ಹಫ್ತಾ ವಸೂಲಿಗೆ ಅಂಗಡಿ ಮಾಲಿಕನ ಮೇಲೆ ಮಚ್ಚು ಬೀಸಿದ್ದವ ಸೆರೆ

Published : Dec 19, 2022, 07:29 AM IST
ಹಫ್ತಾ ವಸೂಲಿಗೆ ಅಂಗಡಿ ಮಾಲಿಕನ ಮೇಲೆ ಮಚ್ಚು ಬೀಸಿದ್ದವ ಸೆರೆ

ಸಾರಾಂಶ

ಹಣ ಕೊಡುವಂತೆ ಮೀನು ಅಂಗಡಿ ಮಾಲಿಕನ ಮೇಲೆ ಮಾರಕಾಸ್ತ್ರ ಬೀಸಿ ಗುಂಡಾಗಿರಿ ಮಾಡಿದ್ದ ಆರೋಪಿಯನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ. ಬಾಣಸವಾಡಿಯ ಸುದೇಶ್‌(28) ಬಂಧಿತ. ಆರೋಪಿಯು ಶನಿವಾರ ಸಂಜೆ ಬಾಣಸವಾಡಿ ಜೈಭಾರತ ನಗರದಲ್ಲಿ ಇರುವ ಮೀನು ಅಂಗಡಿ ಮಾಲಿಕ ಮನೋಜ್‌ ಮೇಲೆ ಮಚ್ಚು ಬೀಸಿ ಜೀವ ಬೆದರಿಕೆ ಹಾಕಿದ್ದ.

ಬೆಂಗಳೂರು (ಡಿ.19) : ಹಣ ಕೊಡುವಂತೆ ಮೀನು ಅಂಗಡಿ ಮಾಲಿಕನ ಮೇಲೆ ಮಾರಕಾಸ್ತ್ರ ಬೀಸಿ ಗುಂಡಾಗಿರಿ ಮಾಡಿದ್ದ ಆರೋಪಿಯನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ. ಬಾಣಸವಾಡಿಯ ಸುದೇಶ್‌(28) ಬಂಧಿತ. ಆರೋಪಿಯು ಶನಿವಾರ ಸಂಜೆ ಬಾಣಸವಾಡಿ ಜೈಭಾರತ ನಗರದಲ್ಲಿ ಇರುವ ಮೀನು ಅಂಗಡಿ ಮಾಲಿಕ ಮನೋಜ್‌ ಮೇಲೆ ಮಚ್ಚು ಬೀಸಿ ಜೀವ ಬೆದರಿಕೆ ಹಾಕಿದ್ದ.

Bengaluru: ರೌಡಿ ಮೇಲೆ ಗುಂಡಿನ ದಾಳಿ: ಮೂವರ ಬಂಧನ

ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ಅಂಗಡಿ ಎದುರು ಮಚ್ಚು ಬೀಸುವ ಸಿಸಿಟಿವಿ ದೃಶ್ಯಾವಳಿ ವೈರಲ್‌ ಆಗಿತ್ತು. ಈ ವಿಡಿಯೋ ಬಗ್ಗೆ ಪರಿಶೀಲನೆ ಮಾಡಿದಾಗ, ಬಾಣಸವಾಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿರುವುದು ಗೊತ್ತಾಯಿತು. ಈ ವೇಳೆ ಬಾಣಸವಾಡಿ ಪೊಲೀಸರು, ಘಟನೆ ನಡೆದಿದ್ದ ಮೀನು ಅಂಗಡಿ ಬಳಿ ತೆರಳಿ ಮಾಲಿಕ ಮನೋಜ್‌ನನ್ನು ಸಂಪರ್ಕಿಸಿ ವಿಚಾರಣೆ ಮಾಡಿದ್ದರು.

ಈ ವೇಳೆ ಮನೋಜ್‌ ‘ವ್ಯಕ್ತಿಯೊಬ್ಬ ಮಧ್ಯಾಹ್ನ ಅಂಗಡಿ ಬಳಿ ಬಂದು ಹಣಕ್ಕೆ ಪೀಡಿಸುತ್ತಿದ್ದ. ಹಣ ಕೊಡುವುದಿಲ್ಲ ಎಂದೆ. ಇದಕ್ಕೆ ಆತ ಹೊರಗಡೆಯಿಂದ ಬಂದು ಹಾರಾಡುತ್ತೀಯಾ ಮಗನೇ ಎಂದು ಆವಾಜ್‌ ಹಾಕಿದ. ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿ ಹೋಗಿದ್ದ. ಸಂಜೆ ಮತ್ತೆ ಅಂಗಡಿ ಬಳಿ ಬಂದು ಹಣ ಕೇಳಿದ. ಆಗಲೂ ಹಣ ಕೊಡುವುದಿಲ್ಲ ಎಂದೆ. ಈ ವೇಳೆ ಆರೋಪಿಯು ನನ್ನ ಮೇಲೆ ಮಚ್ಚು ಬೀಸಿದ. ಅಲ್ಲದೆ, ಅಂಗಡಿ ಎದುರು ಇರಿಸಿದ್ದ ವಸ್ತುಗಳನ್ನು ಒಡೆದು ದಾಂಧಲೆ ನಡೆಸಿ, ಈ ವಿಚಾರವನ್ನು ಪೊಲೀಸರಿಗೆ ಹೇಳಿದರೆ ನೋಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ’ ಎಂದು ಮಾಹಿತಿ ನೀಡಿದ್ದರು. ಈ ಸಂಬಂಧ ಮನೋಜ್‌ನಿಂದ ದೂರು ಪಡೆದು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿ ಸುದೇಶ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. Bengaluru: ಟೀ ಅಂಗಡಿ ಹುಡುಗರ ಮೇಲಿನ ಹಲ್ಲೆ ಪ್ರಕರಣಕ್ಕೆ ರಿವೇಂಜ್‌ ಟ್ವಿಸ್ಟ್‌

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ
ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?