ಪೋನ್‌ನಲ್ಲಿ ಮಾತಾಡ್ಬೇಡ ಅಂದಿದ್ದೆ ತಪ್ಪಾಯ್ತು..ಗಂಡನ ಖಾಸಗಿ ಅಂಗವನ್ನೇ ಕತ್ತರಿಸಿದ ಪತ್ನಿ!

By Santosh Naik  |  First Published Nov 17, 2022, 6:15 PM IST

ರಾಜಸ್ಥಾನದ ಬಾರ್ಮರ್‌ನಲ್ಲಿ ಕ್ಷುಲ್ಲಕ ಜಗಳದ ಬಳಿಕ ಮಹಿಳೆಯೊಬ್ಬಳು ತನ್ನ ಪತಿಯ ಗುಪ್ತಾಂಗವನ್ನೇ ಕತ್ತರಿಸಿ ಹಾಕಿದ್ದಾರೆ. ರಾತ್ರಿ ವೇಳೆ ಮಹಿಳೆ ಫೋನ್ ನಲ್ಲಿ ಮಾತನಾಡುತ್ತಿದ್ದು, ಈ ವಿಚಾರವಾಗಿ ದಂಪತಿ ನಡುವೆ ಜಗಳ ನಡೆದಿದೆ. ಸದ್ಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
 


ಜೈಪುರ (ನ.17): ಕ್ಷುಲ್ಲಕ ಜಗಳಕ್ಕಾಗಿ ಮಹಿಳೆಯೊಬ್ಬಳು ಗಂಡ ಮಲಗಿದ್ದಾಗ ಆತನ ಮರ್ಮಾಂಗವನ್ನೇ ಕತ್ತರಿಸಿ ಹಾಕಿದ ಘಟನೆ ರಾಜಸ್ಥಾನದ ಬರ್ಮೆರ್‌ನಲ್ಲಿ ನಡೆದಿದೆ. ರಾತ್ರಿ ಹೊತ್ತಿನಲ್ಲಿ ಫೋನ್‌ನಲ್ಲಿ ಮಾತನಾಡಬೇಡ ಎಂದು ಗಂಡ ಹೇಳಿದ ಕಾರಣಕ್ಕಾಗಿ ಸಿಟ್ಟಾಗಿದ್ದ ಹೆಂಡತಿ, ರಾತ್ರಿ ಗಂಡ ಮಲಗಿದ್ದ ವೇಳೆ ಆತನ ಗುಪ್ತಾಂಗವನ್ನು ಕತ್ತರಿಸಿದ ಘಟನೆ ಧೋರಿಮನ್ನ ಪೊಲೀಸ್‌ ಠಾಣೆ ವ್ಯಾಪ್ತಿಯ ಬಲಿಸರ್‌ ಗ್ರಾಮದಲ್ಲಿ ನಡೆದಿದೆ. ಗಂಡ ಕೊಟ್ಟಿರುವ ದೂರಿನ ಅನ್ವಯ, ತಾನು ಮಲಗಿದ್ದ ವೇಳೆ ಪತ್ನಿ ಫೋನ್‌ನಲ್ಲಿ ಯಾರದೋ ಜೊತೆ ಮಾತನಾಡುತ್ತಿದ್ದಳು. ಇದರಿಂದ ತನಗೆ ನಿದ್ರೆ ಮಾಡಲು ಆಗುತ್ತಿರಲಿಲ್ಲ. ಪೋನ್‌ ಕಟ್‌ ಮಾಡುವಂತೆ ನಾನು ಹೇಳುತ್ತಿದ್ದೆ. ಈ ವಿಚಾರವಾಗಿಯೇ ನಮ್ಮ ನಡುವೆ ಗಲಾಟೆ ನಡೆದಿತ್ತು ಎಂದು ಹೇಳಿದ್ದಾನೆ. ಗಂಡನ ಮಾತಿನಿಂದ ಸಿಟ್ಟಾಗಿದ್ದ ಹೆಂಡತಿ, ಆತ ಮಲಗಿದ್ದ ವೇಳೆ ಬ್ಲೇಡ್‌ನಿಂದ ಆತನ ಮರ್ಮಾಂಗವನ್ನೇ ಕತ್ತರಿಸಿದ್ದಾರೆ. ಈ ವೇಳೆ ಆತ ನೋವಿನಿಂದ ಚೀರಾಟ ಮಾಡುತ್ತಿದ್ದಾಗ ಕುಟುಂಬದವರು ಸ್ಥಳಕ್ಕೆ ಆಗಮಿಸಿ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಕೇವಲ ಆರು ತಿಂಗಳ ಹಿಂದೆ ಇವರಿಬ್ಬರ ವಿವಾಹವಾಗಿತ್ತು. ವಿವಾಹವಾದ ದಿನದಿಂದಲೂ ಇವರಿಬ್ಬರ ಸಂಸಾರದಲ್ಲಿ ಸಮಸ್ಯೆಗಳೇ ಕಾಣಿಸಿಕೊಂಡಿದ್ದವು.

