Asianet Suvarna News Asianet Suvarna News

ಬಾಲ್ಯ ಸ್ನೇಹಿತನಿಗೆ 9 ಬಾರಿ ಚೂರಿ ಇರಿದು ಮರ್ಮಾಂಗ ಕತ್ತರಿಸಿ ಮೃತದೇಹದ ಬಾಯಿಗೆ ತುರುಕಿದ..!

ಶಮೀಮ್‌ ಗರ್ಲ್‌ಫ್ರೆಂಡ್‌ಗಳ ಪೈಕಿ ಒಬ್ಬಳನ್ನು ಆರೋಪಿ ಪ್ರೀತಿಸಲು ಆರಂಭಿಸಿದ ಹಾಗೂ ಆಕೆಯೊಂದಿಗೆ ನೀನು ನಿಷ್ಠವಾಗಿರು, ಅಥವಾ ನೀನು ಆಕೆಯನ್ನು ಇಷ್ಟಪಡದಿದ್ದರೆ ಅವಳನ್ನು ನನಗೆ ಬಿಟ್ಟುಬಿಡು ಎಂದೂ ಅಸ್ಲಾಂ ಅನ್ಸಾರಿ ಹೇಳಿದ್ದ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದರು.

man cuts friends private parts stuffs in deceaseds mouth in maharashtra bhiwandi ash
Author
First Published Nov 9, 2022, 3:12 PM IST

ಮಹಾರಾಷ್ಟ್ರದ (Maharashtra) ಭಿವಾಂಡಿಯಲ್ಲಿ (Bhiwandi) 21 ವರ್ಷ ವಯಸ್ಸಿನ ಹೋಟೆಲ್‌ ಮಾಲೀಕನನ್ನು(Hotel Owner) ಗೆಳೆಯನೇ (Friend) ಭೀಕರವಾಗಿ ಹತ್ಯೆ (Murder) ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. 9 ಬಾರಿ ಚೂರಿ ಇರಿದು ಆತನ ಮರ್ಮಾಂಗಗಳನ್ನು (Private Parts) ಕತ್ತರಿಸಿ ಅದನ್ನು ಮೃತದೇಹದ ಬಾಯಿಗೆ ತುರುಕಿದ್ದಾನೆ. ಹೋಟೆಲ್‌ ಮಾಲೀಕನ ಗರ್ಲ್‌ಫ್ರೆಂಡ್‌ ಅನ್ನು ಆತ ಇಷ್ಟಪಡಲು ಆರಂಭಿಸಿದ್ದ. ಆಕೆಯನ್ನು ಬಿಟ್ಟು ಕೊಡಲು ಗೆಳೆಯ ನಿರಾಕರಿಸಿದ ಕಾರಣ ಆತನನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಮೃತಪಟ್ಟನನ್ನು ಶಮೀಮ್‌ ಅನ್ಸಾರಿ (Shamim Ansari) ಎಂದು ತಿಳಿದುಬಂದಿದ್ದು, ಕೊಲೆ ಮಾಡಿದ ಆರೋಪಿಯನ್ನು 2 ಅಂಗಡಿಗಳ ಮಾಲೀಕ ಅಸ್ಲಾಂ ಅನ್ಸಾರಿ (Aslam Ansari) ಎಂದು ಗುರುತಿಸಲಾಗಿದೆ. ಇವರಿಬ್ಬರೂ ಬಾಲ್ಯದ ಸ್ನೇಹಿತರಾಗಿದ್ದು, ಪ್ರತಿದಿನ ಭೇಟಿ ಮಾಡುತ್ತಿದ್ದರು ಹಾಗೂ ಹಲವು ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರು. ಶಮೀಮ್‌ ಗರ್ಲ್‌ಫ್ರೆಂಡ್‌ನನ್ನು ಅಸ್ಲಾಂ ಇಷ್ಟಪಡಲು ಆರಂಭಿಸಿದ ನಂತರ ಅವರಿಬ್ಬರ ನಡುವೆ ಜಗಳ ಆರಂಭವಾಯಿತು ಎಂದು ಹೇಳಲಾಗಿದೆ. 
 
