Latest Videos

ಯಾದಗಿರಿ: ಮಿನರಲ್ ವಾಟರ್ ಬಾಟೆಲ್‌ನಲ್ಲಿ ಸತ್ತ ಜಿರಳೆ ಪತ್ತೆ!

By Ravi JanekalFirst Published May 26, 2024, 10:11 AM IST
Highlights

ಬಾಯಾರಿಕೆಗೆ ನೀರು ಕುಡಿಯಲು ಮಿನರಲ್ ವಾಟರ್ ಬಾಟಲ್‌  ಖರೀದಿಸಿ ಗ್ರಾಹಕ ಬಾಟಲಿಯಲ್ಲಿ ಜಿರಳೆ ಕಂಡು ಹೌಹಾರಿದ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣದಲ್ಲಿರುವ ಶಾಂತು ಹೋಟೆಲ್‌ನಲ್ಲಿ ನಡೆದಿದೆ.

ಯಾದಗಿರಿ (ಮೇ.26): ಬಾಯಾರಿಕೆಗೆ ನೀರು ಕುಡಿಯಲು ಮಿನರಲ್ ವಾಟರ್ ಬಾಟಲ್‌  ಖರೀದಿಸಿ ಗ್ರಾಹಕ ಬಾಟಲಿಯಲ್ಲಿ ಜಿರಳೆ ಕಂಡು ಹೌಹಾರಿದ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣದಲ್ಲಿರುವ ಶಾಂತು ಹೋಟೆಲ್‌ನಲ್ಲಿ ನಡೆದಿದೆ.

ಹೌದು, ಇಷ್ಟು ದಿನ ಕೂಲ್‌ಡ್ರಿಂಕ್ಸ್ ಪೌಚ್‌, ಫುಡ್ ಆರ್ಡರ್‌ನಲ್ಲಿ ಜಿರಳೆ ಪತ್ತೆಯಾಗಿರುವ ಸುದ್ದಿ ಕೇಳಿದ್ದೇವು. ಅದರಲ್ಲಿ ಪ್ಯಾಕ್ ಮಾಡಿರೋದ್ರಿಂದ ಓಪನ್ ಮಾಡುವವರೆಗೆ ಕಾಣಿಸುತ್ತಿರಲಿಲ್ಲ. ಆದರೆ ಮಿನರಲ್ ವಾಟರ್ ಬಾಟಲಿಯಲ್ಲಿ ಜಿರಳೆ ಕಂಡು ಗ್ರಾಹ ಬೆಚ್ಚಿಬಿದ್ದಿದ್ದಾನೆ. 

 

ಕುಡಿದ ಮತ್ತಿನಲ್ಲಿ ತಲೆಮೇಲೆ ಕಲ್ಲು ಎತ್ತಿಹಾಕಿ ಕುಡುಕ ಪರಾರಿ, ವ್ಯ ಗಂಭೀರ ಗಾಯಗೊಂಡ ವ್ಯಕ್ತಿ ಸಾವು!

ಶಾಂತು ಹೆಸರಿನ ಹೋಟೆಲ್‌ಗೆ ಹೋಗಿದ್ದ ಗ್ರಾಹಕ. ಬಾಯಾರಿಕೆ ತಣಿಸಲು SPLASH ಕಂಪನಿಯ ವಾಟರ್ 2ಲೀ. ಬಾಟಲಿ ಖರೀದಿಸಿದ್ದಾನೆ. ಇನ್ನೇನು ಬಾಟಲಿ ಎತ್ತಿ ಗಟಗಟ ಕುಡಿಯಬೇಕು ಎನ್ನುವಷ್ಟರಲ್ಲಿ ಬಾಟಲಿಯಲ್ಲಿ ಜಿರಳೆ ಸತ್ತು ಬಿದ್ದಿರುವುದು ಕಂಡಿದ್ದಾನೆ. ಇದೇ ಮೊದಲ ಬಾರಿ ವಾಟರ್ ಬಾಟಲಿಯಲ್ಲಿ ಜಿರಳೆ ಪತ್ತೆಯಾಗಿರುವುದು ಕಂಡು ಹೋಟೆಲ್‌ಗೆ ಬಂದಿದ್ದ ಗ್ರಾಹಕರು ಸಹ ಬೆಚ್ಚಿಬಿದ್ದಿದ್ದು, ಈಗಾಗಲೇ ಆ ಕಂಪನಿಯ ಬಾಟಲಿ ಖರೀದಿಸಿ ನೀರು ಕುಡಿದವರು ಕಣ್ಣುಕಣ್ಣು ಬಿಡುವಂತಾಯ್ತು.

 

ಅರಣ್ಯಪ್ರದೇಶಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳು ಮೂರು ಸಾವಿರಕ್ಕೂ ಅಧಿಕ ಮರಗಳು ಸುಟ್ಟು ಭಸ್ಮ!

ಆಹಾರ ಸುರಕ್ಷತಾ ಅಧಿಕಾರಿಗಳ ಗಮನಕ್ಕೆ ತಂದ ಗ್ರಾಹಕ. ಗ್ರಾಹಕರ ದೂರಿನ ಮೇರೆಗೆ ಕೂಡಲೇ ಸ್ಥಳಕ್ಕೆ ಬಂದ ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ಹೋಟೆಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಎರಡು ಲೀ.  ಕಂಪನಿಯ ಬಾಟಲಿಗಳನ್ನು ವಶಕ್ಕೆ ಪಡೆದುಕೊಂಡರು. ಶ್ರೇಯಸ್ ಟ್ರೇಡರ್ಸ್ ಕಂಪನಿ SPLASH ಕಂಪನಿಯ ನೀರಿನ ವಾಟರ್ ಬಾಟಲಿಯನ್ನು ಡಿಸ್ಟ್ರಿಬ್ಯೂಟರ್ ಮಾಡುತ್ತಿದೆ. ಯಾದಗಿರಿ ಜಿಲ್ಲೆಯಾದ್ಯಂತ ಸ್ಪಾಶ್ ಹೆಸರಿನ ಬಾಟಲಿಗಳು ಮಾರಾಟವಾಗುತ್ತಿವೆ. ಹೀಗಾಗಿ ಶ್ರೇಯಸ್ ಟ್ರೇಡರ್ಸ್ ಕಂಪನಿಯ ಗೋಡೌನ್ ಗೆ ಆಹಾರ ಸುರಕ್ಷತಾ ಅಧಿಕಾರಿಗಳ ಭೇಟಿ ನೀಡಿ ಅಲ್ಲಿಯೂ ನೀರಿನ ಬಾಟಲಿ ಪರಿಶೀಲನೆ ನಡೆಸಿತು.

ಸದ್ಯ ಗ್ರಾಹಕನ ದೂರಿನ ಮೇರೆಗೆ ಮಹಾರಾಷ್ಟ್ರದ ಸೊಲ್ಲಾಪುರ ಮೂಲದ SPLASH ಡಿಸ್ಟ್ರಿಬ್ಯೂಟರ್ ಸಂಗನಗೌಡ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

click me!