ಗಂಡನ ಮನೆಗೆ ಬಂದ ಹೆಣ್ಣು ಮಗಳೊಬ್ಬಳು ಇವತ್ತು ಗಂಡನ ಕುಟುಂಬವನ್ನ ಬೀದಿಯಲ್ಲಿ ನಿಲ್ಲಿಸಿದ್ದಾಳೆ. ಬಾಯಲ್ಲಿ ಸಿಗರೇಟ್.. ಕೈಯಲ್ಲಿ ವಿಸ್ಕಿ! ಅವಳಿಗೆ ಬೇಕೇ ಬೇಕಂತೆ ಗಾಂಜಾ ಸೊಪ್ಪು..! ಅಷ್ಟಕ್ಕೂ ಯಾರೀಕೆ ನೋಡೋಣ ಬನ್ನಿ
ಅವರಿಬ್ಬರು ಪ್ರೀತಿಸಿ ಮದುವೆಯಾದವರು, ಮದುವೆಗೂ ಮುನ್ನ ಆಕೆ 2 ವರ್ಷ ಗಂಡನ ಮನೆಯಲ್ಲೇ ಜೀವನ ಮಾಡಿದ್ದಳು. ಆದ್ರೆ ಇವತ್ತು ಒಬ್ಬರ ಮೇಲೊಬ್ಬರು ಆರೋಪಗಳನ್ನ ಮಾಡ್ತಾ ಪೊಲೀಸ್ ಠಾಣೆ ಮೆಟ್ಟಿಲ್ಲೇರಿದ್ದಾರೆ. ಹೆಂಡತಿ ವರದಕ್ಷಿಣೆ ಕಿರುಕುಳದ ಆರೋಪ ಮಾಡ್ತಿದ್ರೆ ಗಂಡನ ಕುಟುಂಬ ಆಕೆಯ ಜನುಮವನ್ನೇ ಜಾಲಾಡುತ್ತಿದ್ದಾರೆ. ಬಾಯಲ್ಲಿ ಸಿಗರೇಟ್. ಕೈಯಲ್ಲಿ ವಿಸ್ಕಿ. ಇದೇ ಅವಳ ಫುಲ್ ಟೈಂ ಡ್ಯೂಟಿ ಅಂತ ಮಾವನ ಮನೆಯವರು ಹೇಳ್ತಿದ್ದಾರೆ. ಇನ್ನೂ ಆಕೆ ಗಾಂಜಾ ಗಿರಾಕಿ ಕೂಡ ಅಂತೆ. ಅಷ್ಟಕ್ಕೂ ಏನಿದು ಫ್ಯಾಮಿಲಿ ಜಗಳ..? ಅವಳು ಹೇಳ್ತಿರೋದು ನಿಜಾನಾ. ಅತ್ತೆ ಮಾವ ಹೆಳ್ತಿರೋದು ಸತ್ಯಾನಾ..? ಒಂದು ವಿಚಿತ್ರ ಫ್ಯಾಮಿಲಿ ಫೈಟ್ ಸ್ಟೋರಿಯೇ ಇವತ್ತಿನ ಎಫ್.ಐ.ಆರ್.
ಒಂದು ಸಂಸಾರದ ಕಣ್ಣು ಹೆಣ್ಣು ಅಂತಾರೆ. ಮನೆಯ ಹೊಸ್ತಿಲು ದಾಟಿ ಬರುವವಳು ಆ ಕುಟುಂಬದ ಜವಾಬ್ದಾರಿಯನ್ನ ಹೊರುತ್ತಾಳೆ. ಆ ಮನೆಯ ಖುಷಿ, ದುಖಃಕ್ಕೆ ಅವಳೇ ಕಾರಣಳಾಗಿರುತ್ತಾಳೆ. ಅದೇ ಹೆಣ್ಣು ಬಂದ ಮನೆಗೆ ಕೇಡು ಬಯಸಿದ್ರೆ ಆ ಮನೆ ಉದ್ಧಾರ ಆಗಲ್ಲ ಅಂತಲೂ ಹೇಳ್ತಾರೆ. ಆದ್ರೆ ನಾವು ಇವತ್ತು ಇಂಥದ್ದೇ ಒಂದು ಕುಟಂಬದ ಬಗ್ಗೆ ಹೇಳಹೊರಟಿದ್ದೇವೆ. ಗಂಡನ ಮನೆಗೆ ಬಂದ ಹೆಣ್ಣು ಮಗಳೊಬ್ಬಳು ಇವತ್ತು ಗಂಡನ ಕುಟುಂಬವನ್ನ ಬೀದಿಯಲ್ಲಿ ನಿಲ್ಲಿಸಿದ್ದಾಳೆ. ಆದ್ರೆ ಈ ಕಥೆಯನ್ನ ಶುರುಮಾಡೋಕೆ ನಾವು ಸೀದಾ ಬೆಳಗಾವಿಗೆ ಹೋಗಬೇಕು.
