Latest Videos

ಕಾರು-ಟ್ರಕ್ ನಡುವೆ ಭೀಕರ ಅಪಘಾತ; ಮಗು ಸೇರಿ 6 ಮಂದಿ ಸ್ಥಳದಲ್ಲೇ ದುರ್ಮರಣ!

By Ravi JanekalFirst Published May 26, 2024, 8:44 AM IST
Highlights

ಕಾರು-ಟ್ರಕ್ ನಡುವೆ ಭೀಕರ ಅಪಘಾತಕ್ಕೆ 6 ಮಂದಿ ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಹಾಸನ ಹೊರವಲಯದ ಕಂದಲಿ ಸಮೀಪದ ಈಚನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಘಟನೆ ನಡೆದಿದೆ.

ಹಾಸನ (ಮೇ.26): ಕಾರು-ಟ್ರಕ್ ನಡುವೆ ಭೀಕರ ಅಪಘಾತಕ್ಕೆ 6 ಮಂದಿ ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಹಾಸನ ಹೊರವಲಯದ ಕಂದಲಿ ಸಮೀಪದ ಈಚನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಘಟನೆ ನಡೆದಿದೆ.

ಕಾರಿನಲ್ಲಿದ್ದ ಮೂವರು ಮಹಿಳೆಯರು, ಇಬ್ಬರು ಪುರುಷರು, ಒಂದು ಮಗು ಸೇರಿ ಆರು ಜನರು ಮೃತಪಟ್ಟಿದ್ದಾರೆ. ಮೃತರೆಲ್ಲರೂ ದೇವನಹಳ್ಳಿಯವರು ಎಂದು ಹೇಳಲಾಗಿದೆ.

ಘಟನೆ ಬಳಿಕ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಮೃತದೇಹಗಳನ್ನ ಹೊರತೆಗೆದ ಪೊಲೀಸರು. ಸ್ಥಳಕ್ಕೆ ಎಸ್‌ಪಿ ಮಹಮದ್ ಸುಜೇತಾ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಹಾಸನ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಧರ್ಮಸ್ಥಳ ದರ್ಶನ ಮುಗಿಸಿ ಬರುವಾಗ ಭೀಕರ ಅಪಘಾತ: ಸ್ಥಳದಲ್ಲೇ ನಾಲ್ವರು ಸಾವು!

click me!