
ಮುಳಬಾಗಿಲು(ಮೇ.06): ನಗರದ ರಿಯಲ್ ಎಸ್ಟೇಟ್ ವ್ಯಾಪಾರಿಯೊಬ್ಬರು ನೆರೆಯ ಆಂಧ್ರದ ವಿ.ಕೋಟಿಯಲ್ಲಿ ನಕಲಿ ಡಿವೈಎಸ್ಪಿ ವೇಷದಲ್ಲಿರುವಾಗ ಅಲ್ಲಿನ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ಶುಕ್ರವಾರ ನಡೆದಿದೆ. ಆರೋಪಿಯನ್ನು ಮುಳಬಾಗಿಲು ನಗರದ ವಾಸಿ ಶಿವಣ್ಣ ಎಂದು ಗುರುತಿಸಲಾಗಿದೆ.
ಈತ ರಿಯಲ್ ಎಸ್ಟೇಟ್ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದನು ಎನ್ನಲಾಗಿದೆ. ಸುಲಭವಾಗಿ ಹಣ ಮಾಡಲು ಸಂಚು ರೂಪಿಸಿದ ಈತ, ಮುಳಬಾಗಿಲಿನ ಸ್ವಾಮೀಜಿಯೊಬ್ಬರ ಬಳಿ 2000 ಮೌಲ್ಯದ ಲಕ್ಷಾಂತರು ರು. ಕಪ್ಪುಹಣವಿದೆ. 500 ಮುಖಬೆಲೆಯ ಒಂದು ಲಕ್ಷ ರು.ಗಳನ್ನು ನೀಡಿದರೆ 2000 ಸಾವಿರ ಮುಖಬೆಲೆ 1,20000 ನೀಡುವುದಾಗಿ ಶ್ರೀನಿವಾಸಪುರದ ರಿಯಾಜ್ ಖಾನ್ ಎಂಬುವರನ್ನು ನಂಬಿಸಿದ್ದಾನೆ.
ಕೋಲಾರ: ಬಂಗಾರಪೇಟೆಯಲ್ಲಿ 2.50 ಕೋಟಿ ಹಣ ಪತ್ತೆ..!
ಇದನ್ನು ಖಾನ್ ಏಪ್ರಿಲ್ 28ರಂದು ಆಂಧ್ರಪ್ರದೇಶದ ಕುಪ್ಪಂ ಹೆದ್ದಾರಿಯ ಅಟ್ರಪಲ್ಲಿ ಕ್ರಾಸ್ ಬಳಿ ಐದು ಲಕ್ಷ ರು. ಹಣದೊಂದಿಗೆ ಬಂದಿದ್ದಾರೆ. ಆಗ ಸ್ಥಳಕ್ಕೆ ಡಿವೈಎಸ್ಪಿ ವೇಷದಲ್ಲಿ ತನ್ನ ಸಹಚರರೊಂದಿಗೆ ಆಗಮಿಸಿದ ಶಿವಣ್ಣ ಹಣವನ್ನು ಕಿತ್ತುಕೊಂಡು ಕಾರನಲ್ಲಿ ಪರಾರಿಯಾಗಿದ್ದಾರೆ. ಆದರೆ ಪಟ್ರಹಳ್ಳಿ ಬಳಿ ಚೆಕಿಂಗ್ ಪೋಸ್ಟ್‌ನಲ್ಲಿ ವಾಹನ ತಪಾಸಣೆ ಸಂದರ್ಭದಲ್ಲಿ ಹಣದ ಸಮೇತ ಶಿವಣ್ಮ ಹಾಗೂ ಆತನ ಸಹಚರರಾದ
ಡೇನಿಯಲ್. ಜಮೀರ್‌ಬಾಷ, ಇಮ್ರಾನ್. ವೆಂಕಟೇಶಯ್ಯ ಶೆಟ್ಟಿ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ವಿ.ಕೋಟ ಡಿವೈಎಸ್ಪಿ ಸುಧಾಕರ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