ದರ್ಶನ್ ಕ್ರೌರ್ಯಕ್ಕೆ ಮತ್ತೊಂದು ಸಾಕ್ಷಿ; ಹುಟ್ಟಿದ ಮನೆ ಧ್ವಂಸಗೊಳಿಸಿ ಸೋದರ ಮಾವನ ಬೀದಿಗಟ್ಟಿದ ಡೆವಿಲ್

By Sathish Kumar KH  |  First Published Jun 13, 2024, 5:40 PM IST

ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಕ್ರೌರ್ಯಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ಆಸ್ತಿ ವಿಚಾರಕ್ಕೆ ತಾನು ಹುಟ್ಟಿದ ತಾಯಿಯ ತವರು ಮನೆಯನ್ನೇ ನೆಲಸಮ ಮಾಡಿ ಸೋದರ ಮಾವಂದಿರನ್ನು ಬೀದಿಗಟ್ಟಿದ್ದಾರೆ.


ಕೊಡಗು (ಜೂ.13): ನಟ ದರ್ಶನ್ ಹೊರಗಿನವರಿಗೆ ಮಾತ್ರವಲ್ಲ ಸ್ವತಃ ತಾನು ಹುಟ್ಟಿದ ತಾಯಿಯ ತವರು ಮನೆಯಲ್ಲೇ ನೆಲಸಮಗೊಳಿಸಿ ತಮ್ಮ ಸೋದರ ಮಾವನವರನ್ನು ಬೀದಿಪಾಲು ಮಾಡಿದ ಪೈಶಾಚಿಕ ಕೃತ್ಯ ಕೊಡಗಿನಲ್ಲಿ ನಡೆದಿದೆ. ಈ ಬಗ್ಗೆ ಸ್ವತಃ ಅವರ ಸೋದರ ಮಾವನೇ ಅಳಲು ತೋಡಿಕೊಂಡಿದ್ದಾರೆ.

ಹೌದು, ನಟ ದರ್ಶನ್ ಮೇಲೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಮಾಡಿರುವ ಆರೋಪ ಮಾತ್ರವಲ್ಲ, 15ಕ್ಕೂ ಅಧಿಕ ಕೇಸ್‌ಗಳು ದಾಖಲಾಗಿದ್ದು ಪತ್ತೆಯಾಗಿದ್ದವು. ಈಗ ಮತ್ತೊಂದು ಕ್ರೌರ್ಯದ ಕೇಸ್ ಬಟಾ ಬಯಲಾಗಿದೆ. ನಟ ದರ್ಶನ್ ಸಿನಿಮಾದಲ್ಲಿ ಮಾತ್ರ ಹೀರೋ, ವೈಯಕ್ತಿಕ ಜೀವನದಲ್ಲಿ ಮಾತ್ರ ಮೈತುಂಬಾ ವಿವಾದಗಳನ್ನೇ ಹಾಸಿ ಹೊದ್ದ ವ್ಯಕ್ತಿಯಾಗಿದ್ದಾರೆ. ರಾಜ್ಯಾದ್ಯಂತ ತನ್ನ ತಂದೆಯ ಊರು, ಮೈಸೂರು, ಬೆಂಗಳೂರು ಸೇರಿದಂತೆ ಎಲ್ಲಿಯೂ ಒಳ್ಳೆಯ ಹೆಸರನ್ನು ಉಳಿಸಿಕೊಂಡಿಲ್ಲ. ಎಲ್ಲೆಡೆಯೂ ಸ್ಥಳೀಯರಿಗೆ ಒಂದಲ್ಲಾ ಒಂದು ರೀತಿಯಲ್ಲಿ ಕಿರುಕುಳ ನೀಡಿದ್ದು, ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಇದಕ್ಕೆ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ.. 

Latest Videos

undefined

ದರ್ಶನ್ ಹುಟ್ಟೂರು ತನ್ನ ತಾಯಿಯ ತವರು ಮನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ. ಈಗ ಹುಟ್ಟೂರಿನಲ್ಲೂ ಒಳ್ಳೆಯ ಹೆಸರು ಪಡೆಯದ ನಟ ದರ್ಶನ್ ವಿರುದ್ಧ ರೇಣುಕಾಸ್ವಾಮಿ ಕೊಲೆ ಬೆನ್ನಲ್ಲಿಯೇ ಆಕ್ರೋಶ ವ್ಯಕ್ತವಾಗಿದೆ. ನಟ ದರ್ಶನ್ ಹುಟ್ಟಿದ ಅಜ್ಜಿ-ತಾತನ ಮನೆಯನ್ನು ಸ್ವತಃ ದರ್ಶನ್ ಮತ್ತು ಆತನ ತಾಯಿ ಮೀನಾ ಕೆಡವಿ ನೆಲಸಮಗೊಳಿಸಿ ಸೋದರ ಮಾವಂದಿರನ್ನು ಬೀದಿಪಾಲು ಮಾಡಿದ್ದಾರಂತೆ. ಆಸ್ತಿ ವಿಚಾರವಾಗಿ ಸೋದರ ಮಾವಂದಿರ ಜೊತೆ ಗಲಾಟೆ ಮಾಡಿಕೊಂಡಿದ್ದ ದರ್ಶನ್ ಮತ್ತು ತಾಯಿ ಮೀನಾ ಮನೆಯಲ್ಲಿ ನೆಲಸಮ ಮಾಡಿದ್ದಾರೆ. ಈ ಪ್ರಕರಣದ ಕಳೆದ 10 ವರ್ಷಗಳ ಹಿಂದೆ ನಡೆದಿದ್ದು, ಈಗಲೂ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ.

ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಮುಲಾಜಿಲ್ಲದೇ ನಟ ದರ್ಶನ್ ಅರೆಸ್ಟ್ ಮಾಡಿದ್ದ ತನಿಖಾಧಿಕಾರಿ ಟ್ರಾನ್ಸ್‌ಫರ್

ರೇಣುಕಾಸ್ವಾಮಿ ಕೊಲೆ ಮಾಡಿದ ಆರೋಪದಲ್ಲಿ ಜೈಲು ಸೇರಿರುವ ದರ್ಶನ್ ವಿರುದ್ಧ ಸ್ವತಃ ಅವರ ಸೋದರ ಮಾವ ಟಿ.ಎಲ್. ಶ್ರೀನಿವಾಸ್ ಮಾತನಾಡಿ ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಶ್ರೀನಿವಾಸ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ನಾವು ಎತ್ತಿ ಆಡಿಸಿ ಬೆಳೆಸಿದ ದರ್ಶನ್  ಕೊಲೆಯಲ್ಲಿ ಭಾಗಿರುವುದು ಬೇಸರವಾಗಿದೆ. ಈ ಹಿಂದೆ ನಮ್ಮ ಮನೆಯನ್ನು ಆಸ್ತಿ ವಿಚಾರಕ್ಕೆ ಜಗಳ ಮಾಡಿಕೊಂಡು ನೆಲಸಮ ಮಾಡಿದ್ದಾರೆ. ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕಾದ ವಿಚಾರವನ್ನು ಏಕಾಏಕಿ ದೊಡ್ಡದು ಮಾಡಿ ಮನೆಯನ್ನೇ ನೆಲಸಮ ಮಾಡಿದ್ದಾರೆ. ನಂತರ ಪೊಲೀಸ್ ಠಾಣೆಗ ಮೆಟ್ಟಿಲೇರಿದ್ದೇವೆ. ಆದರೆ, ನಟನಾಗಿ ದೊಡ್ಡ ಮಟ್ಟಕ್ಕೆ ಬೆಳೆದ ಹಿನ್ನೆಲೆಯಲ್ಲಿ ನಾವು ಹೆಚ್ಚಾಗಿ ದರ್ಶನ್ ಸಂಪರ್ಕದಲ್ಲಿ ಇಲ್ಲ. ಆದರೆ, ಹೆಂಡತಿಯ ಮೇಲೆ ಹಲ್ಲೆ ಮಾಡಿದಾಗ ಆತನ ಹೆಂಡತಿ ವಿಜಯಲಕ್ಷ್ಮೀ ರಾಜಾಜಿನಗರದಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ನಾವು ಹೋಗಿ ಇಬ್ಬರ ನಡುವೆ ರಾಜಿ ಪಂಚಾಯಿತಿ ಮಾಡಿ ಬಂದಿದ್ದೆವು. ಇದಾದ ನಂತರ ಅವರ ಬಳಿ ಹೋಗಿರಲಿಲ್ಲ. ಈಗ ರೇಣುಕಾಸ್ವಾಮಿ ಎನ್ನುವವರನ್ನು ಕೊಲೆ ಮಾಡಿ ಜೈಲು ಸೇರಿರುವುದು ನೋವಿನ ಸಂಗತಿಯಾಗಿದೆ ಎಂದು ಹೇಳಿದರು.

