Delhi Crime: ಶ್ರದ್ದಾ ಬರ್ಬರ ಹತ್ಯೆ ಪ್ರಕರಣ: ಗ್ಯಾಸ್ ಸಿಲಿಂಡರ್ ಬಳಿ ದೊರೆತ ಸಾಕ್ಷ್ಯ..!

By BK Ashwin  |  First Published Nov 17, 2022, 1:03 PM IST

ಶ್ರದ್ದಾಳ ಕೊಂದ ಪಾಪಿ, ಆಕೆಯ ದೇಹ ತುಂಡು ಮಾಡುವಾಗ ರಕ್ತದ ಕಲೆ ಗ್ಯಾಸ್ ಸಿಲಿಂಡರ್ ಬಳಿ ಸಿಡಿದಿದ್ದು, ಈ ಹಿನ್ನೆಲೆ ಅಡುಗೆ ಮನೆಯಲ್ಲಿದ್ದ ಸಿಲಿಂಡರ್‌ ಬಳಿ ರಕ್ತದ ಕಲೆ ಪತ್ತೆಯಾಗಿದೆ.


ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (New Delhi) ಶ್ರದ್ಧಾಳನ್ನು (Shraddha Walkar) ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣ (Murder Case) ದಿನೇ ದಿನೇ ಟ್ವಿಸ್ಟ್‌ ಪೆದುಕೊಳ್ಳುತ್ತಲೇ ಇದೆ. ಆರೋಪಿ ಅಫ್ತಾಬ್‌ ಪೂನಾವಾಲಾ (Aftab Poonawala) ಕೊಲೆ ಮಾಡಿದ ಗುರುತು ಅಡುಗೆ ಮನೆಯಲ್ಲಿ (Kitchen) ಸಾಕ್ಷ್ಯ ದೊರೆತಿದೆ. ಗ್ಯಾಸ್ ಸಿಲಿಂಡರ್ (Gas Cylinder) ಬಳಿ ರಕ್ತದ ಕಲೆ (Blood Stains) ಪತ್ತೆಯಾಗಿದ್ದು, ಇದು ಶ್ರದ್ಧಾಳದ್ದೇ ಎಂದು ಹೇಳಲಾಗಿದೆ. ಈ ಮಧ್ಯೆ, ಆರೋಪಿ ಅಫ್ತಾಬ್ ಪೂನಾವಾಲನ ಪೊಲೀಸ್‌ ಕಸ್ಟಡಿ (Police Custody) ಅವಧಿ ಅಂತ್ಯವಾಗುತ್ತಿದ್ದು, ಈ ಹಿನ್ನೆಲೆ ಇಂದು ಅವನನ್ನು ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ. ನವದೆಹಲಿಯ ಸಾಕೇತ್‌ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ ಎಂದು ವರದಿಯಾಗಿದೆ. ಈ ವೇಳೆ ಕಸ್ಡಿ ಅವಧಿ ವಿಸ್ತರಣೆಗೆ ಪೊಲೀಸರು ಮನವಿ ಮಾಡಲಿದ್ದು, ಹಾಗೂ ನಾರ್ಕೋ ಟೆಸ್ಟ್‌ ಮಾಡಲು ಸಹ ಮನವಿ ಮಾಡಲಿದ್ದಾರೆ.

ಇನ್ನು, ಶ್ರದ್ಧಾ ಹತ್ಯೆ ಪ್ರಕರಣ ವಿಚಾರವಾಗಿ ಹಂತಕನ ಕಟುಕನಾಟವೇ ಅವನಿಗೆ ಮುಳುವಾಗಿದೆ. ಶ್ರದ್ದಾಳ ಕೊಂದ ಪಾಪಿ, ಆಕೆಯ ದೇಹ ತುಂಡು ಮಾಡುವಾಗ ರಕ್ತದ ಕಲೆ ಗ್ಯಾಸ್ ಸಿಲಿಂಡರ್ ಬಳಿ ಸಿಡಿದಿದ್ದು, ಈ ಹಿನ್ನೆಲೆ ಅಡುಗೆ ಮನೆಯಲ್ಲಿದ್ದ ಸಿಲಿಂಡರ್‌ ಬಳಿ ರಕ್ತದ ಕಲೆ ಪತ್ತೆಯಾಗಿದೆ. ಇದು ಶ್ರದ್ಧಾಳನ್ನು ಕೊಲೆಯ ಮಾಡಿದ ಗುರುತಿಗೆ ಸಾಕ್ಷ್ಯವಾಗಿದೆ. 

Tap to resize

Latest Videos

ಇದನ್ನು ಓದಿ: Shraddha Murder Case: ಕತ್ತರಿಸಿಟ್ಟಿದ್ದ ರುಂಡದ ಮೇಲೂ ಹಲ್ಲೆ..! ಶ್ರದ್ಧಾ ರುಂಡದ ಜತೆ ಮಾತುಕತೆ ನಡೆಸುತ್ತಿದ್ದ ಅಫ್ತಾಬ್‌

