Tumakuru: ಅಂಗನವಾಡಿ ಕಾರ್ಯಕರ್ತೆ ಬರ್ಬರ ಕೊಲೆ, ಅನೈತಿಕ ಸಂಬಂಧ ಶಂಕೆ?

By Suvarna NewsFirst Published Nov 14, 2021, 2:36 PM IST
Highlights

*   ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿ ನಡೆದ ಕೊಲೆ
*   ಕೃತ್ಯ ನೋಡಿದ ಮಹಿಳೆಯರಿಗೆ ಬೆದರಿಕೆ ಹಾಕಿ ಪರಾರಿಯಾದ ಆರೋಪಿ
*   ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು‌ 
 

ತುಮಕೂರು(ನ.14):  ಅಂಗನವಾಡಿ ಕಾರ್ಯಕರ್ತೆಯನ್ನ(Anganwadi Activist) ಆಕೆಯ ಸಂಬಂಧಿಯೇ ಕತ್ತು ಕೊಯ್ದು ಬರ್ಬರವಾಗಿ ಕೊಲೆ(Murder) ಮಾಡಿದ ಘಟನೆ ತುಮಕೂರು(Tumakuru) ಜಿಲ್ಲೆಯ ತಿಪಟೂರು(Tiptur) ತಾಲೂಕಿನ ಹಾಲ್ಕುರಿಕೆ ಗ್ರಾಮದಲ್ಲಿ ಇಂದು(ಭಾನುವಾರ) ನಡೆದಿದೆ. 

ಭಾರತಿ(30) ಕೊಲೆಯಾದ ಅಂಗನವಾಡಿ ಕಾರ್ಯಕರ್ತೆ ಎಂದು ಗುರುತಿಸಲಾಗಿದೆ. ಕೊಲೆಯಾದ ಭಾರತಿ ಸಂಬಂಧಿ ದಿವಾಕರ್ (25) ಎಂಬುವನೇ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಹಾಲ್ಕುರಿಕೆ ಗ್ರಾಮದ ಅಂಗನವಾಡಿ ಹಿಂಭಾಗದಲ್ಲಿ ದಿವಾಕರ್ ಭಾರತಿಯನ್ನ ಕೊಲೆ ಬರ್ಬರವಾಗಿ ಕೊಲೆ ಮಾಡಿದ್ದಾನೆ. 

ಪತ್ನಿಯಿಂದ ಪತಿ ಕೊಲೆ ಕೇಸ್‌ಗೆ ಟ್ವಿಸ್ಟ್‌: TikTok ಜೋಡಿಹಕ್ಕಿಗಳು ಹತ್ಯೆ ಮಾಡಿ ಲಾಕ್‌..!

ಎಲ್ಲರ ಮುಂದೆಯೇ ಆರೋಪಿ(Accused) ದಿವಾಕರ್ ಭಾರತಿ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.  ಕೃತ್ಯ ನೋಡಿದ ಮಹಿಳೆಯರಿಗೆ ಬೆದರಿಕೆ(Threat) ಹಾಕಿ ದಿವಾಕರ್ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಕೊಲೆಯಾದ ಭಾರತಿ ಹಾಗೂ ದಿವಾಕ್‌ ನಡುವೆ ಅಕ್ರಮ ಸಂಬಂಧ(Illicit Relationship)ಇತ್ತು ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಹೊನ್ನವಳ್ಳಿ ಪೊಲೀಸರು‌(Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭಾರತಿ ಕೊಲೆಗೆ ನಿಜವಾದ ಕಾರಣ ಪೊಲೀಸರ ತನಿಖೆಯಿಂದಷ್ಟೇ(Investigation) ತಿಳಿದು ಬರಬೇಕಿದೆ. 

ಖಾಲಿಯಾ ಕೊಲೆ ಕೇಸ್‌: ಬಂಧಿತ ಜಿಯಾಗೆ ಕಸ್ಟಡಿ ಕೇಳಲಿರುವ ಮಂಗಳೂರು ಪೊಲೀಸ್‌

ಮಂಗಳೂರು(Mangaluru): ಕೇರಳ(Kerala) ಮತ್ತು ಕರ್ನಾಟಕದಲ್ಲಿ(Karnataka) ದುಷ್ಕೃತ್ಯದಲ್ಲಿ ಭಾಗಿಯಾದ ರೌಡಿಶೀಟರ್‌(Rowdysheeter) ಖಾಲಿಯಾ ರಫೀಕ್‌ನನ್ನು(Khalia Rafeeq) ಕೊಲೆ ಮಾಡಿದ ಆರೋಪಿ ಯೂಸುಫ್‌ ಜಿಯಾ ಅಲಿಯಾಸ್‌ ಜಿಯಾನನ್ನು ಕೇರಳ ಎಟಿಎಸ್‌(Kerala ATS)(Anti Terrorist Squad) ಮುಂಬಯಿಯಲ್ಲಿ(Mumabi) ಗುರುವಾರ ರಾತ್ರಿ ಬಂಧಿಸಿದ್ದು(Arrest), ಈತನನ್ನು ಮಂಗಳೂರು ನಗರ ಪೊಲೀಸರು ಕಸ್ಟಡಿಗೆ(Police Custody) ಕೇಳಲಿದ್ದಾರೆ.

