ಯುವತಿಯ ನಗ್ನಗೊಳಿಸಿ ಚಿನ್ನದ ಸರ ದೋಚಿದರು!

By Web Desk  |  First Published Nov 20, 2019, 8:17 AM IST

ವಿದ್ಯಾರ್ಥಿಯ ನಗ್ನಗೊಳಿಸಿ, ಹಲ್ಲೆ ನಡೆಸಿ ಸರ ಕದ್ದರು!| ಮನೆಯಲ್ಲಿ ಒಂಟಿಯಾಗಿದ್ದ ವಿದ್ಯಾರ್ಥಿನಿ| ಪೀಣ್ಯಾ ಠಾಣಾ ವ್ಯಾಪ್ತಿಯಲ್ಲಿ ಘಟನೆ


ಬೆಂಗಳೂರು[ನ.20]: ವಿದ್ಯಾರ್ಥಿನಿ ಮನೆಯಲ್ಲಿ ಒಂಟಿಯಾಗಿದ್ದ ವೇಳೆ ಮನೆಗೆ ನುಗ್ಗಿದ ದುಷ್ಕರ್ಮಿಗಳಿಬ್ಬರು ಆಕೆಯ ವಿವಸ್ತ್ರಗೊಳಿಸಿ ಸರ ಕಸಿದುಕೊಂಡು ಹೋಗಿರುವ ಘಟನೆ ಪೀಣ್ಯ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಈ ಸಂಬಂಧ ಸಂತ್ರಸ್ತೆಯ ತಾಯಿ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಯುವತಿಯ ತಂದೆ ಹಲವು ವರ್ಷಗಳ ಹಿಂದೆ ಮೃತಪಟ್ಟಿದ್ದು, ತಾಯಿ ಮತ್ತು ತಮ್ಮನ ಜತೆ ಪೀಣ್ಯದ ಎಂ.ಇ.ಕಾಲೋನಿಯಲ್ಲಿ ನೆಲೆಸಿದ್ದಾರೆ.

Tap to resize

Latest Videos

ಪೆಟ್ರೋಲ್ ಕಳ್ಳರ ಕೈಚಳಕ CCTVಯಲ್ಲಿ ಸೆರೆ; ಖದೀಮರಿಗೆ ನಿಮ್ಮ ಗಾಡಿಯಲ್ಲ ಬೇರೆ!

ವಿದ್ಯಾರ್ಥಿನಿ ಸರ್ಕಾರಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಳೆ. ಯುವತಿಯ ತಾಯಿ ಟೈಲರಿಂಗ್‌ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಯುವತಿ ತಾಯಿ ಇತ್ತೀಚೆಗೆ ಪುತ್ರನ ಶಾಲೆ ಬಳಿ ವಿಚಾರಣೆಗೆಂದು ತೆರಳಿದ್ದರು. ಈ ವೇಳೆ ಮನೆಯಲ್ಲಿ ಯುವತಿಯೊಬ್ಬಳೆ ಇದ್ದಳು. ಬಾಗಿಲು ತೆರೆದು ಕಸಗೂಡಿಸುತ್ತಿದ್ದ ಸಂದರ್ಭದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಏಕಾಏಕಿ ಮನೆಗೆ ನುಗ್ಗಿ, ಆಕೆ ಬಾಯಿ ಮುಚ್ಚಿ ರೂಮ್‌ ಎಳೆದೊಯ್ದಿದ್ದಾರೆ.

ನಂತರ ಆಕೆಯನ್ನು ವಿವಸ್ತ್ರಗೊಳಿಸಿ ಮನೆಯಲ್ಲಿದ್ದ ಟಿ.ವಿ. ಹಾಗೂ ಶೋಕೇಶ್‌ ಒಡೆದು ಹಾಕಿದ್ದಾರೆ. ವಿವಸ್ತ್ರಗೊಳಿಸಿದ ದುಷ್ಕರ್ಮಿಗಳು ಕುತ್ತಿಗೆಯಲ್ಲಿದ್ದ 20 ಗ್ರಾಂ ತೂಕದ ಚಿನ್ನದ ಸರ, ಬೆಳ್ಳಿ ಉಂಗುರ ಹಾಗೂ ಬೆಳ್ಳಿಯ ಕಾಲು ಚೈನು ಕಸಿದುಕೊಂಡು ಹೋಗಿದ್ದಾರೆ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಯುವತಿಯ ತಾಯಿ ದೂರಿನಲ್ಲಿ ವಿವರಿಸಿದ್ದಾರೆ.

ಈತ ಅಂತಿಂಥ ಖದೀಮನಲ್ಲ; ಈತನ ‘ಕಳ್ಳಾಸನ’ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್!

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದು, ಘಟನೆ ಸಂಬಂಧ ಯುವತಿಯನ್ನು ಪ್ರಶ್ನಿಸಲಾಗಿದೆ. ಯುವತಿ ಗೊಂದಲದ ಹೇಳಿಕೆ ನೀಡುತ್ತಿದ್ದಾಳೆ. ಮನೆಯಲ್ಲಿ ಯಾರಾದರೂ ಭೇಟಿ ನೀಡಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಸಂತ್ರಸ್ತೆ ಮನೆ ಬಳಿ ಯಾವುದೇ ಸಿಸಿಟಿವಿಗಳಿಲ್ಲ. ತನಿಖೆ ಮುಂದುವರೆದಿದೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು.

click me!