
ಆಂಧ್ರ ಪ್ರದೇಶದ ತಾನೂಕು ಮಂಡಲದಮುದ್ದಪುರಂ ಗ್ರಾಮದಲ್ಲಿ ಯುವತಿಯೊಬ್ಬಳು ಸಜೀವ ದಹನವಾಗಿರುವ ಭೀಕರ ಘಟನೆ ನಡೆದಿದೆ. ಈ ಪ್ರಕರಣ ಇಡೀ ಗ್ರಾಮವನ್ನೇ ಬೆಚ್ಚಿ ಬೀಳಿಸಿದೆ. ಮೃತ ಯುವತಿಯನ್ನು ಮುಲ್ಲಾಪುಡಿ ನಾಗಹಾರಿಕಾ ಎಂದು ಗುರುತಿಸಲಾಗಿದ್ದು, ಆಕೆ ಎಂಜಿನಿಯರಿಂಗ್ ಎರಡನೇ ವರ್ಷ ಓದುತ್ತಿದ್ದಳು ಎಂದು ತಿಳಿದುಬಂದಿದೆ. ಆಕೆಯ ಮನೆಯ ಬೆಡ್‌ರೂಮಿನಲ್ಲಿ ಮಲಗಿದ್ದವಳು ಸಜೀವ ದಹನವಾಗಿದ್ದಾಳೆ. ಆದರೆ, ಈ ಘಟನೆ ಆಕಸ್ಮಿಕವಾಗಿ ಸಂಭವಿಸಿದೆಯೋ ಅಥವಾ ಯಾರಾದರೂ ಕೊಲೆ ಮಾಡಿದ್ದಾರೋ ಎಂಬ ಬಗ್ಗೆ ಪೊಲೀಸರು ಇನ್ನೂ ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಮುಲ್ಲಾಪುಡಿ ಶ್ರೀನಿವಾಸ್ ಮಗಳಾದ ನಾಗಹಾರಿಕಾ ತನ್ನ ಗ್ರಾಮದ ಮನೆಯಲ್ಲಿ ರಾತ್ರಿ ಮಲಗಿದ್ದಳು ಎಂದು ತಿಳಿದುಬಂದಿದೆ. ಆದರೆ, ಬೆಳಗ್ಗೆ ಆಕೆಯ ತಂದೆ ಮುಲ್ಲಾಪುಡಿ ಶ್ರೀನಿವಾಸ್ ರಾವ್ ಎದ್ದು ನೋಡಿದಾಗ ಆಕೆ ಸುಟ್ಟು ಕರಕಲಾಗಿದ್ದಳು ಎಂದು ಪೋಷಕರು ಹೇಳಿದ್ದಾರೆ. ನಂತರ, ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ. ಇನ್ನು, ಶ್ರೀನಿವಾಸ್ ಎರಡನೇ ಮದುವೆಯಾಗಿದ್ದು, ಈ ಹಿನ್ನೆಲೆ ರೂಪಾ ರಾಣಿ ನಾಗಹಾರಿಕಾಳ ಮಲತಾಯಿ ಎಂದು ತಿಳಿದುಬಂದಿದೆ. ಹಾಗೂ, ಆಖೆಗೆ 9 ವರ್ಷದ ಮಗಳು ಮಂಜಲಿ ಪ್ರಿಯಾ ಸಹ ಅವರ ಮನೆಯಲ್ಲಿದ್ದಾರೆ ಎಂದು ವರದಿಯಾಗಿದೆ.
ಇದನ್ನು ಓದಿ: Delhi Crime: ಶ್ರದ್ದಾ ಬರ್ಬರ ಹತ್ಯೆ ಪ್ರಕರಣ: ಗ್ಯಾಸ್ ಸಿಲಿಂಡರ್ ಬಳಿ ದೊರೆತ ಸಾಕ್ಷ್ಯ..!
