ಸ್ಯಾಂಡಲ್‌ವುಡ್ ನಟಿ ಛಾಯಾಸಿಂಗ್ ಅವರಿಗೆ ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ್ ಅವರು 66 ಗ್ರಾಂ ಚಿನ್ನ ಹಾಗೂ 150 ಗ್ರಾಂ ಬೆಳ್ಳಿ ಆಭರಣಗಳನ್ನು ಹಸ್ತಾಂತರ ಮಾಡಿದ್ದಾರೆ.
ಬೆಂಗಳೂರು (ಮೇ 14): ಸ್ಯಾಂಡಲ್‌ವುಡ್ ನಟಿ ಛಾಯಾಸಿಂಗ್ ಅವರ ತಾಯಿಯ ಮನೆಯಲ್ಲಿ ಕೆಲಸಕ್ಕಿದ್ದ ಮಹಿಳೆಯೇ ಮನೆಯಲ್ಲಿಟ್ಟಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ಕಳ್ಳತನ ಮಾಡಿದ್ದರು. ಈ ಪ್ರಕರಣ ಗಂಭೀರವಾಗಿ ಪರಿಗಣಿಸಿಡ ಬೆಂಗಳೂರು ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿ ಅವರಿಂದ ಚಿನ್ನಾಭರಣಗಳನ್ನು ವಾಪಸ್ ಕೊಡಿಸಿದ್ದಾರೆ.
ಕನ್ನಡ ಸಿನಿಮಾಗಳಲ್ಲಿ ಒಂದು ಅವಧಿಯಲ್ಲಿ ಬೇಡಿಕೆ ನಟಿಯಾಗಿದ್ದ ಛಾಯಾ ಸಿಂಗ್ ಇತ್ತೀಚೆಗೆ ಕಿರುತೆರೆಗೆ ಕಾಲಿಟ್ಟಿದ್ದು, ಅಮೃತಧಾರೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಆದರೆ, ಅವರ ತಂದೆ ತಾಯಿ ಎಲ್ಲರೂ ಬೆಂಗಳೂರಿನಲ್ಲಿಯೇ ವಾಸವಾಗಿದ್ದಾರೆ. ಆದರೆ, ಕಳೆದ ಕೆಲವು ದಿನಗಳ ಹಿಂದೆ ನಟಿ ಛಾಯಾ ಸಿಂಗ್ ತಾಯಿ ತಾಯಿ ಚಮನಲತಾ ಮನೆಯಲ್ಲಿ ಕಳ್ಳತನವಾಗಿತ್ತು. ಆದರೆ, ಯಾರು ಕಳ್ಳತನ ಮಾಡಿದ್ದರು ಎಂಬ ಸುಳಿವಿರಲಿಲ್ಲ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದಾಗ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ. ಪೊಲೀಸರು ಪ್ರತಿಬಾರಿ ಮನೆಗೆ ಬಂದಾಗಲೂ ಮನೆ ಕೆಲಸದಾಕೆಯ ನಡೆ ಮಾತ್ರ ಅನುಮಾನ ಹುಟ್ಟಿಸುವಂತಿತ್ತು.
ನಾರ್ಮಲ್ ಡೆಲಿವರಿಗಾಗಿ ಇಪ್ಪತ್ತೊಂದು ಗಂಟೆ ಹೆರಿಗೆ ನೋವು ತಿಂದ ನಟಿ
ಇನ್ನು ಮನೆಯಲ್ಲಿ ಕಳ್ಳತನ ಆಗಿದ್ದು, ಮನೆಯವರೆಲ್ಲರೂ ಆಭರಣಗಳನ್ನು ಹುಡುತ್ತಿದ್ದರೆ ಅದನ್ನು ಕದ್ದ ಕಳ್ಳಿ ಮಾತ್ರ ತನಗೆ ಏನೂ ಗೊತ್ತಿಲ್ಲವೆಂಬಂತೆ ನಾಟಕ ಮಾಡುತ್ತಿದ್ದಳು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಪೊಲೀಸರು ಮನೆ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಾನೇ ಆಭರಣಗಳನ್ನು ಮಾತ್ರ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ಜೊತೆಗೆ, 66 ಗ್ರಾಂ ಗೋಲ್ಡ್ ಸೇರಿ 150 ಗ್ರಾಂ ಬೆಳ್ಳಿ ಆಭರಣ ಆಭರಣಗಳನ್ನು ಯಾರಿಗೂ ಮಾರಾಟ ಮಾಡದೇ ತನ್ನ ಬಳಿಯೇ ಇಟ್ಟುಕೊಂಡಿರುವುದಾಗಿ ಬಾಯಿ ಬಿಟ್ಟಿದ್ದಾಳೆ.
ಮನೆಯಲ್ಲಿ ಕಳ್ಳತನ ನಡೆದ ಬಗ್ಗೆ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮನೆ ಕೆಲಸದಾಕೆ ಉಷಾ ಎನ್ನುವ ಮಹಿಳೆಯೇ ಕಳ್ಳತನ ಮಾಡರುವುದು ತಿಳಿದ ನಂತರ ಆಭರಣವನ್ನು ವಶಕ್ಕೆ ಒಪ್ಪಿಸುವಂತೆ ಸೂಚಿಸಲಾಗಿ. ನಂತರ, ಛಾಯಾಸಿಂಗ್ ತಾಯಿ ಚಮನಲತಾ ಮನೆಯಿಂದ ಕದ್ದಿದ್ದ ಎಲ್ಲ ಆಭರಣಗಳನ್ನು ಕಳ್ಳಿ ಉಷಾ ಪೊಲೀಸರಿಗೆ ಒಪ್ಪಿಸಿದ್ದಾಳೆ. ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಜೊತೆಗೆ, ಕಳ್ಳಿ ಉಷಾಳ ಬಳಿಯಿದ್ದ ಎಲ್ಲ ಆಭರಣಗಳನ್ನು ವಶಕದ್ಕೆ ಪಡೆದ ಪೊಲೀಸಟು ನಟಿ ಛಾಯಾಸಿಂಗ್ ಅವರಿಗೆ ಒಪ್ಪಿಸಿದ್ದಾರೆ.