ಇತ್ತೀಚೆಗೆ ಕಾಟೇರ ಸಿನಿಮಾ ಮಾಡಿ ಯಶಸ್ಸು ಗಳಿಸಿದ ನಂತರ ಡೆವಿಲ್ ಸಿನಿಮಾ ಮಾಡುತ್ತಿದ್ದರು. ಆದರೆ, ಈಗ ಕೆಟ್ಟದಾಗಿ ಕಾಮೆಂಟ್ ಮಾಡಿದ್ದರಿಂದ ಕೊಲೆ ಮಾಡುವ ಮಟ್ಟಕ್ಕೆ ಹೋಗಿದ್ದಾರೆ. ಈಗ ತನ್ನ ತಾಯಿಯಿಂದಲೂ ನಟ ದರ್ಶನ್ ದೂರ ಇದ್ದಾರೆ. ದರ್ಶನ್ ತಾನು ಬೆಳೆದುಬಂದ ಹಾದಿಯನ್ನು ಯೋಚನೆ ಮಾಡದೇ, ಹೀಗೆ ಅಪರಾಧಿ ಕೃತ್ಯಗಳಲ್ಲಿ ಒಳಗಾಗಿದ್ದಾರೆ. ದರ್ಶನ್ ನಿರಪರಾಧಿ ಎಂದು ಸಾಬೀತಾಗಿ ಹೊರ ಬರುತ್ತಾರೆ ಎಂಬ ನಂಬಿಕೆಯಿದೆ. ಇನ್ನು ಮುಂದಾದರೂ ದರ್ಶನ್ ಒಳ್ಳೆಯ ದಾರಿಯಲ್ಲಿ ನಡೆಯಬೇಕು ಎಂದು ಅವರ ಸೋದರಮಾವ ಶ್ರೀನಿವಾಸ್ ಮನವಿ ಮಾಡಿದರು.

ಕೊಲೆ ಆರೋಪಿ ನಟ ದರ್ಶನ್ ಬಚಾವ್ ಮಾಡಲು ಸಚಿವರ ಶತಪ್ರಯತ್ನ; ತನಿಖಾ ಪೊಲೀಸರಿಗೆ 128 ಬಾರಿ ಕರೆ

ಹೋಟೆಲ್‌ನ ಮಹಿಳಾ ಸಿಬ್ಬಂದಿಗೆ ಸಿಗರೇಟ್‌ನಿಂದ ಸುಟ್ಟಿದ್ದ ಕ್ರೂರಿ: ಮತ್ತೊಂದು ಪ್ರಕರಣದಲ್ಲಿ ಕೊಡಗಿನ ಹೋಂ ಸ್ಟೇ ಒಂದರಲ್ಲಿ ಮಹಿಳೆ ಮೇಲೆ ನಟ ದರ್ಶನ್ ಕ್ರೌರ್ಯ ಮೆರೆದಿದ್ದಾರೆ. ಕೊಡಗು ಜಿಲ್ಲೆಯ ಹೊಂ ಸ್ಟೇ ಯಲ್ಲಿ ಕೆಲವು ವರ್ಷಗಳ ಹಿಂದೆ ಘಟನೆ ನಡೆದಿತ್ತು. ನಟ ದರ್ಶನ್ ಸ್ನೇಹಿತರ ಜೊತೆ ಹೋಂ ಸ್ಟೇ ಯಲ್ಲಿ ಉಳಿದುಕೊಂಡಿದ್ದರು. ಈ ವೇಳೆ ಹೋಂ ಸ್ಟೇಯಲ್ಲಿ ಕೆಲಸ ಮಾಡುವ ಮಹಿಳೆಗೆ ಸಿಗರೇಟ್‌ನಿಂದ ಸುಟ್ಟು ಹಲ್ಲೆ ಮಾಡಿದ್ದರು ಎಂದು ಆರೋಪ ಮಾಡಿದ್ದಾರೆ.

click me!