ಖಾಲಿಯಾ ಕೊಲೆ ಪ್ರಕರಣದ ಆರೋಪಿ ಜಿಯಾನನ್ನು ಕೇರಳ ಪೊಲೀಸರು ಬಂಧಿಸಿರುವ ಬಗ್ಗೆ ಮಾಹಿತಿ ಲಭಿಸಿದೆ. ಜಿಯಾ ವಿರುದ್ಧ ಕೇರಳ ಮತ್ತು ಕರ್ನಾಟಕದಲ್ಲಿ ಲುಕ್‌ಔಟ್‌ ನೋಟೀಸು ಹೊರಡಿಸಲಾಗಿತ್ತು. ಖಾಲಿಯಾ ಕೊಲೆ ಪ್ರಕರಣದ ಹೆಚ್ಚಿನ ವಿಚಾರಣೆಗೆ ಜಿಯಾನನ್ನು ತಮ್ಮ ವಶಕ್ಕೆ ನೀಡುವಂತೆ ಶೀಘ್ರವೇ ಕೇರಳ ಕೋರ್ಟ್‌ಗೆ(Court)ಮನವಿ ಮಾಡಲಾಗುವುದು ಎಂದು ಪೊಲೀಸ್‌ ಕಮಿಷನರ್‌ ಶಶಿಕುಮಾರ್‌ ತಿಳಿಸಿದ್ದಾರೆ.

Crime News; ಬ್ರೇಕ್ ಅಪ್ ಮಾಡಿಕೊಂಡು ಬೇರೆ ಮದುವೆಯಾದವಳ ಹತ್ಯೆ!

2017 ಫೆ.14 ರಂದು ಕಾಸರಗೋಡು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಖಾಲಿಯಾ ರಫೀಕ್‌ನನ್ನು ಕೋಟೆಕಾರು ಪೆಟ್ರೋಲ್‌ ಬಂಕ್‌ ಬಳಿ ಗುಂಡಿಕ್ಕಿ(Firing) ಬಳಿಕ ತಲವಾರು ದಾಳಿ ನಡೆಸಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಉಪ್ಪಳ ಕೊಂಡೆಕೂರು ನಿವಾಸಿ ನೂರ್‌ ಆಲಿ, ಪನಂತ್ತೂರು ರಶೀದ್‌, ಬಂಟ್ವಾಳ ಸಂಗಬೆಟ್ಟು ನಿವಾಸಿ ಹುಸೈನ್‌ ಅಲಿಯಾಸ್‌ನನ್ನು ಈ ಹಿಂದೆಯೇ ಮಂಗಳೂರು ಪೊಲೀಸರು(Mangaluru Police) ಬಂಧಿಸಿದ್ದರು. ಪ್ರಮುಖ ಆರೋಪಿ ಜಿಯಾ ವಿದೇಶದಲ್ಲಿ(Foreign) ತಲೆ ಮರೆಸಿಕೊಂಡಿದ್ದ.

ಭೂಗತ ಪಾತಕಿ ರವಿ ಪೂಜಾರಿಯ ಸಹಚರನಾಗಿದ್ದ ಜಿಯಾ, ಕೇರಳ ನಟಿ ಲೀನಾ ಮರಿಯಾ ಪೌಲ್‌ ಬಳಿ ಹಫ್ತಾ ವಸೂಲಿಗೆ 2018ರ ಡಿ.15ರಂದು ಬ್ಯೂಟಿ ಪಾರ್ಲರ್‌ಗೆ ಗುಂಡು ಹಾರಿಸಿದ್ದ. ಈ ಘಟನೆಯ ಬಳಿಕ ಜಿಯಾ ವಿದೇಶಕ್ಕೆ ಪರಾರಿಯಾಗಿದ್ದು, ಕೆಲವು ಸಮಯದ ಬಳಿಕ ನಕಲಿ ಪಾಸ್‌ಪೋರ್ಟ್‌(Duplicate Passport) ಬಳಸಿ ಕೇರಳಕ್ಕೆ ಆಗಮಿಸಿದ್ದ. ಗುರುವಾರ ಮತ್ತೆ ವಿದೇಶಕ್ಕೆ ಪರಾರಿಗೆ ಯತ್ನಿಸಿದ್ದು, ಈ ಸಂದರ್ಭ ಇಮಿಗ್ರೇಷನ್‌ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ನಕಲಿ ಪಾಸ್‌ಪೋರ್ಟ್‌ ಎಂದು ದೃಢಪಟ್ಟಿದೆ. ಕೂಡಲೇ ಈತನ ಬಗ್ಗೆ ಶೋಧ ನಡೆಸಿದಾಗ ಕರ್ನಾಟಕ ಮತ್ತು ಕೇರಳ ಪೊಲೀಸರು ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಿರುವುದು ತಿಳಿದು ಬಂದಿದೆ.
ಶುಕ್ರವಾರ ಕೊಚ್ಚಿಯಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಕೇರಳ ಪೊಲೀಸರು ಕಸ್ಟಡಿಗೆ ಕೇಳಲಿದ್ದಾರೆ ಎಂದು ಮೂಲಗಳು ತಿಳಿಸಿದೆ.
 

click me!