Bengaluru: ಕುಡಿಯಲು ಹಣ ಕೊಡಲಿಲ್ಲವೆಂದು ತಂದೆ ಕೊಲೆಗೈದ ಪಾಪಿ ಪುತ್ರ: ಶವದೊಂದಿಗೆ 15 ದಿನ ಕಳೆದ

Published : Apr 27, 2023, 10:54 AM ISTUpdated : Apr 27, 2023, 11:03 AM IST
Bengaluru: ಕುಡಿಯಲು ಹಣ ಕೊಡಲಿಲ್ಲವೆಂದು ತಂದೆ ಕೊಲೆಗೈದ ಪಾಪಿ ಪುತ್ರ: ಶವದೊಂದಿಗೆ 15 ದಿನ ಕಳೆದ

ಸಾರಾಂಶ

ಮದ್ಯಪಾನ ಮಾಡಲು ಅಹಣ ಕೊಲಡಲಿಲ್ಲವೆಂದು ಸ್ವಂತ ಮಗನೇ ತಂದೆಯನ್ನು ಕೊಲೆ ಮಾಡಿ, ನಂತರ ತಂದೆಯೊಂದಿಗೆ 15 ದಿನಗಳು ಕಳೆದಿರುವ ದುರ್ಘಟನೆ ಗೋವಿಂದರಾಜನಗರದ ಮಾರೇನಹಳ್ಳಿಯಲ್ಲಿ ನಡೆದಿದೆ.

ಬೆಂಗಳೂರು (ಏ.27): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮದ್ಯಪಾನ ಮಾಡಲು ಅಹಣ ಕೊಲಡಲಿಲ್ಲವೆಂದು ಸ್ವಂತ ಮಗನೇ ತಂದೆಯನ್ನು ಕೊಲೆ ಮಾಡಿ, ನಂತರ ತಂದೆಯೊಂದಿಗೆ 15 ದಿನಗಳು ಕಳೆದಿರುವ ದುರ್ಘಟನೆ ಗೋವಿಂದರಾಜನಗರದ ಮಾರೇನಹಳ್ಳಿಯಲ್ಲಿ ನಡೆದಿದೆ.

ಮದ್ಯಪಾನ ಎನ್ನುವುದು ದೊಡಡ ವ್ಯಸನವಾಗಿದ್ದು, ಇದಕ್ಕೆ ತಾವಷ್ಟೇ ಬಲಿಯಾಗುವುದಲ್ಲದೇ ಕುಟುಂಬ ಸದಸ್ಯರನ್ನೂ ಬಲಿಕೊಡುತ್ತಿದ್ದಾರೆ. ಬೆಂಗಳೂರಿನಲ್ಲಿಯೂ ಕೂಡ ಪಾಪಿ ಮಗ ತನ್ನ ಕುಡಿತದ ಚಟಕ್ಕೆ ತಂದೆಯನ್ನೇ ಬಲಿ ಪಡೆದುಕೊಂಡಿದ್ದಾನೆ. ತಂದೆ ಮತ್ತು ಮಗ ಸಿಲಿಕಾನ್‌ ಸಿಟಿ ಬೆಂಗಳೂರಿಗೆ ದುಡಿಮೆಗಾಗಿ ಆಗಮಿಸಿ ಗುಡಿಸಲಿನಲ್ಲಿ ವಾಸವಾಗಿದ್ದರು. ತಂದೆ ಸೆಕ್ಯೂರಿಟಿ ಗಾರ್ಡ್‌ ಕೆಲಸ ಮಾಡುತ್ತಿದ್ದರೆ ಮಗ ಆಟೋ ಓಡಿಸುತ್ತಿದ್ದನು. ಆದರೆ, ಚುನಾವಣೆ ನೀತಿ ಸಂಹಿತೆ ಆರಂಭವಾದಾಗಿನಿಂದಲೂ ಆಟೋ ಓಡಿಸುವುದನ್ನು ಬಿಟ್ಟು, ಚುನಾವಣಾ ಪ್ರಚಾರ ಕಾರ್ಯ ಸಭೆಗಳಿಗೆ ಹೋಗಿ ಅಲ್ಲಿ ನೀಡುವ ಹಣವನ್ನು ಪಡೆದು ಕುಡಿದು ಬರುತ್ತಿದ್ದನು.