ಹಾಗೆ, ಅವರು ಕೆಲ ತಿಂಗಳುಗಳ ಹಿಂದಷ್ಟೇ ಹೊಸ ಮನೆ ಕಟ್ಟಿಸಿದ್ದು, ಆ ಮನೆಯಲ್ಲೇ ವಾಸ ಮಾಡುತ್ತಿದ್ದರು. ಆದರೆ, ಮೃತ ವಿದ್ಯಾರ್ಥಿನಿಯ ತಂದೆ ಮುಲ್ಲಾಪುಡಿ ಶ್ರೀನಿವಾಸ್ ಆ ದಿನ ರಾತ್ರಿ ಹಳೆಯ ಮನೆಯಲ್ಲಿ ಮಲಗಿದ್ದರು. ಕೆಲ ವಸ್ತುಗಳನ್ನು ಇನ್ನೂ ಹೊಸ ಮನೆಗೆ ಶಿಫ್ಟ್ ಮಾಡದ ಕಾರಣ ಅಲ್ಲೇ ಮಲಗಿದ್ದರು. ಬಳಿಕ, ಶನಿವಾರ ಬೆಳಗ್ಗೆ ಹೊಸ ಮನೆಗೆ ಹೋಗಿ ಹೆಂಡತಿಯನ್ನು ಎಬ್ಬಿಸಿದ್ದಾರೆ. ಆ ವೇಳೆ ಮಗಳ ಕೋಣೆಯಿಂದ ಹೊಗೆ ಬರುತ್ತಿರುವುದನ್ನು ತಂದೆ ಗಮನಿಸಿದ್ದಾರೆ.
ಈ ಹಿನ್ನೆಲೆ ಗಾಬರಿಗೊಂಡು ಮಗಳ ಕೋಣೆಗೆ ಹೋಗಿ ನೋಡಿದಾಗ ಆಕೆ ಬೆಂಕಿಯಲ್ಲಿ ಹೊತ್ತಿ ಉರಿದಿದ್ದಳು ಎಂದು ತಿಳಿದುಬಂದಿದೆ. ಪೊಲೀಸರಿಗೆ ತಂದೆ ಮುಲ್ಲಾಪುಡಿ ಶ್ರೀನಿವಾಸ ರಾವ್ ನೀಡಿರುವ ದೂರಿನ ಪ್ರಕಾರ, ಸ್ಥಳೀಯ ಸರ್ಕಲ್ ಇನ್ಸ್‌ಪೆಕ್ಟರ್ ಆಂಜನೇಯುಲು ಹಾಗೂ ಎಸ್‌ಐ ರಾಜ್‌ಕುಮಾರ್ ಸ್ಥಳಕ್ಕೆ ದೌಡಾಯಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Nidhi Gupta Murder Case: ಇಸ್ಲಾಂ ಸೇರದ್ದಕ್ಕೆ ನಾಲ್ಕನೇ ಅಂತಸ್ತಿಂದ ನೂಕಿ ಕೊಂದ..!
ಘಟನೆ ನಡೆದ ಸ್ಥಳದಲ್ಲಿ ಫೋರೆನ್ಸಿಕ್ ಸಿಬ್ಬಂದಿ ಹಾಗೂ ಶ್ವಾನ ದಳ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದೆ ಎಂದು ತಿಳಿದುಬಂದಿದೆ. ಹಾಗೂ, ಪೊಲೀಸರು ಹಲವರನ್ನು ಈ ವಿಚಾರವಾಗಿ ಬಂಧಿಸಿದ್ದು, ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಾಗೂ, ನಾಗಹಾರಿಕಾ ಮೃತದೇಹದ ಪೋಸ್ಟ್ ಮಾರ್ಟಂ ಮಾಡಿದ ನಂತರ, ಆಕೆಯ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರ ಮಾಡಲಾಗಿದೆ ಎಂದು ಪೊಲೀಸರು ಮಾಃಇತಿ ನೀಡಿದ್ದಾರೆ. ಆದರೂ, ಘಟನೆಗೆ ಸರಿಯಾದ ಕಾರಣ ಇನ್ನೂ ತಿಳಿದುಬಂದಿಲ್ಲ ಎನ್ನಲಾಗಿದ್ದು, ಈ ಹಿನ್ನೆಲೆ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