Bengaluru Crime: 200 ವರ್ಷದ ಬುದ್ಧನ ವಿಗ್ರಹ ರಫ್ತಿಗೆ ಯತ್ನಿಸುತ್ತಿದ್ದವರ ಸೆರೆ

By Kannadaprabha NewsFirst Published Dec 19, 2022, 9:48 AM IST
Highlights

ಪ್ರಾಚೀನ ಕಾಲದ ಬುದ್ಧನ ವಿಗ್ರಹವನ್ನು ವಿದೇಶಕ್ಕೆ ರಫ್ತು ಮಾಡುವ ಉದ್ದೇಶದಿಂದ ಮಾರಾಟಕ್ಕೆ ಬಂದಿದ್ದ ಐವರನ್ನು ಸಂಪಂಗಿರಾಮ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಡಿ.19) : ಪ್ರಾಚೀನ ಕಾಲದ ಬುದ್ಧನ ವಿಗ್ರಹವನ್ನು ವಿದೇಶಕ್ಕೆ ರಫ್ತು ಮಾಡುವ ಉದ್ದೇಶದಿಂದ ಮಾರಾಟಕ್ಕೆ ಬಂದಿದ್ದ ಐವರನ್ನು ಸಂಪಂಗಿರಾಮ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹೈದರಾಬಾದ್‌ನ ಕೋಂಪಲ್ಲಿ ನಿವಾಸಿ ಪಂಚಮರ್ತಿ ರಘುರಾಮ ಚೌದರಿ(45), ಹೊರಮಾವಿನ ಉದಯಕುಮಾರ್‌(37), ವಿವೇಕ ನಗರದ ಫ್ರೆಡ್ಡಿ ಡಿಸೋಜಾ(44), ಹೆಣ್ಣೂರು ಬಂಡೆಯ ಶರಣ್‌ ನಾಯರ್‌(41) ಹಾಗೂ ಕೊತ್ತನೂರಿನ ಎಂ.ಕೆ.ಪ್ರಸನ್ನ ಬಂಧಿತರು. ಆರೋಪಿಗಳಿಂದ 38 ಸೆ.ಮೀ. ಉದ್ದದ ಬುದ್ಧನ ವಿಗ್ರಹ, ಬ್ರೀಫ್‌ಕೇಸ್‌, ಐದು ಮೊಬೈಲ್‌ ಫೋನ್‌ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿಕನ್ ರೋಲ್ ಕೊಟ್ಟಿಲ್ಲವೆಂದು ಹೋಟೆಲ್ ಸಿಬ್ಬಂದಿ ರೂಮಿಗೆ ಬೆಂಕಿಯಿಟ್ಟ ಕಿಡಿಗೇಡಿಗಳು

ಇತ್ತೀಚೆಗೆ ನಗರದ ರಾಜರಾಮಮೋಹನ ರಾಯ್‌ ರಸ್ತೆಯ ವುಡ್‌ಲ್ಯಾಂಡ್‌್ಸ ಹೋಟೆಲ್‌ ಬಳಿ ಕೆಲವರು ಸುಮಾರು 200 ವರ್ಷ ಬುದ್ಧನ ವಿಗ್ರಹವನ್ನು ಹೊರದೇಶಕ್ಕೆ ರಫ್ತು ಮಾಡುವ ಉದ್ದೇಶದಿಂದ ವಿಗ್ರಹ ಮಾರಾಟಕ್ಕೆ ಬಂದಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಹೈದರಾಬಾದ್‌ ಮೂಲದ ಆರೋಪಿ ಪಂಚಮರ್ತಿ ರಘುರಾಮ ಚೌದರಿಗೆ ಶ್ರೀಕಾಂತ ಎಂಬಾತ ಈ ವಿಗ್ರಹವನ್ನು .30 ಲಕ್ಷಕ್ಕೆ ಮಾರಾಟ ಮಾಡಿದ್ದ. ಈ ವಿಗ್ರಹವನ್ನು ಹೊರ ದೇಶಕ್ಕೆ ರಫ್ತು ಮಾಡಿ ಮಾರಾಟ ಮಾಡಿದರೆ ಕೋಟ್ಯಂತರ ರೂಪಾಯಿ ಸಿಗಲಿದೆ. ಈ ಹಣವನ್ನು ಎಲ್ಲರೂ ಹಂಚಿಕೊಳ್ಳಬಹುದು ಎಂದು ಆರೋಪಿಗಳು ಈ ವಿಗ್ರಹ ಮಾರಾಟಕ್ಕೆ ಯತ್ನಿಸಿದ್ದರು.

