ಪ್ರೇಮಿಗಳು ಪ್ರೀತಿ ಮದುವೆಯಾಗಿದ್ದಕ್ಕೆ ಯುವಕನ ಪೋಷಕರ ಮೇಲೆ ಹುಡುಗಿಯ ಸಂಬಂಧಿಕರು ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕಮಲಾಪುರ ಗ್ರಾಮದಲ್ಲಿ ನಡೆದಿದೆ.
ದಾವಣಗೆರೆ (ಡಿ.31) : ಪ್ರೇಮಿಗಳು ಪ್ರೀತಿ ಮದುವೆಯಾಗಿದ್ದಕ್ಕೆ ಯುವಕನ ಪೋಷಕರ ಮೇಲೆ ಹುಡುಗಿಯ ಸಂಬಂಧಿಕರು ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕಮಲಾಪುರ ಗ್ರಾಮದಲ್ಲಿ ನಡೆದಿದೆ.
ಆರುಂಡಿ ಬಸಪ್ಪ ಹಾಗು ಪತ್ನಿ ಮಲ್ಲಮ್ಮನ ಮೇಲೆ ಮಾರಣಾಂತಿಕ ಹಲ್ಲೆ. ಹಲ್ಲೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಲೇಬೆನ್ನೂರು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರೀತಿಸಿದ ಅಪ್ರಾಪ್ತ ಮಗಳು ಸಾಂತ್ವಾನ ಕೇಂದ್ರಕ್ಕೆ, ಅನ್ಯಜಾತಿಯವನ ಪ್ರೀತಿಸಿದ ಇನ್ನೊಬ್ಬ ಮಗಳನ್ನು ಕೊಂದ ತಂದೆ!
ಏನಿದು ಘಟನೆ?
ಕಮಲಾಪುರದ ಸಿದ್ದಾರ್ಥ ಹಾಗು ಸೃಷ್ಟಿ ಪರಸ್ಪರ ಪ್ರೀತಿಸುತ್ತಿದ್ದರು. ಪ್ರೇಮಿಗಳಿಗೆ ಮದುವೆಯಾಗಲು ಜಾರಿ ಅಡ್ಡಿಯಾಗಿದ್ದರಿಂದ ಯುವತಿಯ ಪೋಷಕರು ವಿರೋಧಿಸಿದ್ದರು. ಈ ಹಿನ್ನೆಲೆ ಕಳೆದ 20 ದಿನಗಳ ಹಿಂದೆ ದೇವಸ್ಥಾನದಲ್ಲಿ ಮದುವೆಯಾಗಿದ್ದ ಜೋಡಿ. ಬಳಿಕ ಸಬ್ ರಿಜಿಸ್ಟರ್ ನಲ್ಲಿ ಆಪೀಸ್ ನಲ್ಲಿ ನೋಂದಣಿ ಮಾಡಿಸಿದ್ದರು.
ಅನ್ಯಜಾತಿ ಯುವಕರೊಂದಿಗೆ ಪ್ರೀತಿ: ಪೋಷಕರಿಂದಲೇ 18, 16ರ ಇಬ್ಬರು ಹೆಣ್ಣು ಮಕ್ಕಳ ಹತ್ಯೆ
ಮಗಳು ಬೇರೆ ಜಾತಿ ಯುವಕನೊಂದಿಗೆ ಮದುವೆಯಾಗಿರುವ ವಿಚಾರ ಗೊತ್ತಾಗಿ ನಿನ್ನೆ ಸಂಜೆ ಹುಡುಗನ ಮನೆಗೆ ನುಗ್ಗಿದ್ದ ಯುವತಿ ಪೋಷಕರು. ಸಿದ್ಧಾರ್ಥ ತಂದೆಯಾ ಆರುಂಡಿ ಬಸಪ್ಪ, ಪತ್ನಿ ಮಲ್ಲಮ್ಮನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಜಾತಿ ಬೇರೆ ಬೇರೆ ಎಂಬ ಕಾರಣ ನೀಡಿ ಇವರೇ ಮದುವೆ ಮಾಡಿಸಿದ್ದಾರೆಂದು ಆರುಂಡಿ ಬಸಪ್ಪನ ಮೈಮೇಲಿನ ಬಟ್ಟೆ ಬಿಚ್ಚಿ ಅಮಾನುಷವಾಗಿ ಥಳಿಸಿರುವ ಹುಡುಗಿಯ ಮಾವಂದಿರು. ಹಲ್ಲೆಗೊಳಗಾಗಿ ತೀವ್ರ ಗಾಯಗೊಂಡಿರುವ ಬಸಪ್ಪನಿಗೆ ದಾವಣಗೆರೆ ಚಿಗಟೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಸದ್ಯ ಪ್ರಕರಣ ಸಂಬಂಧ ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.