ಪತ್ನಿಯಿಂದ ಪತಿ ಕೊಲೆ ಕೇಸ್‌ಗೆ ಟ್ವಿಸ್ಟ್: TikTok ಜೋಡಿಹಕ್ಕಿಗಳು ಹತ್ಯೆ ಮಾಡಿ ಲಾಕ್..!
* ಗಂಡನ ನೆತ್ತರು ಹರಿಸಿ ಪೊಲೀಸ್ ಠಾಣೆಗೆ ಬಂದಿದ್ದ ನೇತ್ರಾವತಿ
* ಪೊಲೀಸ್ ತನಿಖೆಯ ವೇಳೆ ಕೊಲೆಯ ರಹಸ್ಯ ಬಟಾಬಯಲು
* ಪ್ರಣಯಕ್ಕೆ ಅಡ್ಡಿಯಾದ ಗಂಡನ ಹತ್ಯೆಗೆ ಸ್ಕೆಚ್
ಬೆಂಗಳೂರು(ನ.11): ಮಾದನಾಯಕನಹಳ್ಳಿ ಪತ್ನಿಯಿಂದ ಪತಿ ಕೊಲೆ ಕೇಸ್‌ಗೆ ಬಿಗ್ ಟ್ವಿಸ್ಟ್‌ವೊಂದು ಸಿಕ್ಕಿದೆ. ಹೌದು, ಗಂಡನ ನೆತ್ತರು ಹರಿಸಿ ಪತ್ನಿ ನೇತ್ರಾವತಿ ಪೊಲೀಸ್ ಠಾಣೆಗೆ ಬಂದಿದ್ದಳು. ಬಾಯ್‌ಫ್ರೆಂಡ್ ಭರತ್ ಜೊತೆ ಸೇರಿ ನೇತ್ರಾವತಿ ತನ್ನ ಗಂಡನನ್ನೇ ಕೊಲೆಗೈದಿದ್ದಳು ಎಂದು ಪೊಲೀಸ್ ತನಿಖೆಯ ವೇಳೆ ಕೊಲೆಯ ರಹಸ್ಯ ಬಟಾಬಯಲಾಗಿದೆ. ಈ ಮೂಲಕ ಟಿಕ್‌ಟಾಕ್ ಜೋಡಿಗಳು ಕೊಲೆ ಮಾಡಿ ಈಗ ಲಾಕ್ ಆಗಿದ್ದಾರೆ.
News Hour; ಲೆಕ್ಕಕ್ಕೆ ಸಿಗುತ್ತಿಲ್ಲ ಬಿಟ್ ಕಾಯಿನ್, ಆಟೋ ಹತ್ತಿ ಹೋದ ಹ್ಯಾಕರ್!
ನೇತ್ರಾ -ಭರತ್ ಪರಿಚಯವಾಗುತ್ತೆ ನಂತರ ಪ್ರೀತಿಯಾಗುತ್ತೆ, ಪ್ರೀತಿ ಪ್ರಣಯಕ್ಕೆ ಅಡ್ಡಿಯಾದ ