Hassan: ಮಿಕ್ಸಿ ಬ್ಲಾಸ್ಟ್‌ಗೆ ಬಿಗ್‌ ಟ್ವಿಸ್ಟ್: ಪ್ರೇಯಸಿ ಕೊಲ್ಲಲು ಸಂಚು ರೂಪಿಸಿದ್ದ ಪಾಗಲ್‌ ಪ್ರೇಮಿ

By Sathish Kumar KHFirst Published Dec 27, 2022, 3:49 PM IST
Highlights

ಹಾಸನದ ಕೊರಿಯರ್ ಶಾಪ್ ನಲ್ಲಿ ಮಿಕ್ಸಿ ಬ್ಲಾಸ್ಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪಾಗಲ್‌ ಪ್ರೇಮಿಯೊಬ್ಬ ತನ್ನ ಪ್ರೀತಿ ನಿರಾಕರಿಸಿದಕ್ಕೆ ಮಹಿಳೆ ಕೊಲೆಗೆ ಸ್ಕೆಚ್ ಹಾಕಿದ ಹಿನ್ನೆಲೆಯು ಬೆಳಕಿಗೆ ಬಂದಿದೆ. ಇದಕ್ಕಾಗಿ ಪ್ರಮ್‌ ವಿಳಾಸ ಬರೆಯದೇ ಕೇವಲ ತಲುಪಿಸುವ ಅಡ್ರೆಸ್‌ ಬರೆದು ಮಿಕ್ಸಿಯಲ್‌ ಸ್ಪೋಟಕ ಇಟ್ಟು ಕಳಿಸಿದ್ದನು.

ಹಾಸನ (ಡಿ.27):  ಹಾಸನದ ಕೊರಿಯರ್ ಶಾಪ್ ನಲ್ಲಿ ಮಿಕ್ಸಿ ಬ್ಲಾಸ್ಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪಾಗಲ್‌ ಪ್ರೇಮಿಯೊಬ್ಬ ತನ್ನ ಪ್ರೀತಿ ನಿರಾಕರಿಸಿದಕ್ಕೆ ಮಹಿಳೆ ಕೊಲೆಗೆ ಸ್ಕೆಚ್ ಹಾಕಿದ ಹಿನ್ನೆಲೆಯು ಬೆಳಕಿಗೆ ಬಂದಿದೆ. ಇದಕ್ಕಾಗಿ ಪ್ರಮ್‌ ವಿಳಾಸ ಬರೆಯದೇ ಕೇವಲ ತಲುಪಿಸುವ ಅಡ್ರೆಸ್‌ ಬರೆದು ಮಿಕ್ಸಿಯಲ್‌ ಸ್ಪೋಟಕ ಇಟ್ಟು ಕಳಿಸಿದ್ದನು.

ಮಂಗಳೂರಿನಲ್ಲಿ ಇತ್ತೀಚೆಗೆ ನಡೆದಿದ್ದ ಕುಕ್ಕರ್‌ ಬಾಂಬ್‌ ಸ್ಪೋಟ ಮತ್ತು ಅದರ ಹಿಂದಿದ್ದ ಭಯೋತ್ಪಾದನೆ ಚಟುವಟಿಕೆ ಎಂಬುದು ಈಗಾಗಲೇ ತಿಳಿದಿರುವ ಸತ್ಯವಾಗಿದೆ. ಈಗ ಕಳೆದ ಒಂದು ದಿನದಿಂದ ಹಾಸನ ಮಿಕ್ಸಿ ಸ್ಪೋಟ ಪ್ರಕರಣದಿಂದ ಆತಂಕದಲ್ಲಿ ದಿನ ಕಳೆಯುತ್ತಿತ್ತು. ಆದರೆ ಇದಕ್ಕೆ ಕಾರಣ ಕೇಳಿದರೆ ನಗಬೇಕೋ, ಮರುಕ ವ್ಯಕಕ್ತಪಡಿಸಬೇಕೋ ಅಥವಾ ಪಾಪ ಎನ್ನಬೇಕೋ ಒಂದೂ ತಿಳಿಯುವುದಿಲ್ಲ. ಮಿಕ್ಸಿ ಸ್ಪೋಟದ ಹಿಂದಿರುವ ಪೂರ್ಣ ಪ್ರಮಾಣದ ಕಾರಣ ಇಲ್ಲಿದೆ ನೋಡಿ..

