ಬೆಂಗಳೂರಿನಲ್ಲಿ ಮ್ಯದ ಸೇವನೆ ನಂತರ ಮೋಜಿಗಾಗಿ ವಾರಕ್ಕೆರಡು ಕೊಲೆ ಮಾಡುತ್ತಿದ್ದ ನಟೋರಿಯಸ್ ಹಂತಕನನ್ನು ಬನಶಂಕರಿ ಠಾಣೆ ಪೊಲೀಸರು ಹೆಡೆಮುರಿಕಟ್ಟಿದ್ದಾರೆ.
ಬೆಂಗಳೂರು (ಮೇ 26): ಬೆಂಗಳೂರಿನ ಬನಶಂಕರಿ ವ್ಯಾಪ್ತಿಯಲ್ಲಿ ಕಂಡ ಕಂಡವರನ್ನು ಎಳೆದುಕೊಂಡು ಹೋಗಿ ಕಲ್ಲು ಎತ್ತಿಹಾಕಿ ಕೊಲೆ ಮಾಡುತ್ತಿದ್ದ ನಟೋರಿಯಸ್ ಹಂತಕನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಈತ ಕಳೆದೊಂದು ವಾರದಲ್ಲಿಯೇ ರಸ್ತೆ ಬದಿ ಮಲಗಿದ್ದ ಇಬ್ಬರ ತಲೆ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಕೊಲೆ ಮಾಡಿ ಹೋಗುತ್ತಿದ್ದನು.
ಹೌದು, ಬೆಂಗಳೂರಲ್ಲಿ ನಟೋರಿಯಸ್ ಕೊಲೆಗಾರನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಬನಶಂಕರಿ ನಿವಾಸಿ ಗಿರೀಶ್ ಆಗಿದ್ದಾನೆ. ಈತ ಕಳೆದ ಒಂದು ವಾರದಲ್ಲಿ (7 ದಿನಗಳಲ್ಲಿ) ಎರಡು ಕೊಲೆ ಮಾಡಿ ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಾ ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದ್ದನು. ವಾಸದ ಮನೆಗಳ ಕಾಂಪೌಂಡ್, ಅಪಾರ್ಟ್‌ಮೆಂಟ್ ಗೇಟ್ ಹಾಗೂ ಅಂಗಡಿ ಮುಂಗಟ್ಟುಗಳ ಎದುರಿಗೆ ಮಲಗಿಸಿ ತಲೆ ಮೇಲೆ ದೊಡ್ಡ ಕಲ್ಲು ಎತ್ತಿಹಾಕಿ ಭೀಕರವಾಗಿ ಕೊಲೆ ಮಾಡಿ ಹೋಗುತ್ತಿದ್ದನು.ಇದರಿಂದ ಸ್ಥಳಿಯ ನಿವಾಸಿಗಳು ರಾತ್ರಿ ವೇಳೆ ಮನೆಯ ಹೊರಗೆ ಬರಲೂ ಆತಂಕಪಡುವಂತಾಗಿತ್ತು.
ಧ್ವನಿ ಬದಲಿಸೋ ಆ್ಯಪ್ ಬಳಸಿ ಮಹಿಳಾ ಕಾಲೇಜಿನ ಶಿಕ್ಷಕಿಯಂತೆ ಮಾತಾಡಿ 7 ಹುಡುಗಿಯರ ಮೇಲೆ ಅತ್ಯಾಚಾರ ಎಸಗಿದ ಖದೀಮ!
ಈತ ಕೊಲೆ ಮಾಡುವ ಮುನ್ನ ಕಂಠ ಪೂರ್ತಿ ಮದ್ಯ ಸೇವಿಸಿ ಬೀದಿ ಬದಿ ಮಲಗಿದ್ದವರ ತಲೆಮೇಲೆ ಕಲ್ಲೆಸೆದು ಸಾಯಿಸುತ್ತಾನೆ. ಮೇ.12 ರಂದು ರಾತ್ರಿ ವೇಳೆ ಜಯನಗರ 7ನೇ ಬಡಾವಣೆಯಲ್ಲಿ ವ್ಯಕ್ತಿ ಕೊಲೆ ಮಾಡಿದ್ದನು. ನಂತರ ಅಲ್ಲಿಂದ ಆತ ಮೃತದೇಹವನ್ನು ಎಳೆದುತಂಡು ಮುಖ ಗುರುತು ಸಿಗದಂತೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹೋಗುತ್ತಿದ್ದನು. ಈ ಘಟನೆ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೇ.18 ರಂದು ಸಿಟಿ ಮಾರ್ಕೆಟ್ ಹಿಂಭಾಗದ ಕಾಂಪ್ಲೆಕ್ಸ್ ನಲ್ಲಿಯೂ ಇದೇ ಮಾದರಿಯಲ್ಲಿ ಮತ್ತೊಂದು ಭೀಕರ ಕೊಲೆಯಾಗಿತ್ತು.
ಕಂಠಪೂರ್ತಿ ಕುಡಿದು ಡ್ರೈನೇಜ್ ಪೈಪ್‌ನಲ್ಲಿ ಸಿಲುಕಿಕೊಂಡ ಕುಡುಕ, ವೀಡಿಯೋ ವೈರಲ್!
ಎರಡೂ ಕಡೆಗಳಲ್ಲಿ ಬೀದಿ ಬದಿಯಲ್ಲಿ ಮಲಗಿದ್ದವರನ್ನು ಗುರುತಿಸಿ ಮೋಜಿಗಾಗಿ ಕೊಲೆ ಮಾಡಿ ನಂತರ ಅಲ್ಲಿಂದ ಎಳೆದೊಯ್ದು ಕಲ್ಲು ಎತ್ತಿಹಾಕಿ ಹೋಗುತ್ತಿದ್ದನು. ಈ ಘಟನೆ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡ ಸಿಟಿ ಮಾರ್ಕೆಟ್ ಹಾಗೂ ಬನಶಂಕರಿ ಠಾಣೆ ಪೊಲೀಸರು ಆರೋಪಿಯ ಹುಡುಕಾಟ ನಡೆಸಿದ್ದರು. ಸಿಸಿ ಕ್ಯಾಮೆರಾ ಹಾಗೂ ಇತರೆ ಕೊಲೆ ಮಾಡಿದ ಸಾಕ್ಷ್ಯಗಳ ಆಧಾರದಲ್ಲಿ ಬನಶಂಕರಿ ಠಾಣೆ ಪೊಲೀಸರಿಂದ ಆರೋಪಿಯನ್ನು ಬಂಧಿಸಲಾಗಿದೆ. ಈಗ ಬನಶಂಕರಿ ಹಾಗೂ ಜಯನಗರ ಸುತ್ತಲಿನ ಜನರ ಆತಂಕ ದೂರವಾಗಿದೆ.