ತೊಂದ್ರೆ ಕೊಟ್ರೆ ಮನೆಗೆ ನುಗ್ಗಿ ಹೊಡಿತೀವಿ, ಕಾಂಗ್ರೆಸ್ ಶಾಸಕನಿಗೆ ಜೆಡಿಎಸ್ ಸಂಭಾವ್ಯ ಅಭ್ಯರ್ಥಿ ರೌಡಿ ಶೀಟರ್ ಧಮ್ಕಿ!

Published : Mar 23, 2023, 12:56 PM IST
ತೊಂದ್ರೆ ಕೊಟ್ರೆ ಮನೆಗೆ ನುಗ್ಗಿ ಹೊಡಿತೀವಿ, ಕಾಂಗ್ರೆಸ್ ಶಾಸಕನಿಗೆ ಜೆಡಿಎಸ್ ಸಂಭಾವ್ಯ ಅಭ್ಯರ್ಥಿ ರೌಡಿ ಶೀಟರ್ ಧಮ್ಕಿ!

ಸಾರಾಂಶ

ನಮ್ಮ ಹುಡುಗರಿಗೆ ತೊಂದರೆ ಕೊಟ್ರೆ   ಮನೆಗೆ ನುಗ್ಗಿ ಹೊಡಿತೀವಿ ಎಂದು ಬಂಗಾರಪೇಟೆ ಕಾಂಗ್ರೆಸ್ ಶಾಸಕ ನಾರಾಯಣಸ್ವಾಮಿಗೆ ಜೆಡಿಎಸ್ ಮಾಜಿ ಕಾರ್ಪೊರೇಟರ್ ಕಂ ರೌಡೀಶೀಟರ್ ಇಮ್ರಾನ್ ಪಾಷಾ ಅವಾಜ್ ಹಾಕಿರುವ ಘಟನೆ ನಡೆದಿದೆ.

ಕೋಲಾರ (ಮಾ.23): ನಮ್ಮ ಹುಡುಗರಿಗೆ ತೊಂದರೆ ಕೊಟ್ರೆ   ಮನೆಗೆ ನುಗ್ಗಿ ಹೊಡಿತೀವಿ ಎಂದು ಕಾಂಗ್ರೆಸ್ ನಾಯಕ, ಬಂಗಾರ ಪೇಟೆ ಶಾಸಕ ನಾರಾಯಣಸ್ವಾಮಿಗೆ ಅವರಿಗೆ ಮಾಜಿ ಕಾರ್ಪೊರೇಟರ್ ಕಂ ರೌಡೀಶೀಟರ್ ಮಾತ್ರವಲ್ಲ ಜೆಡಿಎಸ್ ಸಂಭ್ಯಾವ್ಯ ಅಭ್ಯರ್ಥಿ ಧಮ್ಕಿ ಹಾಕಿರುವ ಘಟನೆ ನಡೆದಿದೆ. ನಮ್ಮವರಿಗೆ ತೊಂದರೆ ಕೊಟ್ರೆ ಮನೆಗೆ ನುಗ್ಗಿ ಹೊಡೀತಿವಿ ನೀನೆಷ್ಟೆ ಪ್ರಭಾವಿಯಾದ್ರೂ ಬಿಡಲ್ಲ ಚುನಾವಣೆಯಲ್ಲಿ ನಿಂತು ನೀನಾದ್ರೂ ಗೆಲ್ಲು ಇಲ್ಲ ನಮ್ಮ ಅಭ್ಯರ್ಥಿಯಾದ್ರೂ ಗೆಲ್ಲಲಿ. ಅದನ್ನ ಬಿಟ್ಟು ಧಮ್ಕಿ ಹಾಕೋದು, ಅವಾಜ್ ಹಾಕೋದು ಮಾಡಿದ್ರೆ ಮನೆಗೆ ನುಗ್ಗಿ ಹೊಡಿತೀವಿ ಎಂದು ರಾಜಾರೋಷವಾಗಿ, ಬಹಿರಂಗವಾಗಿ ಮಾಜಿ ಕಾರ್ಪೋರೇಟರ್ ,ಜೆ ಡಿಎಸ್ ಮುಖಂಡ ಇಮ್ರಾನ್ ಪಾಷಾ ಉರ್ದುವಿನಲ್ಲಿ ಅವಾಝ್ ಹಾಕಿರುವ ಘಟನೆ ನಡೆದಿದೆ. 

ಬೇರೆಯವರು ಮಾತನಾಡುವ ಸಂದರ್ಭದಲ್ಲಿ ಇಮ್ರಾನ್ ಪಾಷಾ  ಮೈಕ್ ಕಸಿದು ಅವಾಝ್ ಹಾಕಿದ್ದು, ಈ ಮೂಲಕ ನಾರಾಯಣ ಸ್ವಾಮಿಯವರ ವಿರುದ್ಧ ಗುಡುಗಿದ್ದಾರೆ. ಬಂಗಾರಪೇಟೆಯ ಸಿ ರಹೀಮ್ ನಗರದಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ವಿಡಿಯೋ ವೈರಲ್ ಆಗಿದೆ.