ಇಷ್ಟೇ ಅಲ್ಲದೆ, ಹಂತಕನ ಒಎಲ್ಎಕ್ಸ್‌ ಆಟ ಸಹ ಬಯಲಾಗಿದೆ. ಶ್ರದ್ದಾಳನ್ನು ಕೊಂದ ಬಳಿಕ ಅಫ್ತಾಬ್‌ ತನ್ನ ಮೊಬೈಲ್ ಅನ್ನು ಓಎಲ್‌ಎಕ್ಸ್‌ನಲ್ಲಿ ಮಾರಾಟ ಮಾಡಿರುವುದು ಬಯಲಾಗಿದ್ದು, ಹಾಗೂ ಶ್ರದ್ಧಾಳ ಸಿಮ್‌ಗಳನ್ನು ಬೇರೆ ಬೇರೆ ಮೊಬೈಲ್‌ಗೆ ಹಾಕಿ ಪಾತಕಿ ಬಳಸುತ್ತಿದ್ದ ಎಂದು ಸಹ ತಿಳಿದುಬಂದಿದೆ. ಇನ್ನು, ಶ್ರದ್ಧಾ ಮೊಬೈಲ್‌ ಸಹ ಇನ್ನೂ ದೊರೆತಿಲ್ಲ ಎಂದು ಹೇಳಲಾಗಿದೆ. ಕ್ರೆಡಿಟ್ ಕಾಡ್೯,  ಡೆಬಿಟ್ ಕಾಡ್೯ಗಳಿಗಾಗಿಯೂ ಅಫ್ತಾಬ್‌ ಶ್ರದ್ಧಾಳ ಸಿಮ್‌ ಬಳಸಿದ್ದಾನೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ. 

 ಶ್ರದ್ಧಾ ಮದುವೆಗೆ ಒತ್ತಾಯ ಮಾಡಿದ ಕಾರಣ, ಹಂತಕ ಅಫ್ತಾಬ್ ಬೇರೆ ಯುವತಿಯರ ಜೊತೆ ಚಲ್ಲಾಟ ಶುರು ಮಾಡಿದ್ದ. ಡೇಟಿಂಗ್ ಆಪ್‌ಗಳ ಮೂಲಕ ಇತರೆ ಯುವತಿಯರ ಜೊತೆ ನಿರಂತರ ಸಂಪರ್ಕದಲ್ಲಿದ್ದ ಎಂದು ತಿಳಿದುಬಂದಿದ್ದು, ಈ ವಿಚಾರವಾಗೇ ಮೇ 18 ರಂದು ಅಂದರೆ ಶ್ರದ್ಧಾ ಹತ್ಯೆಯಾದ ದಿನ ಜಗಳವಾಗಿತ್ತು ಎಂದು ಸಹ ದೆಹಲಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Shraddha Murder Case: ಗೆಳತಿ ಹೆಣ ಇಟ್ಕೊಂಡೇ ಬೇರೆ ಹುಡ್ಗೀರ ಜತೆ ಅಫ್ತಾಬ್‌ ರಾಸಲೀಲೆ..!

ನೀರಿನ ಬಿಲ್‌ ಸಾಕ್ಷ್ಯ..!
ಹೊಸ ಬೆಳವಣಿಗೆಯಲ್ಲಿ ಅಫ್ತಾಬ್ ಫ್ಲ್ಯಾಟ್‌ನಲ್ಲಿ 300 ರೂ. ನೀರಿನ ಬಿಲ್‌ ಕಟ್ಟದೆ ಬಾಕಿ ಉಳಿದಿರುವುದು ದೆಹಲಿ ಪೊಲೀಸರಿಗೆ ಸಿಕ್ಕಿದೆ. ದೆಹಲಿ ಸರ್ಕಾರ 20 ಸಾವಿರ ಲೀಟರ್‌ ನೀರನ್ನು ಉಚಿತವಾಗಿ ನೀಡಿದರೂ, 300 ರೂ. ನಷ್ಟು ಬಿಲ್‌ ಬಂದಿರುವುದು ಪೊಲೀಸರಿಗೆ ಅಚ್ಚರಿಯಾಗಿ ಪರಿಣಮಿಸಿದ್ದು, ಈ ಹಿನ್ನೆಲೆ ಈ ಕೋನದಲ್ಲೂ ವಿಚಾರಣೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಅಫ್ತಾಬ್‌ ಫ್ಲ್ಯಾಟ್‌ ನೆರೆಹೊರೆಯವರು ಈ ನೀರಿನ ಬಿಲ್‌ ವಿಚಾರ ತಿಳಿಸಿದ್ದಾರೆ. 

ಅಫ್ತಾಬ್‌ ಶ್ರದ್ಧಾಳ ಕತ್ತು ಹಿಸುಕಿ ಕೊಲೆ ಮಾಡಿ, ಆಕೆಯನ್ನು 35 ಪೀಸ್‌ ಮಾಡಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಅಲ್ಲದೆ, ಆಕೆಯ ದೇಹದ ಒಂದೊಂದು ತುಂಡುಗಳನ್ನು ಮೆಹ್ರೌಲಿ ಅರಣ್ಯ ಪ್ರದೇಶದ ಒಂದೊಂದು ಕಡೆ ಹಾಕಿದ್ದಾನೆ ಎಂದು ವರದಿಯಾಗಿದೆ. ಈ ಪೈಕಿ 13 ದೇಹದ ಭಾಗಗಳು ದೊರೆತಿದೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ: Shraddha Murder Case: ಮೃತದೇಹ ಪೀಸ್‌ ಮಾಡಿದ ಬಳಿಕ ಆಕೆಯ ತಲೆಯನ್ನು ಫ್ರಿಡ್ಜ್‌ನಲ್ಲಿಟ್ಟು ಶ್ರದ್ಧಾ ಮುಖ ನೋಡ್ತಿದ್ದ ಪಾತಕಿ..!

click me!