ಶಮೀಮ್‌ ಐದಕ್ಕೂ ಹೆಚ್ಚು ಹುಡುಗಿಯರನ್ನು ಪ್ರೀತಿಸುತ್ತಿದ್ದ ಎಂದು ಹೇಳಲಾಗಿದ್ದು, ಆತ ಯಾವ ಗರ್ಲ್‌ ಫ್ರೆಂಡ್‌ಗಳನ್ನೂ ಹೆಚ್ಚು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ ಎಂದು ಅಸ್ಲಾಮ್‌ ಹೇಳಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೆ, ಈ ಪೈಕಿ ಒಬ್ಬ ಗರ್ಲ್‌ ಫ್ರೆಂಡ್‌ ಫೀಲಿಂಗ್‌ ಅನ್ನು ಗಂಭೀರವಾಗಿ ತೆಗೆದುಕೋ ಎಂದು ಆತ ಹೇಳಿದ್ದ. ಆದರೆ, ಶಮೀಮ್‌ ಆ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಬಳಿಕ ಇಬ್ಬರು ಬಾಲ್ಯ ಸ್ನೇಹಿತರ ನಡುವೆ ಜಗಳ ಆರಂಭವಾಯಿತು ಎಂದೂ ಪೊಲೀಸರು ಹೇಳಿದ್ದಾರೆ. 

ಇದನ್ನು ಓದಿ: Girl Friend ಒಪ್ಪಲಿಲ್ಲ ಅಂತ ಆಕೆಯನ್ನು 3ನೇ ಮಹಡಿಯಿಂದ ಎಸೆದು ಡೆಡ್‌ಬಾಡಿ ಜತೆ ಎಸ್ಕೇಪ್‌ ಆದ ಭಗ್ನಪ್ರೇಮಿ..!

ಇನ್ನು, ಶಮೀಮ್‌ ಗರ್ಲ್‌ಫ್ರೆಂಡ್‌ಗಳ ಪೈಕಿ ಒಬ್ಬಳನ್ನು ಆರೋಪಿ ಪ್ರೀತಿಸಲು ಆರಂಭಿಸಿದ ಹಾಗೂ ಆಕೆಯೊಂದಿಗೆ ನೀನು ನಿಷ್ಠವಾಗಿರು, ಅಥವಾ ನೀನು ಆಕೆಯನ್ನು ಇಷ್ಟಪಡದಿದ್ದರೆ ಅವಳನ್ನು ನನಗೆ ಬಿಟ್ಟುಬಿಡು ಎಂದೂ ಅಸ್ಲಾಂ ಅನ್ಸಾರಿ ಹೇಳಿದ್ದ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದರು.

ಆದರೆ, ಆಕೆಯನ್ನು ಬಿಟ್ಟುಕೊಡಲು ಶಮೀಮ್‌ ಅನ್ಸಾರಿ ಸಿದ್ಧ ಇರಲಿಲ್ಲ. ಬಳಿಕ ಶಮೀಮ್‌ ಮರ್ಮಾಂಗ ಕತ್ತರಿಸುವುದಾಗಿ ಅಸ್ಲಾಂ ಎಚ್ಚರಿಕೆ ನೀಡಿದ್ದ. ಇದರಿಂದ ಆತನ ಗರ್ಲ್‌ಫ್ರೆಂಡ್‌ಗಳು ಬಿಟ್ಟುಬಿಡಬಹುದು ಎಂದು ಆರೋಪಿ ಹೇಳಿದ್ದ ಬಗ್ಗೆಯೂ ಪೊಲೀಸರು ಹೇಳಿದ್ದಾರೆ.  