Berngaluru: ರ್ಯಾಪಿಡೋ ಚಾಲಕನಿಂದ ಲೈಂಗಿಕ ಕಿರುಕುಳ: ಚಲಿಸುವ ಬೈಕ್‌ನಿಂದಲೇ ಜಿಗಿದ ಯುವತಿ

ಕುಡಿಯಲು ಹಣ ಕೊಡುವಂತೆ ತಂದೆ ಮೇಲೆ ಹಲ್ಲೆ: ಆದರೆ, ಅಂದು ಬೆಳಗ್ಗೆಯಿಂದಲೂ ತನಗೆ ಕುಡಿಯಲು ಯಾವುದೇ ವ್ಯವಸ್ಥೆಯೂ ಆಗದ ಹಿನ್ನೆಲೆಯಲ್ಲಿ ತಂದೆಯ ಬಳಿ ಹಣವನ್ನು ಕೇಳಿದ್ದಾನೆ, ನೀನು ದುಡಿಮೆ ಬಿಟ್ಟು ಮದ್ಯಪಾನ ಮಾಡುತ್ತಿದ್ದರೆ ಜೀವನ ನಡೆಸುವುದು ಹೇಗೆ? ಎಂದು ಬುದ್ಧಿ ಹೇಳಿ ಹಣ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಇದರಿಂದ ಕೋಪಗೊಂಡ ಪಾಪಿ ಮಗ ಗುಡಿಸಲಿನಲ್ಲಿಯೇ ಇದ್ದ ಇಟ್ಟಿಗೆಯನ್ನು ತೆಗೆದುಕೊಂಡು ತನ್ನ ತಂದೆಯ ತಲೆಗೆ ಹೊಡೆದಿದ್ದಾನೆ. ನಂತರ ತಂದೆ ತೀವ್ರ ರಕ್ತಸ್ರಾವ ಉಂಟಾಗಿ ಬಳಲುತ್ತಿದ್ದರೂ ಅವರನ್ನು ಆಸ್ಪತ್ರೆಗೆ ದಾಖಲಿಸದೇ ಹಾಗೆಯೇ ಬಿಟ್ಟಿದ್ದಾನೆ. ಸ್ಥಳದಲ್ಲಿಯೇ ತೀವ್ರ ರಕ್ತಸ್ರಾವ ಉಂಟಾಗಿ ತಂದೆ ಸಾವನ್ನಪ್ಪಿದ್ದಾರೆ.

ಕೊಲೆ ಮಾಡಿ 15 ದಿನದ ನಂತರ ಮಾಹಿತಿ ಬಹಿರಂಗ: ಬಸವರಾಜು (60) ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಅವರ ಪುತ್ರ ನೀಲಾಧರ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಈ ಘಟನೆಯು ಬೆಂಗಳೂರು ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಾರೇನಹಳ್ಳಿ ಪಿಎಸ್ ಲೇಔಟ್‌ನಲ್ಲಿ ನಡೆದಿದೆ. ಕಳೆದ 15 ದಿನಗಳ ಹಿಂದೆಯೇ ತಂದೆಯನ್ನು ಕೊಲೆ ಮಾಡಿರುವ ಆರೋಪಿ, ನೀಲಾಧರ ತಂದೆಯ ಶವದೊಂದಿಗೇ ವಾಸ ಮಾಡಿದ್ದಾನೆ. ಇನ್ನು ಶವದ ಕೊಳೆತ ದುರ್ವಾಸನೆ ಅಕ್ಕಪಕ್ಕದವರಿಗೆ ಬಂದ ಹಿನ್ನೆಲೆಯಲ್ಲಿ ಹೋಗಿ ನೋಡಿದಾಗ ಶವ ಇರುವುದು ಪತ್ತೆಯಾಗಿದೆ. ನಂತರ ಈ ವಿಚಾರವನ್ನು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಾಗ ಮಗನಿಂದಲೇ ಕೊಲೆಯಾಗಿರೋದು ಪತ್ತೆಯಾಗಿದೆ. 

ಚಿತ್ರನಟಿ ತಾರಾ, ಶೃತಿಗೆ ಜೈಲು ಭೀತಿ: ಎಫ್‌ಐಆರ್‌ ದಾಖಲಿಸಿದ ಚುನಾವಣಾ ಆಯೋಗ

ಮದ್ಯಪಾನದ ಚಟದಿಂದ ಕುಟುಂಬವೇ ನಾಶ: ದುಡಿಮೆಗಾಗಿ ಬೆಂಗಳೂರಿಗೆ ಆಗಮಿಸಿದ್ದ ತಂದೆ- ಮಗನ ಹಾಗೂ ಅವರ ಇಡೀ ಕುಟುಂಬವೇ ಸಂಕಷ್ಟಕ್ಕೆ ಸಿಲಿಕಿದೆ. ಕುಡಿತದ ಚಟದಿಂದ ಅಪ್ಪನನ್ನೇ ಬಲಿ ಪಡೆದ ಪಾಪಿ ಮಗ ಈಗ ಜೈಲು ಪಾಲಾಗಿದ್ದಾನೆ. ಮೃತ ಬಸವರಾಜು ಶವದ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಸಸ್ಯ ಆರೋಪಿ ಪೊಲೀಸರ ವಶದಲ್ಲಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ಅಲ್ಲಿ ಪ್ರಕಟವಾಗುವ ಶಿಕ್ಷೆಯ ಅನುಸಾರ ಜೈಲು ಶಿಕ್ಷೆ ಅನುಭವಿಸಲಿದ್ದಾನೆ ಎಂದು ತಿಳಿದುಬಂದಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ
ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?