ನಾಯಿಗಳನ್ನು ಅತ್ಯಾಚಾರಗೈದು, ಕೊಂದಿದ್ದ ಪ್ರಾಣಿಶಾಸ್ತ್ರಜ್ಞನಿಗೆ 249 ವರ್ಷ ಜೈಲು ಶಿಕ್ಷೆ

By Mahmad Rafik  |  First Published Jul 18, 2024, 12:33 PM IST

ಮೊಸಳೆಗಳ ತಜ್ಞನಾಗಿದ್ದ ಆಡಂ, ಬಿಬಿಸಿ-ನ್ಯಾಷನಲ್ ಜಿಯೋಗ್ರಾಫಿಕ್ ವಾಹಿನಿಗಳ ಜೊತೆಯಲ್ಲಿ ಕೆಲಸ ಮಾಡಿದ್ದಾನೆ. ಮೊಸಳೆಗಳಿಗೆ ಸಂಬಂಧಿಸಿದ ಪ್ರೊಜೆಕ್ಟ್‌ಗಳಲ್ಲಿ ಆಡಂ ಕಾಣಿಸಿಕೊಳ್ಳುತ್ತಿದ್ದನು.


ಮೆಲ್ಬೋರ್ನ್: ಆಸ್ಟ್ರೇಲಿಯಾದ   ಪ್ರಾಣಿ ಶಾಸ್ತ್ರಜ್ಞ ನಾಯಿಗಳ ಮೇಲಿನ ಅತ್ಯಾಚಾರ ಹಾಗೂ ಕೊಲೆ ಸಂಬಂಧ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತು ಆಗಿದ್ದು, 249ರ ವರ್ಷಗಳ ಜೈಲು ಶಿಕ್ಷೆ ನೀಡಿ ಆದೇಶಿಸಲಾಗಿದೆ. 52 ವರ್ಷದ ಆಡಂ ಬ್ರಿಟನ್ ಮೊಸಳೆ ತಜ್ಞನಾಗಿ ಗುರುತಿಸಿಕೊಂಡಿದ್ದನು. ಕಳೆದ ವರ್ಷ ಆಡಂ ಪ್ರಾಣಿಗಳ ಮೇಲೆ ನಡೆಸಿದ ದೌರ್ಜನ್ಯದ 60 ಪ್ರಕರಣಗಳಲ್ಲಿ ತಪ್ಪೊಪ್ಪಿಕೊಂಡಿದ್ದನು. ಆಸ್ಟ್ರೇಲಿಯಾದ ಎಬಿಸಿ ಮಾಧ್ಯಮದ ವರದಿ ಪ್ರಕಾರ, ಆಡಮ್ ಬ್ರಿಟಿಷ್ ಪ್ರಜೆಯಾಗಿದ್ದು, ಆಸ್ಟ್ರೇಲಿಯಾದ ಡಿವಾರ್ನ್ ನಲ್ಲಿರುವ ತನ್ನ ನಿವಾಸದಲ್ಲಿನ ನಾಯಿಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದನು. ನಾಯಿಗಳ ಮೇಲೆ ಅತ್ಯಾಚಾರ ನಡೆಸಿ, ನಂತರ ಅವುಗಳನ್ನು ಕೊಲೆ ಮಾಡುತ್ತಿದ್ದನು. ಇಷ್ಟು ಮಾತ್ರವಲ್ಲದೇ ತನ್ನ ಹೀನಕೃತ್ಯದ ಲೆಕ್ಕ ಸಹ ಇಡುತ್ತಿದ್ದನು. ನಾಯಿಗಳ ಮೇಲೆ ಅತ್ಯಾಚಾರ ನಡೆಸಲು ಮನೆಯಲ್ಲಿ ಪ್ರತ್ಯೇಕವಾಗಿ ಟಾರ್ಚರ್ ರೂಮ್ ಸಹ ಮಾಡಿಕೊಂಡಿದ್ದನು.  