ಇದನ್ನೂ ಓದಿ: ಗೆಳತಿಯೊಂದಿಗೆ ಮಾತಾಡಿದ್ದಕ್ಕೆ 19 ವರ್ಷದ ಸ್ನೇಹಿತನನ್ನು ಕೊಂದ ಯುವಕ

ಭಾನುವಾರ ರಾತ್ರಿ ಮೃತ ಶಮೀಮ್‌ ಹೋಟೆಲ್‌ನಲ್ಲ ಇಬ್ಬರೂ ಪಾರ್ಟಿ ಮಾಡುತ್ತಿದ್ದಾಗ ಗರ್ಲ್‌ಫ್ರೆಂಡ್‌ಗಳನ್ನು ಹಂಚಿಕೊಳ್ಳುವ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದೆ. ಸಿಟ್ಟಿನಲ್ಲಿ, ಆರೋಪಿ ಶಮೀಮ್‌ ಮೇಲೆ ಹಲ್ಲೆ ಮಾಡಿದ್ದು, ಆತನ ಕಣ್ಣುಗಳಿಗೂ ಸಹ ಚೂರಿಯಿಂದ ಇರಿದಿದ್ದಾನೆ. ಇದರ ಜತೆಗೆ ಆತನ ದೇಹದ 9 ಭಾಗಗಳನ್ನೂ ಕತ್ತರಿಸಿದ್ದಾನೆ. ಬಳಿಕ, ಆತನ ಮರ್ಮಾಂಗಗಳನ್ನು ಕತ್ತರಿಸಿ ಅದನ್ನು ಮೃತದೇಹದ ಬಾಯಯಿಯೊಳಗೆ ತುರುಕಿದ್ದಾನೆ ಎಂದು ವರದಿಯಾಗಿದೆ. ಅಮಲೇರಿದ ಸ್ಥಿತಿಯಲ್ಲಿ ಆತ ಆ ರೀತಿ ಮಾಡಿದ್ದಾನೆ ಎಂದೂ ಹೇಳಲಾಗಿದ್ದು, ತನ್ನ ಅಪರಾಧಗಳ ಅರಿವಿಗೆ ಬಂದಾಗ ಆತ ಆ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. 

ಹೋಟೆಲ್‌ ಕೆಲಸಗಾರನೊಬ್ಬ ಬೆಳಗ್ಗೆ ಹೋಟೆಲ್‌ಗೆ ಹೋದಾಗ ಘಟನೆ ನಮ್ಮ ಬೆಳಕಿಗೆ ಬಂದಿದೆ ಎಂದು ಕ್ರೈಂ ಬ್ರ್ಯಾಂಚ್‌ ಅಧಿಕಾರಿ ಹೇಳಿದ್ದಾರೆ. ಅಲ್ಲದೆ, ಹೋಟೆಲ್‌ ಅಕ್ಕಪಕ್ಕದವರು ಸಹ ರಕ್ತದ ಕಲೆಗಳನ್ನು ನೋಡಿದ್ದಾರೆ. ಬಳಿಕ, ನಾವು ತನಿಖೆ ಆರಂಭಿಸಿದೆವು ಹಾಗೂ ಆರೋಪಿ ಅಸ್ಲಾಂ ಕಳೆದ ರಾತ್ರಿ ಆತನ ಜತೆಗಿದ್ದ ಎಂಬುದು ನಮ್ಮ ಗಮನಕ್ಕೆ ಬಂದಿದೆ ಎಂದೂ ಅಧಿಕಾರಿ ಹೇಳಿದ್ದಾರೆ. 

ಇದನ್ನೂ ಓದಿ: Sharon Murder Case: ಬ್ರೇಕಪ್‌ಗೆ ಹಿಂಜರಿದ ಕಾರಣಕ್ಕೆ ನಡೆದ ಕೊಲೆ, ಕೊಲೆಗಾತಿಯ ತಾಯಿ, ಅಂಕಲ್‌ ಕೂಡ ಅರೆಸ್ಟ್‌!

Follow Us:
Download App:
  • android
  • ios