
ಜಮಖಂಡಿ(ಮೇ.05): ಮಗಳ ಮದುವೆಗೆಂದು ಬ್ಯಾಂಕ್‌ನಿಂದ ಹಣ ತೆಗೆದುಕೊಂಡು ಮನೆಗೆ ಹೋಗುವ ವೇಳೆ ಕಳ್ಳರು 1 ಲಕ್ಷ ಹಣವನ್ನು ದರೋಡೆ ಮಾಡಿದ ಘಟನೆ ಗುರುವಾರ ಇಲ್ಲಿನ ಉಮಾರಾಮೇಶ್ವರ ಆವರಣದಲ್ಲಿ ನಡೆದಿದೆ.
ಐಸಿಐಸಿ ಬ್ಯಾಂಕ್ ನಿವೃತ್ತ ಅಧಿಕಾರಿ, ಮಹಾಂತೇಶ ನಗರದ ನಿವಾಸಿ ಆರ್.ಜಿ.ಕುಲಕರ್ಣಿ ಎಂಬುವರು ತಮ್ಮ ಮಗಳ ಮದುವೆ ನಿಶ್ಚಯಿಸಿದ್ದರು. ಮದುವೆ ಸಿದ್ಧತೆಗೆ ಬೇಕಾಗುವ ಸಾಮಗ್ರಿ ಖರೀದಿಗೆಂದು ಎಸ್‌ಬಿಐ ಬ್ಯಾಂಕಿನಿಂದ ಒಂದುವರೆ ಲಕ್ಷ ರುಪಾಯಿ ಹಣವನು ಡ್ರಾ ಮಾಡಿಕೊಂಡು ಆ ಹಣವನ್ನು ತಮ್ಮ ಟಿವ್ಹಿಎಸ್ ಸ್ಕೂಟಿಯಲ್ಲಿಟ್ಟು, ಬೇರೊಂದು ಕಾರ್ಯಕ್ಕೆಂದು ಪಕ್ಕದ ಅಂಗಡಿಗೆ ತೆರೆಳಿದ್ದಾರೆ. ಇದನ್ನೇ ಗಮನಿಸಿದ ಕಳ್ಳರು ಸ್ಕೂಟಿ ಸೀಟ್ ಮುರಿದು ಅದರಲ್ಲಿದ್ದ ಹಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
ನೀನೇ ಬ್ಯೂಟಿ, ಮತ್ಯಾಕೆ ಬ್ಯೂಟಿ ಪಾರ್ಲರ್ ಎಂದಿದ್ದೇ ತಪ್ಪಾಯ್ತು, ಫ್ಯಾನ್‌ಗೆ ನೇಣು ಹಾಕಿಕೊಂಡ ಪತ್ನಿ!
ಜಮಖಂಡಿ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಜಾಲಬೀಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