undefined
ಆವತ್ತು ಜುಲೈ 15. ಬೆಳಗಾವಿಯ ಜಿಲ್ಲಾಸ್ಪತ್ರೆಗೆ ಒಂದು ಕೇಸ್ ಬರುತ್ತೆ. ಅದು ಸೂಸೈಡ್ ಕೇಸ್. 20 ವರ್ಷದ ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಆ ಕೂಡಲೇ ಆಕೆಯವರು ಆ ಯುವತಿಯನ್ನ ಇದೇ ಜಿಲ್ಲಾಸ್ಪತ್ರೆಗೆ ಕರೆತಂದಿದ್ರು. ಇನ್ನೂ ಡ್ಯೂಟಿಯಲ್ಲಿದ್ದ ಡಾಕ್ಟರ್ ಆ ಕೂಡಲೇ ಆ ಯುವತಿಯನ್ನ ಅಡ್ಮಿಟ್ ಮಾಡಿ ಚಿಕಿತ್ಸೆ ನೀಡಿ ಕೊನೆಗೆ ಆಕೆಯ ಹೊಟ್ಟೆಯಲ್ಲಿದ್ದ ವಿಷವನ್ನೆಲ್ಲಾ ತೆಗೆದು ಪ್ರಾಣ ಉಳಿಸಿದ್ರು.
ರೀಲ್ ಹೀರೋ ಅಕ್ಷಯ್ ಕುಮಾರ್ ರಿಯಲ್ ಕೆಲಸಕ್ಕೆ ಮೆಚ್ಚುಗೆ: ವೀಡಿಯೋ ವೈರಲ್
ಈ ಫ್ಯಾಮಿಲಿ ಮ್ಯಾಟರ್‌ನ ಕಂಪ್ಲೀಟ್ ಕಹಾನಿ ಹೇಳಬೇಕಂದ್ರೆ ನಾವು ಮೊದಲಿಗೆ ಇದೇ ಕನ್ವಿಕಾಳ ಫ್ಲ್ಯಾಷ್ ಬ್ಯಾಕ್ ಹೆಳಬೇಕು. ಈ ಕನ್ವಿಕಾ ಇದ್ದಾಳಲ್ಲ ಈಕೆ ಇದೇ ಬೆಳಗಾವಿಯ ಬಡಕಲ್ ಗಲ್ಲಿಯವಳು. ತಂದೆ ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ರಿಂದ ತಾಯಿಯ ಆಶ್ರಯದಲ್ಲೇ ಈಕೆ ಬೆಳೆದಿದ್ದಳು. ಶಾಲೆಯನ್ನ ಮುಗಿಸಿ ಪಿಯುಸಿಗೆ ಸೇರಿಕೊಂಡಳು. ಆದ್ರೆ ಪಿಯುಸಿಗೆ ಸೇರಿದಾಗಲೇ ನೋಡಿ ಈಕೆಗೆ ಅವನೊಬ್ಬ ಸಿಗೋದು. ಅವನೇ ಈ ಗಣೇಶ.
ಅಪರೂಪವಾಗಿ ಕಾಣ ಸಿಗುವ ಜಗತ್ತಿನ ಅತೀ ದೊಡ್ಡ ಪ್ರತ್ಯೇಕಿತ ಬುಡಕಟ್ಟು ಸಮುದಾಯ ಕ್ಯಾಮರಾದಲ್ಲಿ ಸೆರೆ
ಈ ಗಣೇಶ ಮತ್ತು ಕನ್ವಿಕಾ ಇಬ್ಬರೂ ಶಾಲ ದಿನಗಳಿಂದಲೇ ಸಹಪಾಟಿಗಳು. ಚಿಕ್ಕಂದಿನಿಂದಲೇ ಒಟ್ಟಿಗೆ ಆಡಿ ಬೆಳೆದವರು. ಆದ್ರೆ ಕಾಲೇಜಿಗೆ ಬಂದ ಮೇಲೆ ಇವರಿಬ್ಬರು ಮತ್ತಷ್ಟು ಕ್ಲೋಸ್ ಆದ್ರು. ನಂತರ ಗಣೇಶನೇ ಒಂದು ದಿನ ಲವ್ ಪ್ರಪೋಸ್ ಮಾಡಿದ್ದ ಅದಕ್ಕೆ ಈಕೆ ಕೂಡ ಓಕೆ ಅಂದಿದ್ಲು. ಇಬ್ಬರೂ ಪ್ರೇಮ ಲೋಕದಲ್ಲಿ ವಿಹರಿಸೋದಕ್ಕೆ ಶುರುಮಾಡಿದ್ರು.
ಆದ್ರೆ ಈ ಟೈಂನಲ್ಲೇ ಗಣೇಶ ಮತ್ತು ಕನ್ವಿಕಾ ನಡುವೆ ಏನಾಯ್ತೋ ಏನೋ. ಈ ಕನ್ವಿಕಾ ಓದನ್ನ ಅರ್ಧಕ್ಕೆ ನಿಲ್ಲಿಸಿ ಗಣೇಶನ ಮನೆ ಸೇರಿಬಿಟ್ಟಳು. ಯಾಕೆ ಅವನ ಮನೆಗೆ ಹೋಗಿ ಠಿಕಾಣಿ ಹೋಡಿದೆ ಅಂದರೆ ಈಕೆ ಹೇಳಿದ್ದು ನಾವಿಬ್ಬರು ತಪ್ಪು ಮಾಡಿಬಿಟ್ಟಿದ್ವಿ ಅಂತ. ಯುನಲ್ಲೇ ತಪ್ಪು ಮಾಡಿದ ಪರಿಣಾಮ. ಇದೇ ಕನ್ವಿಕಾ ಗಣೇಶನ ಮನೆ ಸೇರಿದ್ಲು. ಎರಡು ವರ್ಷ ಅದೇ ಮನೆಯಲ್ಲಿದ್ಲು.
