ಪಲ್ಸರ್ ಬೈಕ್‌ಗೆ BMW ಕಾರು ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು

By Ravi Janekal  |  First Published Jun 13, 2024, 11:53 PM IST

ವೇಗವಾಗಿ ಬಂದ ಬಿಎಂಡಬ್ಲ್ಯೂ ಕಾರು ಪಲ್ಸರ್ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಬೈಕ್‌ ಸವಾರರು ದುರ್ಮರಣಕ್ಕೀಡಾದ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಕತ್ತರಿಘಟ್ಟ ಬಳಿ ನಡೆದಿದೆ.


ಹಾಸನ (ಜೂ.13): ವೇಗವಾಗಿ ಬಂದ ಬಿಎಂಡಬ್ಲ್ಯೂ ಕಾರು ಪಲ್ಸರ್ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಬೈಕ್‌ ಸವಾರರು ದುರ್ಮರಣಕ್ಕೀಡಾದ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಕತ್ತರಿಘಟ್ಟ ಬಳಿ ನಡೆದಿದೆ.

ಹಾಸನದ ದೇವೇಗೌಡ ನಗರದ ನಿವಾಸಿಗಳಾದ ಅಜಿತ್.ಬಿ.ಎನ್. (30) ಹಾಗೂ ಮನು (31) ಮೃತ ದುರ್ದೈವಿಗಳು. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ ಸಮೇತ ಹಳ್ಳಕ್ಕೆ ಬಿದ್ದಿದ್ದ ಯುವಕರು.

Tap to resize

Latest Videos

undefined

ಜಲ ಜೀವನ್ ಮಿಷನ್ ಕಾಮಗಾರಿ ಎಡವಟ್ಟು; ಕಲುಷಿತ ನೀರು ಸೇವಿಸಿ 112 ಜನ ಅಸ್ವಸ್ಥ : ನಾಲ್ವರ ಸಾವು?

ಬೆಂಗಳೂರಿನಿಂದ ಹಾಸನದ ಕಡೆಗೆ ಬರುತ್ತಿದ್ದ KA-51-MC 2425 ನಂಬರ್‌ನ ಬಿಎಂಡಬ್ಲ್ಯೂ ಕಾರು. KA-06 HS-0720 ನಂಬರ್ ಪಲ್ಸರ್ ಬೈಕ್‌ನಲ್ಲಿ ತೆರಳುತ್ತಿದ್ದ ಇಬ್ಬರು ಯುವಕರು. ಕತ್ತರಿಘಟ್ಟ ಗೇಟ್‌ನ ಬಳಿ ಬೈಕ್ ಕ್ರಾಸ್ ಮಾಡುವಾಗ ಅತೀ ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣಕ್ಕೆ ಸಿಗದೆ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಷ್ಟೇ ಅಲ್ಲದೇ  ಕಿಯಾ ಕಾರು ಹಾಗೂ ಅಶ್ವಮೇಧ ಬಸ್‌ಗೂ ಡಿಕ್ಕಿ ಹೊಡೆದು ಹಳ್ಳಕ್ಕೆ ಇಳಿದ ಬಿಎಂಡಬ್ಲ್ಯೂ ಕಾರು. ಅತಿಯಾದ ವೇಗದಿಂದಲೇ ಅಪಘಾತ ಸಂಭವಿಸಿದೆ. ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

click me!