ಫ್ರಮ್ ವಿಳಾಸ ಬರೆಯದೇ ಕೋರಿಯರ್‌ ಮಾಡಿದ: ಪಾಗಲ್‌ ಪ್ರೇಮಿಯೊಬ್ಬ ಎರಡುಬಾರಿ ತನ್ನ ವಿಳಾಸ ಬರೆಯದೆ ಕೊರಿಯರ್ ಮೂಲಕ ಕೆಲ ವಸ್ತುಗಳನ್ನು ಕಳಿಸಿದ್ದನು. ಅಡ್ರೆಸ್‌ ಇಲ್ಲದೇ ತನಗೆ ಬಂದ ಎಲ್ಲಾ ಕೊರಿಯರ್ ಗಳನ್ನು ಮಹಿಳೆ ಕಸದ ಬುಟ್ಟಿಗೆ ಹಾಕಿದ್ದಳು. ಮೂರನೇ ಬಾರಿ ಆಕೆಯನ್ನೇ ಮುಗಿಸೋಕೆ ಪ್ಲಾನ್ ಮಾಡಿ ಮಿಕ್ಸಿಯೊಳಗೆ ಸ್ಪೋಟಕ ಇಟ್ಟು ಕೊರಿಯರ್ ಮಾಡಿದ್ದನು. ಆದರೆ, ಯಾರು ಕಳಿಸಿದ್ದಾರೆ ಎನ್ನುವ ನಿರ್ದಿಷ್ಟ ವಿಳಾಸ ಇಲ್ಲದ ಕೊರಿಯರ್ ತನಗೆ ಬೇಡ ಎಂದು ಮಹಿಳೆ ವಾಪಸ್ ಕೊರಿಯರ್ ಶಾಪ್ ಗೆ ಹಿಂದಿರುಗಿಸಿ ಹೋಗಿದ್ದಳು.

ಹಾಸನ ಕೊರಿಯರ್ ಶಾಪ್ ನಲ್ಲಿ ಮಿಕ್ಸಿ ಬ್ಲಾಸ್ಟ್, ಮಾಲೀಕನಿಗೆ ಗಂಭೀರ ಗಾಯ

ಮಿಕ್ಸಿ ಆನ್‌ ಮಾಡಿದರೆ ಬ್ಲಾಸ್ಟ್‌ ಆಗುವಂತೆ ಪ್ಲಾನ್: ಇನ್ನು ಮಹಿಳೆಯು ತನಗೆ ಬಂದಿದ್ದ ಕೋರಿಯರ್‌ ಅನ್ನು ವಾಪಸ್‌ ನೀಡಿದ್ದರಿಂದ ಅದನ್ನು ವಾಪಸ್‌ ಕಳುಹಿಸಲು 350 ರೂ. ಶುಲ್ಕ ಆಗುತ್ತದೆ ಎಂದು ಕೊರಿಯರ್ ಮಳಿಗೆಯ ಮಾಲೀಕ ಶಶಿ ಕೇಳಿದ್ದಾರೆ. ಆದರೆ ಮಹಿಳೆ ಹಣ ಕೊಡಲು ನಿರಾಕರಿಸಿದ್ದಕ್ಕೆ ಅದನ್ನ ಓಪನ್ ಮಾಡಿ ಪರಿಶೀಲನೆ ನಡೆಸಿದ್ದನು. ಮಿಕ್ಸಿ ಪರಿಶೀಲನೆ ವೇಳೆ ಬ್ಲಾಸ್ಟ್ ಆಗಿ  ಕೊರಿಯರ್ ಶಾಪ್ ಮಾಲೀಕ ಗಂಭೀರ ಗಾಯಗೊಂಡಿದ್ದಾನೆ. ಮಿಕ್ಸಿಯೊಳಗೆ ಸಣ್ಣ ಪ್ರಮಾಣದ ಸ್ಪೋಟಕ ಇಟ್ಟು ಅದನ್ನ ಆನ್ ಮಾಡಿದರೆ ಬ್ಲಾಸ್ಟ್ ಆಗುವಂತೆ ಪಾಗಲ್ ಪ್ರೇಮಿ ಪ್ಲಾನ್ ಮಾಡಿದ್ದನು. 

