ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ ಮ್ಯಾನೇಜರ್ ಕಿವಿಗೇ ಹೂ ಇಟ್ಟಿದ್ದ ಖದೀಮರು ಅರೆಸ್ಟ್!

By Ravi Janekal  |  First Published Jul 18, 2024, 12:36 PM IST

ಬ್ಯಾಂಕ್‌ಗಳಿಗೆ ನಕಲಿ ದಾಖಲೆಗಳನ್ನು ನೀಡಿ ಕೋಟ್ಯಂತರ ರೂಪಾಯಿ ಲೋನ್ ಪಡೆದು ವಂಚಿಸುತ್ತಿದ್ದ ಖತರ್ನಾಕ್ ಖದೀಮರನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಬೆಂಗಳೂರು (ಜು.18): ಬ್ಯಾಂಕ್‌ಗಳಿಗೆ ನಕಲಿ ದಾಖಲೆಗಳನ್ನು ನೀಡಿ ಕೋಟ್ಯಂತರ ರೂಪಾಯಿ ಲೋನ್ ಪಡೆದು ವಂಚಿಸುತ್ತಿದ್ದ ಖತರ್ನಾಕ್ ಖದೀಮರನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಿವಣ್ಣ, ಸೈಯದ್  ಹಸೀಮ್ ರಂಗನಾಥ ಬಂಧಿತ ಆರೋಪಿಗಳು. ನಕಲಿ ದಾಖಲೆ ಸೃಷ್ಟಿಸುವಲ್ಲಿ ಈ ಖದೀಮರದು ಎತ್ತಿದ ಕೈ. ಬ್ಯಾಂಕ್‌ನವರಿಗೆ ಸಹ ಅನುಮಾನ ಬಾರದಂತೆ ನಕಲಿ ದಾಖಲೆ ಸೃಷ್ಟಿಸುತ್ತಿದ್ದ ಆರೋಪಿಗಳು. ಯಾರದ್ದೋ ಸೈಟ್, ಯಾರೋ ಖರೀದಿ ಮಾಡಿದ್ದು ಹೀಗೆ ತರಹೇವಾರಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ಗಳಿಂದ ಲಕ್ಷದಿಂದ ಕೋಟಿವರೆಗೆ ಸಾಲ ಪಡೆಯುತ್ತಿದ್ದ ಖದೀಮರು.

Tap to resize

Latest Videos

ಮಾಟ ತೆಗಿಸೋದಾಗಿ ಇಡೀ ಕುಟುಂಬಕ್ಕೆ ಲಕ್ಷ ಲಕ್ಷ ಉಂಡೆನಾಮ; ಸ್ನೇಹಿತನಿಂದಲೇ ವಂಚನೆ!

ಅದೇ ರೀತಿ ಎಸ್‌ಬಿಐ ಬ್ಯಾಂಕ್‌ನಲ್ಲಿ ಒಂದು ಕೋಟಿ ಹದಿನಾಲ್ಕು ಲಕ್ಷ ರೂಪಾಯಿ ಲೋನ್ ಪಡೆದು ಉಂಡೇನಾಮ ಹಾಕಿದ್ದ ಖದೀಮರು. ಯಾರದ್ದೋ ಹೆಸರಿನಲ್ಲಿ ಇರುವ ಸೈಟ್‌ಗೆ ನಕಲಿ ದಾಖಲೆ ಸೃಷ್ಟಿಸಿದ್ದರು. ಬಳಿಕ ಆ ಸೈಟ್ ಅನ್ನು ಮಾರಾಟ ಮಾಡುವುದಾಗಿ, ಅದನ್ನ ಓರ್ವ ಖರೀದಿಸಿರುವುದಾಗಿ ದಾಖಲೆ ಸೃಷ್ಟಿ ಮಾಡಿ ನಂತರ ಸೈಟ್ ತೆಗೆದುಕೊಳ್ಳಲು ಲೋನ್ ಬೇಕೆಂದು ಕೋಟ್ಯಂತರ ಸಾಲ ಪಡೆದಿದ್ದ ವಂಚಕರು. ಲೋನ್ ಪಡೆದ ನಂತರ ಮೂರು ಕಂತುಗಳನ್ನು ಕಟ್ಟಿರುವ ಗ್ಯಾಂಗ್. ಬಳಿಕ ನಾಪತ್ತೆ. ಮೂರು ತಿಂಗಳ ನಂತ್ರ ಲೋನ್ ಕಟ್ಟಿರಲಿಲ್ಲಾ, ಬ್ಯಾಂಕ್ ಕಡೆ ತಲೆಯೂ ಹಾಕದೆ ನಾಪತ್ತೆಯಾಗಿದ್ದ ಖದೀಮರು. ಇತ್ತ ಬ್ಯಾಂಕ್‌ನವರು ನೋಟಿಸ್ ನೀಡಿದ್ರೂ ಉತ್ತರ ಇಲ್ಲ. ಹೀಗಾಗಿ ಅನುಮಾನಗೊಂಡು ನೀಡಿದ್ದ ದಾಖಲೆಯ ಸೈಟ್ ಸೀಜ್ ಮಾಡಲು ಮುಂದಾಗಿದ್ದ ಬ್ಯಾಂಕ್. ಆದರೆ ಸೈಟ್ ಬಳಿ ಹೋದಾಗ ಬ್ಯಾಂಕ್ ಮ್ಯಾನೇಜರೇ ಶಾಕ್ ಆಗಿದ್ದಾರೆ.

ಮುಡಾ, ವಾಲ್ಮೀಕಿ ನಿಗಮ ಹಗರಣವನ್ನು ಸಿಬಿಐ ತನಿಖೆ ನೀಡಿದರೆ ಸತ್ಯಾಂಶ ಹೊರಬರಲಿದೆ: ಸಂಸದ ಯದುವೀರ್ ಒಡೆಯರ್

ದಾಖಲೆಯಲ್ಲಿರೋ ಸೈಟ್ ಬೇರೆಯವರ ಹೆಸರಿನಲ್ಲಿರುವುದು ಪತ್ತೆಯಾಗಿದೆ. ಲೋನ್ ಪಡೆದ ಖದೀಮರು ಸಾಮಾನ್ಯರಲ್ಲ ಅಂತಾ ಗೊತ್ತಾಗಿದ್ದೇ ಅಗ, ಕೂಡಲೇ ಸಿಸಿಬಿಗೆ ದೂರು ನೀಡಿದ್ದ ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್. ದೂರು ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರಿಗೂ ಶಾಕ್ ಬೇರೊಂದು ಬ್ಯಾಂಕ್‌ನಲ್ಲೂ ಅದೇ ರೀತಿ ನಕಲಿ ದಾಖಲೆ ಸೃಷ್ಟಿಸಿ ಲೋನ್ ಪಡೆದಿರುವುದು ಪತ್ತೆಯಾಗಿದೆ.

ಸದ್ಯ ಆರೋಪಿಗಳನ್ನ ಬಂಧಿಸಿ ತನಿಖೆ ಮುಂದುವರಿಸಿರುವ ಪೊಲೀಸರು.

click me!