ಕಾರ್ಯಕರ್ತರ ಜತೆ ಶಾಸಕ ನಾರಾಯಣಸ್ವಾಮಿ ಧರಣಿ: ಕಾಂಗ್ರೆಸ್‌ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಜೆಡಿಎಸ್‌ ಕಾರ‍್ಯಕರ್ತರ ಮೇಲೆ ದೌರ್ಜನ್ಯ ದಬ್ಬಾಳಿಕೆ ಮಾಡಿದರೆ ನಿಮ್ಮ ಮನೆಗೆ ನುಗ್ಗಿ ಕೊಲೆ ಮಾಡುತ್ತೇವೆಂದು ಬೆದರಿಕೆ ಹಾಕಿದ ಆರೋಪಿಯನ್ನು ಬಂಧಿಸಬೇಕೆಂದು ಆಗ್ರಹಿಸಿ ಶಾಸಕರ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ‍್ಯಕರ್ತರು ಪೊಲೀಸ್‌ ಠಾಣೆ ಎದುರು ಅಹೋರಾತ್ರಿ ಧರಣಿ ನಡೆಸಿದರು.

ಬಿಎಂಟಿಸಿ ಬಸ್ ಗೆ ಬೆಂಕಿ ಬಿದ್ದು ಕಂಡಕ್ಟರ್ ಸಜೀವ ದಹನ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್!

ಜೆಡಿಎಸ್‌ ಅಲ್ಪಸಂಖ್ಯಾತರ ಮುಖಂಡ ಇಮ್ರಾನ್‌ ಪಾಷಗೆ ಸ್ಥಳಿಯ ಮುಸ್ಲಿಂ ಸಮುದಾಯದ ಬಡಾವಣೆಗಳಲ್ಲಿ ಪ್ರಚಾರ ಮಾಡಲು ಕಾಂಗ್ರೆಸ್‌ ಶಾಸಕರು ಅಡ್ಡಿಪಡಿಸಿ ದೌರ್ಜನ್ಯ ಮಾಡುತ್ತಿದ್ದಾರೆಂದು ದೂರಿದ್ದರು. ಮುಸ್ಲಿಂರಲ್ಲಿ ಆತ್ಮಧೈರ್ಯ ತುಂಬಲು ಅವರ ಬಡಾವಣೆಗಳಿಗೆ ತೆರಳಿ ಇಮ್ರಾನ್‌ ಪಾಷ ಭಾಷಣ ಮಾಡುವಾಗ ಹೇ ನಾರಾಯಣಸ್ವಾಮಿ ನೀನು ನಮ್ಮವರ ಮೇಲೆ ದೌರ್ಜನ್ಯ,ದಬ್ಬಾಳಿಕೆ ಮಾಡಿ ಬೆದರಿಕೆ ಹಾಕಿದರೆ ನಿಮ್ಮ ಮನೆಗೆ ನುಗ್ಗಿ ನಿನ್ನನ್ನು ಕೊಲೆ ಮಾಡುವೆ ಹುಷಾರ್‌ ಎಂದು ಎಚ್ಚರಿಕೆ ನೀಡಿದ್ದರು.

ದುಬೈನಿಂದ ಭಾರತಕ್ಕೆ ಹಾರುತ್ತಿದ್ದ ವಿಮಾನದಲ್ಲಿ ಕುಡಿದು ಗಲಾಟೆ, ತಾಯ್ನಾಡಿಗೆ ಕಾಲಿಟ್ಟ ತಕ್ಷಣ ಕೈಗೆ

ಜೆಡಿಎಸ್‌ ಅಭ್ಯರ್ಥಿ ಮಲ್ಲೇಶಬಾಬು, ಇಮ್ರಾನ್‌ ಪಾಷ ವಿರುದ್ಧ ಕೇಸ್‌ ದಾಖಲು: ಇಮ್ರಾನ್‌ ಪಾಷ ಮಾತಿನಿಂದ  ಕೆರಳಿದ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಒಬ್ಬ ಶಾಸಕರಿಗೆ ಕೊಲೆ ಬೆದರಿಕೆ ಹಾಕಿದರೆ ಇನ್ನು ಸಾಮಾನ್ಯ ಕಾರ‍್ಯಕರ್ತರ ಪಾಡೇನು ಎಂದು ಪ್ರಶ್ನಿಸಿ,ಕೂಡಲೇ ಇಮ್ರಾನ್‌ ಪಾಷ ಮತ್ತು ಅವರಿಗೆ ಪ್ರಚೋದನಕಾರಿ ಭಾಷಣ ಮಾಡಲು ಸಹಕರಿಸಿ ಜೆಡಿಎಸ್‌ ಅಭ್ಯರ್ಥಿ ಮಲ್ಲೇಶಬಾಬು, ಮಾಜಿ ಪುರಸಭೆ ಸದಸ್ಯ ಶಿರಾಜ್‌ರನ್ನು ಕೂಡಲೆ ಬಂಧಿಸಬೇಕೆಂದು ಒತ್ತಾಯಿಸಿ ನೂರಾರು ಕಾರ‍್ಯಕರ್ತರೊಂದಿಗೆ ಪೊಲೀಸ್‌ ಠಾಣೆ ಮುಂದೆ ಧರಣಿ ಮಾಡಿದರು. ಕೊನೆಗೆ ಪೊಲೀಸರು ಇಮ್ರಾನ್‌ ಪಾಷ, ಸಿರಾಜ್‌ ಮತ್ತು ಜೆಡಿಎಸ್‌ ಅಭ್ಯರ್ಥಿ ಮಲ್ಲೇಶಬಾಬು ವಿರುದ್ಧ ಪ್ರಕರಣ ದಾಖಲಿಸಿದ ನಂತರ ಧರಣಿ ಕೈಬಿಟ್ಟರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!
ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!