ಪೊಲೀಸರ ತನಿಖೆಯ ವೇಳೆ ಇವರಿಬ್ಬರ ನಡುವೆ ಸಾಕಷ್ಟು ಗಲಾಟೆಗಳು ನಡೆಯುತ್ತಿದ್ದವು ಎನ್ನುವುದು ಬಹಿರಂಗವಾಗಿತ್ತು. ಅದಲ್ಲದೆ, ಕೆಲ ತಿಂಗಳ ಹಿಂದೆ ಪತಿಯ ವಿರುದ್ಧವೇ ಆಕೆ ವರದಕ್ಷಿಣೆ ಕಿರುಕುಳದ ಆರೋಪ ಹೊರಿಸಿದ್ದಳು. ಘಟನೆ ಕುರಿತು ಮಾತನಾಡಿರುವ ಬಾರ್ಮರ್ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ನರ್ಪತ್‌ಸಿಂಗ್ ಜೈತಾವತ್, ಯಾವುದೇ ಕ್ರಮ ಕೈಗೊಳ್ಳುವ ಮೊದಲು ನಾವು ಪತಿಯ ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದೇವೆ. ಎರಡೂ ಕಡೆಯಿಂದ ತನಿಖೆ ನಡೆಸಲಾಗುತ್ತಿದ್ದು, ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆ ಅಕ್ಟೋಬರ್‌ 1 ರಂದು ನಡೆದಿತ್ತು. ಇಲ್ಲಿಯವರೆಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆತ, ಚೇತರಿಸಿಕೊಂಡ ಕಾರಣ ಮಂಗಳವಾರ ಪತ್ನಿಯ ವಿರುದ್ಧ ದೂರು ದಾಖಲು ಮಾಡಿದ್ದಾರೆ. 21 ವರ್ಷದ ಗೋಮರಮ್‌ ಬಲಿಸಾರ್‌ನ ನಿವಾಸಿಯಾಗಿದ್ದು, 19 ವರ್ಷದ ಕನ್ನು ದೇವಿಯನ್ನು ವಿವಾಹವಾಗಿದ್ದ. ಆಕೆ ಸನವಾದಾ ಬಾರ್ಮರ್‌ನ ಗ್ರಾಮದವರು. ಗೋಮರಮ್ ವೃತ್ತಿಯಲ್ಲಿ ರೈತನಾಗಿದ್ದ. ಗದ್ದೆಯಲ್ಲಿನ ಶೆಡ್‌ನಲ್ಲಿ ಮಲಗಿದ್ದ ವೇಳೆ, ಬ್ಲೇಡ್‌ನಿಂದ ಆತನ ಮರ್ಮಾಂಗವನ್ನು ಪತ್ನಿ ಕತ್ತರಿಸಿದ್ದಾಳೆ. 