ಈ ವಿಗ್ರಹವನ್ನು ಹೈದರಾಬಾದ್‌ನಲ್ಲಿ ಕಳ್ಳತನ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಆರೋಪಿ ಪಂಚಮರ್ತಿ ರಘುಗೆ ಈ ವಿಗ್ರಹ ಮಾರಾಟ ಮಾಡಿದ್ದ ಹೈದರಾಬಾದ್‌ ಮೂಲದ ಶ್ರೀಕಾಂತ್‌ ಬಂಧನದ ಬಳಿಕ ಈ ವಿಗ್ರಹದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಸಂಪಂಗಿರಾಮನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ನಿಷೇಧಿತ ಇ-ಸಿಗರೇಟ್ ಮಾರಾಟ; ನಾಲ್ವರ ಬಂಧನ

ಬೆಂಗಳೂರು :ಅಂಗಡಿಯೊಂದರ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಎಲೆಕ್ಟ್ರಿಕಲ್‌ ಸಿಗರೇಟ್‌ (ಇ ಸಿಗರೇಟ್‌) ಮಾಡುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ರಜಿಕ್‌ ಹಾಗೂ ಮೊಹಮ್ಮದ್‌ ಇರ್ಫಾನ್‌ ಬಂಧಿತರಾಗಿದ್ದು, ಈ ದಾಳಿ ವೇಳೆ ಅಂಗಡಿ ಮಾಲೀಕ ನಾಸೀರ್‌ ತಪ್ಪಿಸಿಕೊಂಡಿದ್ದಾನೆ. ಆರೋಪಿಗಳಿಂದ 61 ವಿವಿಧ ಬಗೆಯ 207 ಇ ಸಿಗರೇಟ್‌ಗಳು ಹಾಗೂ 9 ಸಾವಿರ ರು. ನಗದು ಸೇರಿ 8 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಕಮ್ಮನಹಳ್ಳಿಯಲ್ಲಿ ‘ಸ್ಮೋಕ್‌ ಶಾಪ್‌’ ಹೆಸರಿನಲ್ಲಿ ಆರೋಪಿಗಳು ಅಂಗಡಿ ನಡೆಸುತ್ತಿದ್ದರು. ಅಲ್ಲಿ ಅಕ್ರಮವಾಗಿ ಇ ಸಿಗರೇಟ್‌ ಮಾರುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ಇನ್ಸ್‌ಪೆಕ್ಟರ್‌ ದೀಪಕ್‌ ನೇತೃತ್ವದ ತಂಡ ದಾಳಿ ನಡೆಸಿದೆ.

2019ರಲ್ಲಿ ದೇಶದಲ್ಲಿ ಇ ಸಿಗರೇಟ್‌ ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಸುಲಭವಾಗಿ ಹಣ ಸಂಪಾದನೆ ಸಲುವಾಗಿ ಕೆಲವರು ಸಿಗರೇಟ್‌ ಮಾರಾಟದ ನೆಪದಲ್ಲಿ ಇ ಸಿಗರೇಟ್‌ ಮಾರಾಟ ಮಾಡುತ್ತಿ ದ್ದಾರೆ. ಸಾಮಾನ್ಯ ಸಿಗರೇಟ್‌ನಂತೆ ಕಾಣುವ ಎಲೆಕ್ಟ್ರಿಕಲ್‌ ಸಿಗರೇಟ್‌ಗಳ ಬ್ಯಾಟರಿ ಚಾಲಿತವಾಗಿರುತ್ತವೆ. ಒಂದು ಬಾರಿ ಬ್ಯಾಟರಿ ಚಾಜ್‌ರ್‍ ಮಾಡಿದರೆ 400 ರಿಂದ 500 ಬಾರಿ ದಮ್ಮು ಎಳೆಯಬಹುದು. ಇದರಲ್ಲಿ ನಿಕೋಟಿನ್‌ ಅಂಶವು ಹೆಚ್ಚಿದ್ದು, ಆರೋಗ್ಯಕ್ಕೆ ಹಾನಿಕಾರವಾಗಿರುತ್ತದೆ ಎಂದು ಪೊಲೀಸರು ವಿವರಿಸಿದ್ದಾರೆ.

ಕುಡಿದ ಮತ್ತಿನಲ್ಲಿ ನಿದ್ರೆಯಲ್ಲಿದ್ದ ಪತ್ನಿ, ನಾಲ್ವರು ಮಕ್ಕಳ ಕತ್ತು ಸೀಳಿ ಕೊಂದ ತಂದೆ!

ಶಾಲಾ-ಕಾಲೇಜುಗಳ ವ್ಯಾಪ್ತಿಯಲ್ಲಿ ಸ್ಮೋಕಿಂಗ್‌ ಜೋನ್‌ ಸೋಗಿನಲ್ಲಿ ಇ ಸಿಗರೇಟ್‌ ಹೆಚ್ಚಿನದ್ದಾಗಿ ಕಿಡಿಗೇಡಿಗಳು ಮಾರಾಟ ಮಾಡುತ್ತಾರೆ. ಅಂತೆಯೇ ಮಂಗಳೂರಿನ ಈ ಮೂವರು ಆರೋಪಿಗಳು, ಕೆಲ ದಿನಗಳಿಂದ ಕಮ್ಮನಹಳ್ಳಿಯಲ್ಲಿ ‘ಸ್ಮೋಕ್‌ ಶಾಪ್‌’ ಹೆಸರಿನ ಧೂಮಪಾನ ವಸ್ತುಗಳ ಮಾರಾಟ ಮಾಡುತ್ತಿದ್ದರು. ವಿದೇಶಿ ಬ್ರ್ಯಾಂಡ್‌ ಸೇರಿದಂತೆ ಹಲವು ವಿಧದ ಸಿಗರೇಟ್‌ಗಳನ್ನು ಅವರು ಮಾರುತ್ತಿದ್ದರು. ಅದರಲ್ಲಿ ಕಾನೂನುಬಾಹಿರವಾಗಿ ಇ ಸಿಗರೇಟ್‌ಗಳನ್ನು ಕೂಡಾ ಮಾರುತ್ತಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

click me!