ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿ ಸ್ವತಃ ಸಿಐಡಿ ಅಧಿಕಾರಿಗಳೇ ನಿರುದ್ಯೋಗಿ ಯುವಕನಿಂದ 40 ಲಕ್ಷ ರೂ. ವಂಚನೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರು (ಮೇ 14): ರಾಜ್ಯದಲ್ಲಿ ನಿರುದ್ಯೋಗ ತಾಂಡವಾಡುತ್ತಿದೆ. ಅಂಥದ್ದರಲ್ಲಿ ಕಾನೂನು ಸಂರಕ್ಷಣೆ, ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕಾದ ಸಿಐಡಿ ಪೊಲೀಸ್ ಅಧಿಕಾರಿ ಆಗಿದ್ದುಕೊಂಡೇ ಸರ್ಕಾರಿ ಕೆಲಸ ಕೊಡಿಸುವುದಾಗಿ 40 ಲಕ್ಷ ರೂ. ವಂಚನೆ ಮಾಡಿರುವ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.
ಹೌದು, ರಾಜ್ಯದಲ್ಲಿ ವಿದ್ಯಾಭ್ಯಾಸ, ಶೈಕ್ಷಣಿಕ ಅರ್ಹತೆ ಅನುಗುಣವಾಗಿ ಕೆಲಸ ಸಿಗದೇ ಲಕ್ಷಾಂತರ ನಿರುದ್ಯೋಗಿಗಳು ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕುತ್ತಾರೆ. ಸಾವಿರಾರು ಅಭ್ಯರ್ಥಿಗಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಓದಿ ಪರೀಕ್ಷೆ ಬರೆಯುತ್ತಾರೆ. ಆದರೆ, ಇದಯಾವುದನ್ನೂ ಮಾಡದೇ ವಾಮ ಮಾರ್ಗದಲ್ಲಿ ಹಣ ಕೊಟ್ಟು ಕೆಲಸ ಪಡೆಯಬಹುದು ಎಂಬುವವರಿಗೆ ಸರ್ಕಾರದಿಂದ ಸರಿಯಾಗಿ ಬುದ್ಧಿ ಕಲಿಸಬೇಕು. ಆದರೆ, ಭ್ರಷ್ಟಾಚಾರಿಗಳನ್ನು ಹಿಡಿದು ಶಿಕ್ಷೆಗೆ ಗುರಿ ಪಡಿಸಬೇಕಾದ ಸಿಐಡಿ ಇಲಾಖೆ ಅಧಿಕಾರಿಗಳೇ ಹೀಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ 40 ಲಕ್ಷ ರೂ. ಪಡೆದು ವಂಚನೆ ಮಾಡಿದ್ದಾರೆ.
undefined
ಶೋಕಿಗಾಗಿ ಸಾಲ ಮಾಡಿ, ಸಾಲಕ್ಕಾಗಿ 6 ತಿಂಗಳ ಗಂಡು ಮಗುವನ್ನೇ ಮಾರಿದ ಅಪ್ಪ
ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಸರ್ಕಾರಿ ಅಧಿಕಾರಿಯಿಂದ ಲಕ್ಷಾಂತರ ಹಣ ವಂಚನೆ ಆರೋಪ ಕೇಳಿ ಬಂದಿದೆ. ಉದ್ಯೋಗ ಕೊಡಿಸುವುದಾಗಿ ವಂಚನೆ ಮಾಡಿದ ಸಿಐಡಿಯ ಮಹಿಳಾ ಪೊಲೀಸ್ ಅಧಿಕಾರಿ ಸೇರಿ ಇಬ್ಬರನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಸಿಐಡಿ ಘಟಕದಲ್ಲಿ ಸೆಕ್ಷನ್ ಸೂಪರಿಂಟೆಂಡೆಂಟ್ ಆಗಿದ್ದ ಅನಿತಾ.ಬಿ.ಎಸ್ ಹಾಗೂ ರಾಮಚಂದ್ರ ಭಟ್ ಬಂಧಿತರಾಗಿದ್ದಾರೆ.
ಬಂಧಿತ ಆರೋಪಿಗಳು ಚಿಕ್ಕಮಗಳೂರಿನ ಕಲ್ಯಾಣನಗರದ ನಿವಾಸಿ ಸುನಿಲ್ ಎಂಬುವವರಿಗೆ ಬರೋಬ್ಬರಿ 40 ಲಕ್ಷ ರೂ. ವಂಚನೆ ಮಾಡಿದ್ದಾರೆ. ರಾಮಚಂದ್ರಭಟ್ ಎನ್ನುವವರು ಸಿಐಡಿ ಇಲಾಖೆ ಅಧಿಕಾರಿ ಅನಿತಾ ಅವರನ್ನು ಭೇಟಿ ಮಾಡಿಸಿ ಪರಿಚಯ ಮಾಡಿಕೊಟ್ಟಿದ್ದಾರೆ. ಈ ವೇಳೆ ನಿರುದ್ಯೋಗಿ ಯುವಕ ಸುನೀಲ್‌ಗೆ ಕೆಪಿಎಸ್‌ಸಿ ನೇಮಕಾತಿಯ ಮೂಲಕ ಲೋಕೋಪಯೋಗಿ (ಪಿಡಬ್ಲ್ಯೂಡಿ) ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಹುದ್ದೆಯನ್ನು ಕೊಡಿಸುದಾಗಿ ನಂಬಿಸಿದ್ದರು. ಇದಕ್ಕೆ ಹಂತ ಹಂತವಾಗಿ ನೀನು ಹಣ ಕೊಟ್ಟರೆ ಕೆಲಸ ಕೊಡಿಸುವುದಾಗಿ ತಿಳಿಸಿ ನಲವತ್ತು ಲಕ್ಷ ರೂ.ವರೆಗೆ ಹಣ ಪಡೆದಿದ್ದಾರೆ. ಆದರೆ, ಕೆಲಸ ಮಾತ್ರ ಸಿಕ್ಕೇ ಇಲ್ಲ.
ಅಮೃತಧಾರೆ ನಟಿ ಛಾಯಾಸಿಂಗ್‌ಗೆ 66 ಗ್ರಾಂ ಗೋಲ್ಡ್, 159 ಗ್ರಾಂ ಬೆಳ್ಳಿ ಕೊಟ್ಟ ಬೆಂಗಳೂರು ಪೊಲೀಸ್ ಕಮಿಷನರ್
ಯುವಕನಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ವಂಚನೆ ಮಾಡಿದ್ದಾರೆಂಬ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ತಮ್ಮ ಹಣ ಹಿಂತಿರುಗಿಸುವಂತೆ ಕೇಳಿದ್ದಾನೆ. ಆಗ ಯುವಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಉದ್ಯೋಗಕ್ಕೆ ವಾಮ ಮಾರ್ಗದಲ್ಲಿ ಹಣ ಕೊಟ್ಟು ಭ್ರಷ್ಟಾಚಾರ ಮಾಡಿದ ಆರೋಪದಡಿ ನಿನ್ನನ್ನು ಜೈಲಿಗೆ ಹಾಕಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಯುವಕ ಸುನೀಲ್ ಕೊನೆಗೆ ಮನೆಯವರ ಒತ್ತಾಸೆ ಮೇರೆಗೆ ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ವಂಚನೆ ದೂರು ದಾಖಲಿಸಿದ್ದಾನೆ. ಆಗ ಕೇಸ್ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.