ಗ್ಯಾಮ್ಟ್ರಿ ಹೆಸರಿನ ವೆಬ್‌ಸೈಟ್ ಮುಖೇನ್ ಆಡಂ 42 ನಾಯಿಗಳನ್ನು ಖರೀದಿಸಿದ್ದನು.  ನಾಯಿಗಳ ಖರೀದಿ ವೇಳೆ ಈ ಪ್ರಾಣಿಗಳಿಗೆ ಆಶ್ರಯ ನೀಡುತ್ತೇನೆ. ಖರೀದಿ ಬಳಿಕ ನಾಯಿಗಳನ್ನು ಶಿಪ್ಪಿಂಗ್ ಕಂಟೇನರ್‌ ನಲ್ಲಿ ಇರಿಸಿದ್ದನು. 2020 ರಿಂದ 2022ರ ಅವಧಿಯಲ್ಲಿ ಆಡಂ 39 ನಾಯಿಗಳ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ನಾಯಿಗಳ ಮೇಲೆ ರೇಪ್ ಮಾಡಿರುವ ವಿಡಿಯೋಗಳನ್ನು ಆಡಂ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದನು. ಈ ವಿಡಿಯೋ ಅಪ್ಲೋಡ್ ಮಾಡಲು 'ಮಾನಸ್ಟರ್' ಹೆಸರಿನಲ್ಲಿ ಸೋಶಿಯಲ್ ಮೀಡಿಯಾ ಖಾತೆ ಸಹ ತೆಗೆದಿದ್ದನು. 

Tap to resize

Latest Videos

undefined

ಮಿರರ್ ವರದಿ ಪ್ರಕಾರ, 2022ರಲ್ಲಿ ಅನಾಮಧೇಯ ವ್ಯಕ್ತಿಯೊಬ್ಬರು ಪ್ರಾಣಿಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಆಡಂ ವಿರುದ್ಧ ದೂರು ದಾಖಲಿಸಿದ್ದರು. ದೂರು ದಾಖಲಾದ ಬಳಿಕ ಡಿವಾರ್ನ್‌ನಲ್ಲಿರುವ ಆಡಂ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು, ಪ್ರಾಣಿಗಳಿಗೆ ಕಿರುಕುಳ ನೀಡಲು ಬಳಕೆ ಮಾಡಲಾಗುತ್ತಿದ್ದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಏಪ್ರಿಲ್ 2022ರಲ್ಲಿ ಆಡಂನನ್ನು ಬಂಧಿಸಲಾಗಿತ್ತು. ಜುಲೈ 11ರಂದು ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಆರಂಭವಾಗಿತ್ತು. ಅರ್ಜಿಯ ವಿಚಾರಣೆ ವೇಳೆ ಮಾನಸಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕಡಿಮೆ ಶಿಕ್ಷೆ ನೀಡುವಂತೆ ಆಡಂ ಪರ ವಕೀಲರು ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡಿದ್ದರು. 

ಫ್ಯಾರಾಫಿಲಿಯಾದಿಂದ ಬಳಲುತ್ತಿರುವ ಆಡಂ 

ತನ್ನ ಕಕ್ಷಿದಾರ ಆಡಂ ಫ್ಯಾರಾಪಿಲಿಯಾ ಎಂಬ ರೋಗದಿಂದ ಬಳಲುತ್ತಿದ್ದಾರೆ ಎಂದು ವಕೀಲರು ನ್ಯಾಯಾಲಯಕ್ಕೆ ಕೆಲವು ವೈದ್ಯಕೀಯ ದಾಖಲಾತಿಗಳನ್ನು ಸಲ್ಲಿಸಿದ್ದರು. ಈ ಸಮಸ್ಯೆಯಿಂದ ಬಳಲುತ್ತಿರುವ  ವ್ಯಕ್ತಿ ಅನುಮತಿ ಇಲ್ಲದೇ ದೈಹಿಕ ಸಂಪರ್ಕ ಹೊಂದಲು ಪ್ರಯತ್ನಿಸಿರುತ್ತಾನೆ. ಫ್ಯಾರಾಪಿಲಿಯಾ ಸಂತ್ರಸ್ತರು ಮಕ್ಕಳನ್ನೇ ಟಾರ್ಗೆಟ್ ಮಾಡುತ್ತಾರೆ ಎಂದು ಆಡಂ ಪರ ವಕೀಲರು ವಾದ ಮಂಡಿಸಿದ್ದರು. 

