
ಶಿವಮೊಗ್ಗ, [ನ.19]: ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿರುವ ಘಟನೆ ಶಿವಮೊಗ್ಗ ತಾಲ್ಲೂಕಿನ ದೊಡ್ಡಮಟ್ಟಿ ಗ್ರಾಮದಲ್ಲಿ ನಡೆದಿದೆ.
ಸಹೋದರನ ಪತ್ನಿ ಜತೆ ಚಕ್ಕಂದವಾಡುತ್ತಿದ್ದವನ ಹತ್ಯೆ: ಇತ್ತ ಸಂಬಂಧ ಬೆಳೆಸಿದ್ದ ಮಹಿಳೆ ಸಾವು
ಮಂಜಪ್ಪ (43) ಕೊಲೆಯಾದ ವ್ಯಕ್ತಿ. ಆಂಜನೇಯ (30) ಎಂಬಾತನೇ ಮಂಜಪ್ಪನನ್ನು ಕೊಲೆ ಮಾಡಿದ ಆರೋಪಿಯಾಗಿದ್ದು, ಅನೈತಿಕ ಸಂಬಂಧವೇ ಕೊಲೆಗೆ ಕಾರಣ ಎಂದು ಮೇಲ್ನೊಟಕ್ಕೆ ತಿಳಿದುಬಂದಿದೆ.
ಆಂಜನೇಯ್ಯ ಸಹೋದರ ವೆಂಕಟೆಶ್ ಪತ್ನಿ ಲಲಿತಾ ಜತೆ ಮಂಜಪ್ಪ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಇದು 4 ತಿಂಗಳ ಹಿಂದೆಯೇ ಈ ಪ್ರಕರಣ ಭುಗಿಲೆದ್ದಿದ್ದು, ಕೊನೆಗೆ, ರಾಜಿ-ಸಂಧಾನ ಮೂಲಕ ಶಮನವಾಗಿತ್ತು.
ಆದರೆ ಮಂಜಪ್ಪ ಹಳೇ ಚಾಳಿಯನ್ನು ಬಿಡದ ಮಂಜಪ್ಪ ಪುನಃ ನಿನ್ನೆ [ಸೋಮವಾರ] ರಾತ್ರಿ ಲಲಿತಾ ಜತೆ ಚಕ್ಕಂದವಾಡಲು ಹೋಗಿದ್ದಾನೆ. ಇದನ್ನು ನೋಡಿದ ಆಂಜನೇಯ್ಯ, ಕುಪಿತಗೊಂಡು ಮಂಜಪ್ಪನನ್ನ ಹತ್ಯೆ ಮಾಡಿದ್ದಾನೆ.
ರೌಡಿ ಲಕ್ಷ್ಮಣ ಮರ್ಡರ್ ಮಿಸ್ಟರಿ; ವರ್ಷಿಣಿ ಬಿಚ್ಚಿಟ್ಳು ಲವ್, ಸೆಕ್ಸ್ ಹಿಸ್ಟ್ರಿ!
ಈ ಬಗ್ಗೆ ಕುಂಸಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಅಂಜನೇಯನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆದ್ರೆ, ಇನ್ನೊಂದೆಡೆ ವೆಂಕಟೇಶ್ ಪತ್ನಿ ಲಲಿತಾ ಈ ಘಟನೆಯಿಂದ ಹೆದರಿ ವಿಷ ಕುಡಿದು ಅಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