Tap to resize

Latest Videos

ಆಪ್‌ ವಿರುದ್ದ ದೂರು ವಾಪಸ್‌ಗೆ ಒತ್ತಾಯ; ನನ್ನ ಮರ್ಮಾಂಗದ ಮೇಲೆ ಜೈಲು ಸಿಬ್ಬಂದಿ ಹಲ್ಲೆ: ಸುಖೇಶ್ ಚಂದ್ರಶೇಖರ್‌

ವೈವಾಹಿಕ ವಿಚಾರಕ್ಕೆ ಸಂಬಂಧಿಸಿದಂತೆ ಸುಮಾರು ಒಂದು ತಿಂಗಳಿನಿಂದ ಪತಿ-ಪತ್ನಿಯರ ನಡುವೆ ಜಗಳ ನಡೆಯುತ್ತಿತ್ತು. ಇದು ಪಂಚಾಯ್ತಿ ಎದುರು ಕೂಡ ಬಂದಿತ್ತು ಎಂದು ತಿಳಿದು ಬಂದಿದೆ. ಪಂಚಾಯ್ತಿಯಲ್ಲಿ ಇಬ್ಬರಿಗೂ ಸಮಾಧಾನ ಮಾಡಿದ್ದರೂ, ಬಿರುಕು ಮಾತ್ರ ಮುಂದುವರಿದಿತ್ತು. ದೂರು ಸ್ವೀಕರಿಸಿದ ಪೊಲೀಸರು ಯುವಕನಿಗೆ ವೈದ್ಯಕೀಯ ಚಿಕಿತ್ಸೆ ನೀಡಿದ್ದಾರೆ. ವೈದ್ಯಕೀಯ ವರದಿ ಪ್ರಕಾರ ಸದ್ಯ ಅವರ ಗಾಯ ವಾಸಿಯಾಗಿದೆ. ಆದರೆ ಪೊಲೀಸರು ಈಗ ಇಡೀ ವಿಷಯದಲ್ಲಿ ಸಂಬಂಧಪಟ್ಟ ಮಹಿಳೆಯನ್ನು (ಗೋಮಾರಂನ ಪತ್ನಿ) ವಿಚಾರಣೆ ನಡೆಸುತ್ತಿದ್ದಾರೆ. ಗಾಯಗೊಂಡಿದ್ದ ಗೋಮರಮ್‌ ಅನ್ನು ಸರ್ಕಾರಿ ಆಸ್ಪತ್ರೆಗೆ ಮೊದಲು ದಾಖಲು ಮಾಡಲಾಗಿದ್ದರೆ, ಮರುದಿನ ಮುಂಜಾನೆ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಗಾಯ ಹೆಚ್ಚು ತೀವ್ರವಾಗಿರದ ಕಾರಣ ಅವರು ಬಚಾವ್‌ ಆಗಿದ್ದಾರೆ.

ಬಾಲ್ಯ ಸ್ನೇಹಿತನಿಗೆ 9 ಬಾರಿ ಚೂರಿ ಇರಿದು ಮರ್ಮಾಂಗ ಕತ್ತರಿಸಿ ಮೃತದೇಹದ ಬಾಯಿಗೆ ತುರುಕಿದ..!

ಡೈವೋರ್ಸ್‌ಗಾಗಿ ಈ ಕೃತ್ಯ: ಕುನ್ನು ದೇವಿಗೆ ಈ ಮದುವೆ ಇಷ್ಟವಿರಲಿಲ್ಲ. ಡೈವೋರ್ಸ್‌ ಪಡೆಯುವ ಬಯಕೆ ಆಕೆಯಲ್ಲಿತ್ತು. ಆದರೆ, ಆಕೆಯ ಮನೆಯವರು ನಿನ್ನ ಗಂಡ, ನಂಪುಸಕನಾಗಿದ್ದರೆ ಮಾತ್ರವೇ ಡೈವೋರ್ಸ್‌ ಪಡೆಯಬಹುದು ಎಂದಿದ್ದರು. ಅದಕ್ಕಾಗಿ ಆಕೆ ಗಂಡ ಮರ್ಮಾಂಗವನ್ನೇ ಕತ್ತರಿಸುವ ಯೋಚನೆ ಮಾಡಿದ್ದರು. ಆತ ನಪುಂಸಕನಾದಲ್ಲಿ ಸುಲಭವಾಗಿ ಡೈವೋರ್ಸ್‌ ಪಡೆಯಬಹುದು ಎನ್ನುವು ಗುರಿ ಆಕೆಯದ್ದಾಗಿತ್ತು.

click me!