ನಕಲಿ ಕೀ ಬಳಸಿ ರತ್ನ ಭಂಡಾರ ಓಪನ್; ಇತ್ತ ಪುರಿ ಎಸ್‌ಪಿ ಆರೋಗ್ಯದಲ್ಲಿ ಏರುಪೇರು

ಬಂಧನದ ಬಳಿಕವೂ ಅಡಂಗೆ 30 ಗಂಟೆ ಕಾಲ ಮಾನಸಿಕ ಚಿಕಿತ್ಸೆಯನ್ನು ನೀಡಲಾಗಿದೆ. ಚಿಕಿತ್ಸೆ ಬಳಿಕ ಆಡಂಗೆ ತನ್ನ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಪಟ್ಟಿದ್ದಾರೆ. ಆಡಂ ವಿವಾಹಿತನಾಗಿದ್ದು, ಪ್ರಾಣಿಗಳ   ಮೇಲೆ ಗಂಡ ನಡೆಸುತ್ತಿರುವ ದೌರ್ಜನ್ಯದ ಬಗ್ಗೆ ಆತನ ಪತ್ನಿ ಎರಿನಾಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ವಕೀಲರು ಸ್ಪಷ್ಟಪಡಿಸಿದ್ದಾರೆ. 

ಬಿಬಿಸಿ-ನ್ಯಾಷನಲ್ ಜಿಯೋಗ್ರಾಫಿಕ್ ವಾಹಿನಿ ಜೊತೆ ಕೆಲಸ 

ಮೊಸಳೆಗಳ ತಜ್ಞನಾಗಿದ್ದ ಆಡಂ, ಬಿಬಿಸಿ-ನ್ಯಾಷನಲ್ ಜಿಯೋಗ್ರಾಫಿಕ್ ವಾಹಿನಿಗಳ ಜೊತೆಯಲ್ಲಿ ಕೆಲಸ ಮಾಡಿದ್ದಾನೆ. ಮೊಸಳೆಗಳಿಗೆ ಸಂಬಂಧಿಸಿದ ಪ್ರೊಜೆಕ್ಟ್‌ಗಳಲ್ಲಿ ಆಡಂ ಕಾಣಿಸಿಕೊಳ್ಳುತ್ತಿದ್ದನು. ಡಿಸ್ಕವರಿ ಮತ್ತು ಎನಿಮಲ್ ಪ್ಲಾನೆಟ್ ವಾಹಿನಿಯ ಫೇಮಸ್ ಪ್ರೋಗ್ರಾಂ 'ಎನಿಮಲ್ ಫೇಸ್ ಆಫ್‌'ನಲ್ಲಿಯೂ ಆಡಂ ಕಾಣಿಸಿಕೊಂಡಿದ್ದಾನೆ. ಬ್ರಿಟನ್‌ನಲ್ಲಿ ಆರಂಭಿಕ ಶಿಕ್ಷಣದ ಪಡೆದ ಆಡಂ ಲೀಡ್ಸ್ ವಿಶ್ವವಿದ್ಯಾಲಯದಿಂದ ಪದವಿ ಪಡೆದುಕೊಂಡಿದ್ದಾನೆ. 1996ರಲ್ಲಿ ಪ್ರಾಣಿಶಾಸ್ತ್ರದಲ್ಲಿ ಪಿಹೆಚ್‌ಡಿ ಮಾಡಿಕೊಂಡಿದ್ದಾನೆ. ಆಡಂ ಪತ್ನಿ ವನ್ಯಜೀವಿ ರೇಂಜರ್ ಮತ್ತು ಜೀವಶಾಸ್ತ್ರಜ್ಞೆ ಆಗಿದ್ದಾರೆ. ಮದುವೆ ಬಳಿಕ ಇಬ್ಬರೂ ಜೊತೆಯಾಗಿ ಮೊಸಳೆಗಳಿಗೆ ಸಂಬಂಧಿಸಿದ ಕನ್ಸಲ್ಟೆನ್ಸಿ ಕಂಪನಿಯನ್ನೂ ಆರಂಭಿಸಿದ್ದರು.

ಕಂಡಕ್ಟರ್ ಎದೆ, ಪ್ರೈವೇಟ್ ಪಾರ್ಟ್ ಟಚ್ ಮಾಡಿದ; ಬಸ್‌ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ

click me!