ರಸ್ತೆ ಅಪಘಾತದಲ್ಲಿ ರಂಗಭೂಮಿ ಕಲಾವಿದ ಗೌತಮ್ ಕುಲಾಲ್ ವಗ್ಗ ದುರ್ಮರಣ!

By Kannadaprabha News  |  First Published Dec 31, 2023, 4:17 PM IST

ಬಂಟ್ವಾಳ ಸಮೀಪದ ವಗ್ಗದಲ್ಲಿ ಭಾನುವಾರ ಮುಂಜಾನೆ ನಡೆದ ರಸ್ತೆ ಅಪಘಾತದಲ್ಲಿ ರಂಗಭೂಮಿ ಕಲಾವಿದ ಗೌತಮ್ ಕುಲಾಲ್ ವಗ್ಗ (28) ಮೃತಪಟ್ಟಿದ್ದಾರೆ. ಬಂಟ್ವಾಳ ತಾಲ್ಲೂಕಿನ ದೇವಸ್ಯಪಡೂರು ಗ್ರಾಮದ ಮರಾಯಿದೊಟ್ಟು, ನೂಜೆ ಗ್ರಾಮದ ಗೌತಮ್ ಅವರು ಪಿಂಗಾರ ಕಲಾವಿದೆರ್ ಬೆದ್ರ ರಂಗಭೂಮಿ ತಂಡದ‌ ಸದಸ್ಯರಾಗಿದ್ದರು.


ಬಂಟ್ವಾಳ (ಡಿ..31): ಬಂಟ್ವಾಳ ಸಮೀಪದ ವಗ್ಗದಲ್ಲಿ ಭಾನುವಾರ ಮುಂಜಾನೆ ನಡೆದ ರಸ್ತೆ ಅಪಘಾತದಲ್ಲಿ ರಂಗಭೂಮಿ ಕಲಾವಿದ ಗೌತಮ್ ಕುಲಾಲ್ ವಗ್ಗ (28) ಮೃತಪಟ್ಟಿದ್ದಾರೆ. ಬಂಟ್ವಾಳ ತಾಲ್ಲೂಕಿನ ದೇವಸ್ಯಪಡೂರು ಗ್ರಾಮದ ಮರಾಯಿದೊಟ್ಟು, ನೂಜೆ ಗ್ರಾಮದ ಗೌತಮ್ ಅವರು ಪಿಂಗಾರ ಕಲಾವಿದೆರ್ ಬೆದ್ರ ರಂಗಭೂಮಿ ತಂಡದ‌ ಸದಸ್ಯರಾಗಿದ್ದರು.

ಈ ತಂಡವು ಬೆಳುವಾಯಿಯ ಕರಿಯನಂಗಡಿಯಲ್ಲಿ ನಿನ್ನೆ ರಾತ್ರಿ 'ಕದಂಬ' ನಾಟಕವಬ್ಬು ಪ್ರದರ್ಶಿಸಿತ್ತು. ಅದರಲ್ಲಿ ಅಭಿನಯಿಸಿದ್ದ ಗೌತಮ್ ಮನೆಗೆ ಮರಳುತ್ತಿದ್ದರು.

Tap to resize

Latest Videos

ಅವರ ಬೈಕ್ ಮುಂಜಾನೆ ವೇಳೆ ವಗ್ಗದಲ್ಲಿ ಮರಕ್ಕೆ ಡಿಕ್ಕಿ ಹೊಡೆದಿತ್ತು. ಗಾಯಗೊಂಡು ಬಿದ್ದಿದ್ದ ಅವರನ್ನು ಗಮನಿಸಿದ ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದರು. ಅದಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.

 

ಕರಾವಳಿಯ ಮೊದಲ ಮಂಗಳೂರು-ಮಡ್ಗಾಂವ್‌ ವಂದೇ ಭಾರತ್‌ ಎಕ್ಸ್‌ಪ್ರೆಸ್‌, ರೈಲು ವೇಳಾಪಟ್ಟಿ, ಟಿಕೆಟ್‌ ದರ ಇಲ್ಲಿದೆ

ಅವಿವಾಹಿತರಾಗಿದ್ದ ಗೌತಮ್ ಬಿ.ಸಿ.ರೋಡ್ ನ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು. ಮೃತರಿಗೆ ತಾಯಿ ಸಹೋದರ ಮತ್ತು ಸಹೋದರಿ ಇದ್ದಾರೆ.

click me!