ಬಾಕ್ಸ್ ಓಪನ್‌ ಮಾಡಿದ್ದೇ ಕೋರಿಯರ್‌ ಮಳಿಗೆ ಮಾಲೀಕನ ದುರಾದೃಷ್ಟ:  ಕೊರಿಯರ್ ಬಾಕ್ಸ್ ಓಪನ್ ಮಾಡದೆಯೇ ಮಹಿಳೆ ಹಿಂದಿರುಗಿಸಿದಾಗ ಅದನ್ನು ಓಪನ್ ಮಾಡಿದ ಮಳಿಗೆ ಮಾಲೀಕ ಯಡವಟ್ಟು ಮಾಡಿಕೊಂಡಿದ್ದಾರೆ. ಇನ್ನು ಕೊರಿಯರ್ ಮಾಡಿದ್ದಾನೆನ್ನಲಾದ ವ್ಯಕ್ತಿಯನ್ನು ಪೊಲೀಸರು ಹುಡುಕುತ್ತಿದ್ದಾರೆ. ಹಾಸನದ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಈ ಕುರಿತು ಪೊಲೀಸರು ತನಿಖೆ ಚುರುಕು ಮಾಡಿದ್ದಾರೆ.

Hassan Mixi Blast : ಹಾಸನದಲ್ಲಿ ಮಿಕ್ಸಿ ಬ್ಲಾಸ್ಟ್: ರಾಜ್ಯದಲ್ಲಿ ಬೀಡು ಬಿಟ್ಟಿದ್ದಾರಾ ಉಗ್ರರು?

ಮಿಕ್ಸಿ ಸ್ಪೋಟ ಘಟನೆ ವಿವರವೇನು?:  ಹಾಸನದ ಕೊರಿಯರ್ ಶಾಪ್ ಗೆ  ಪಾರ್ಸಲ್ ಬಂದಿದ್ದ ಮಿಕ್ಸಿ ಬ್ಲಾಸ್ಟ್ ಆಗಿರುವ ಘಟನೆ ನಡೆದಿದೆ. ಹಾಸನ ನಗರದ ಕೆ.ಆರ್.ಪುರಂ ಬಡಾವಣೆಯ ಸಬ್ ರಿಜಿಸ್ಟರ್ ಕಛೇರಿ ರಸ್ತೆಯಲ್ಲಿರುವ ಡಿಟಿಡಿಸಿ‌ ಕೊರಿಯರ್ ಶಾಪ್ ಗೆ ಎರಡು ದಿನಗಳ ಹಿಂದೆ ಮಿಕ್ಸಿ ಪಾರ್ಸಲ್ ಬಂದಿತ್ತು. ಇದೀಗ ಮಿಕ್ಸಿ ಬ್ಲಾಸ್ಟ್  ಆಗಿದ್ದು, ಕೊರಿಯರ್ ಮಾಲೀಕ ಶಶಿಗೆ ಗಂಭೀರ ಗಾಯವಾಗಿ ಹಾಸನದ ಖಾಸಗಿ ಆಸ್ಪತ್ರೆಗೆ  ದಾಖಲು ಮಾಡಲಾಗಿದೆ.  ಪಾರ್ಸಲ್  ಬಂದ ಮಿಕ್ಸಿಯನ್ನು ನಗರದ ವ್ಯಕ್ತಿಯೊಬ್ಬರಿಗೆ  ಕೊರಿಯರ್ ಮಾಲೀಕ ಶಶಿ ಡಿಲವೆರಿ ಮಾಡಿದ್ದರು. ಎರಡು ದಿನಗಳ ಬಳಿಕ ಮಿಕ್ಸಿ ಸೂಕ್ತ ವಿಳಾಸದಿಂದ ಬಂದಿಲ್ಲ ಎಂದು ಕೊರಿಯರ್  ಸೆಂಟರ್ ಗೆ  ಆ ವ್ಯಕ್ತಿ ಪಾರ್ಸಲ್ ವಾಪಸ್ ನೀಡಿದ್ದರು.  ವಾಪಸ್ ಪಡೆಯುವ ವೇಳೆ  ಕೊರಿಯರ್ ಅಂಗಡಿ ಮಾಲೀಕ ಶಶಿ  ಮಿಕ್ಸಿ ಆನ್ ಮಾಡಿ ಪರಿಶೀಲನೆಗೆ ಮುಂದಾದರು. ಮಿಕ್ಸಿ ಆನ್ ಮಾಡುತ್ತಲೇ ಬ್ಲಾಸ್ಟ್ ಆಗಿ ಅದರ ತೀವೃತೆಗೆ ಕೊರಿಯರ್ ಕಛೇರಿಯ ಗ್ಲಾಸ್ ಪುಡಿಪುಡಿಯಾಗಿದೆ. ಗೋಡೆಗಳಿಗೆ ಹಾನಿಯಾಗಿತ್ತು.

click me!