ನಗರದಲ್ಲಿ ಆಟೋ ರಿಕ್ಷಾ ಕಳ್ಳತನ ಮಾಡಿ ಮಾರಾಟ ಮಾಡ್ತಿದ್ದ ಖತರ್ನಾಕ್ ಖದೀಮರನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಇಬ್ಬರ ಆರೋಪಿಗಳನ್ನು ಬಂಧಿಸಿರುವ ಪೊಲೀಸರು. 7.5ಲಕ್ಷ ಮೌಲ್ಯದ ಮೂರು ಆಟೋಗಳು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು (ಡಿ.31): ನಗರದಲ್ಲಿ ಆಟೋ ರಿಕ್ಷಾ ಕಳ್ಳತನ ಮಾಡಿ ಮಾರಾಟ ಮಾಡ್ತಿದ್ದ ಖತರ್ನಾಕ್ ಖದೀಮರನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.
ಇಬ್ಬರ ಆರೋಪಿಗಳನ್ನು ಬಂಧಿಸಿರುವ ಪೊಲೀಸರು. 7.5ಲಕ್ಷ ಮೌಲ್ಯದ ಮೂರು ಆಟೋಗಳು ವಶಕ್ಕೆ ಪಡೆದಿದ್ದಾರೆ. ಬಂಧಿತರ ಪೈಕಿ ಒರ್ವ ಆಟೋ ಚಾಲಕನಾಗಿದ್ದಾನೆ. ಇನ್ನೋರ್ವ ಆಟೋ ಡೀಲರ್ ಆಗಿ ಕೆಲಸ ಮಾಡುತ್ತಿದ್ದಾನೆ. ಇಬ್ಬರು ಸೇರಿ ಮನೆಮುಂದೆ, ಪಾರ್ಕ್, ರಸ್ತೆಗಳಲ್ಲಿ ಒಂಟಿಯಾಗಿ ನಿಲ್ಲುತ್ತಿದ್ದ ಆಟೋ ರೀಕ್ಷಾಗಳನ್ನು ಟಾರ್ಗೆಟ್ ಮಾಡುತ್ತಿದ್ದ ಖದೀಮರು. ಆಟೋಗಳು ಲಾಕ್ ಆದ್ರೂ ಓಡಿಸಿಕೊಂಡು ಎಸ್ಕೇಪ್ ಆಗುತ್ತಿದ್ದ ಖದೀಮರು.
ಉಂಡು ಹೋದ ಕೊಂಡು ಹೋದ ಖತರ್ನಾಕ್ ಕಳ್ಳ; ಬಾಡೂಟಕ್ಕೆ ಬಂದವ ಚಿನ್ನ ದೊಚಿ ಪರಾರಿ!
ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿ. ರಾಬರಿ, ಕಳ್ಳತನ ಸೇರಿದಂತೆ ಹಲವು ಕೃತ್ಯಗಳಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದರು. ಕಾಟನ್‌ಪೇಟೆ, ತಲಘಟ್ಟಪುರ ಠಾಣಾ ವ್ಯಾಪ್ತಿಯಲ್ಲಿ ನಡೆಸಿರುವ ಕಳ್ಳತನ. ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಈ ಹಿಂದೆ ನಡೆದಿರುವ ಹಲವು ಕಳ್ಳತನ ಪ್ರಕರಣಗಳಲ್ಲಿ ಸಂಬಂಧವಿದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲು.
ಆಸ್ತಿ ತೆರಿಗೆ ಪಾವತಿ ಮಾಡದ ಹಿನ್ನೆಲೆ ಕಳೆದೆರಡು ದಿನಗಳಿಂದ ಕ್ಲೋಸ್ ಆಗಿದ್ದ ಮಂತ್ರಿಮಾಲ್ ಇಂದು ಓಪನ್