗೆ ಶರಣಾದ ಕುಟುಂಬಗಳು ಸಂಕಷ್ಟಗಳನ್ನ ಎದುರಿಸುತ್ತಿವೆ.  

Karnataka rain: ಅಕಾಲಿಕ ಮಳೆ, ಅನ್ನದಾತ ಹೈರಾಣು; ವಾರದಲ್ಲಿ 7 ಮಂದಿ ಆತ್ಮಹತ್ಯೆಗೆ ಶರಣು

ಬೆಳೆನಷ್ಟ: ರೈತ ಆತ್ಮಹತ್ಯೆ

ಇತ್ತೀಚೆಗೆ ಸುರಿದ ಅಕಾಲಿಕ ಮಳೆಗೆ ಬೆಳೆ ನಷ್ಟವಾಗಿ ರೈತನೋರ್ವ ಆತ್ಮಹತ್ಯೆಗೆ(Suicide) ಶರಣಾಗಿದ್ದಾರೆ. ಬೆಳಗಾವಿ(Belagavi) ತಾಲೂಕಿನ ಚಂದನಹೊಸೂರ ಗ್ರಾಮದ ರಮೇಶ ಯಲ್ಲಪ್ಪ ತಳವಾರ(45) ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದಾನೆ. 

ರಮೇಶ ಯಲ್ಲಪ್ಪ ತಳವಾರ ಕೃಷಿ(Agriculture) ಚಟುವಟಿಕೆಗಾಗಿ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಲ್ಲಿ ಸುಮಾರು 10 ಲಕ್ಷಕ್ಕೂ ಅಧಿಕ ಸಾಲ(Loan) ಮಾಡಿಕೊಂಡಿದ್ದರು. ಬೆಳೆಗೆ ಬೆಲೆ ಸಿಗದೆ ಮತ್ತು ಅಕಾಲಿಕ ಮಳೆಯಿಂದಾಗಿ ಬೆಳೆ(Crop DamageP) ನಷ್ಟವಾಗಿ ಸಾಲ ತೀರಿಸಲಾಗದೆ ಮನನೊಂದು ಅವರು ನೇಣಿಗೆ ಶರಣಾಗಿದ್ದರು. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