ಅವನಿಂದ ಪ್ರೆಗ್ನೆಂಟ್ ಆಗಿದ್ದೀನಿ ಅಂತ ಹೇಳ್ಕೊಂಡು ಗಣೇಶನ ಮನೆ ಸೇರಿದ್ದ ಕನ್ವಿಕಾಳ ನಿಜ ಬಣ್ಣ ಆ ನಂತರ ಬಯಲಾಗ್ತಾ ಹೊಯ್ತು. ಆದ್ರೆ ಯಾವಾಗ ಈಕೆ ನಶೆ ಗಿರಾಕಿ ಅನ್ನೋದು ಗೊತ್ತಾಯ್ತೋ ಆಕೆಯನ್ನ ಮನೆಯಿಂದ ಹೊರ ಹಾಕಲು ಗಣೇಶನ ಕುಟುಂಬ ನಿರ್ಧರಿಸಿತು. ಆಗಲೇ ನೋಡಿ ಅಲ್ಲಿಗೊಬ್ಬ ಎಂಟ್ರಿಯಾಗ್ತಾನೆ. ಒಬ್ಬ ಪ್ರಭಾವಿ ರಾಜಕಾರಣಿಯ ಆಪ್ತನೊಬ್ಬ ಈ ಫ್ಯಾಮಿಲಿ ಮ್ಯಾಟರ್ಗೆ ಎಂಟ್ರಿ ಕೊಟ್ಟಿದ್ದ.. ಹಾಗಾದ್ರೆ ಆ ರಾಜಕಾರಣಿ ಆಪ್ತ ಯಾರು..?
ಸೊಸೆ ಅಂಥವಳು ಅಂತ ಅತ್ತೆ. ಅತ್ತೆ ಮನೆಯವರು ಹೀಗೆ ಅಂತ ಸೊಸೆ. ಹೀಗೆ ಆರೋಪ ಪ್ರತ್ಯಾರೋಪಗಳು ಮಾಡ್ತುರುವಾಗ್ಲೇ ಅಲ್ಲಿ ಬರೋದು ಒಬ್ಬ ರಾಜಕಾರಣಿಯ ಆಪ್ತ. ರಮೇಶ್ ಜಾರಕಿಹೊಳಿಯ ಆಪ್ತ ಪೃಥ್ವಿ ಸಿಂಗ್ ಅನ್ನೋನೇ ನಮ್ಮ ಫ್ಯಾಮಿಲಿ ಹೀಗೆ ಆಗೋದಕ್ಕೆ ಕಾರಣ ಅಂತ ಗಂಡನ ಮನೆಯವರ ಆರೋಪ. ಇನ್ನೂ ಎಷ್ಟೋ ಬಾರಿ ಆತ ಮನೆಗೆ ಬಂದು ಆವಾಜ್ ಹಾಕೋದಲ್ಲದೇ ಹಲ್ಲೆ ಕೂಡ ಮಾಡಿದ್ದಾನಂತೆ.. ಕೊನೆಗೆ ಯಾವಾಗ ಕನ್ನಿಕಾಳನ್ನ ಮನೆಯಿಂದ ಹೊರಗೆ ಕಳಿಸಲು ನಿರ್ಧರಿಸಿದ್ರೋ ಆಗ ಆತನೇ ಆಕೆಗೆ ವಿಷ ಕುಡಿಸಿ ತಾನೇ ಅಸ್ಪತ್ರೆಗೆ ಸೇರಿಸಿದ್ದಾನಂತೆ.
ಏನೇ ಆದ್ರೂ ಇದು ಒಂದು ಹೆಣ್ಣುಮಗಳ ಜೀವನದ ಪ್ರಶ್ನೆ. ಒಂದು ವೇಳೆ ಆಕೆಯೇ ತಪ್ಪು ಮಾಡಿದ್ರೆ ಆಕೆಗೆ ಬುದ್ಧಿ ಹೇಳಿ ಮತ್ತೆ ಗಂಡನ ಜೊತೆ ಜೀವನ ಮಾಡುವಂತೆ ಪೊಲೀಸರು ಮಾಡಲಿ. ಒಂದು ವೇಳೆ ಆಕೆಗೆ ನಿಜವಾಗ್ಲೂ ಅನ್ಯಾಯವಾಗಿದ್ರೆ ಗಣೇಶನ ಕುಟುಂಬಕ್ಕೆ ತಕ್ಕ ಶಿಕ್ಷೆಯಾಗಲಿ.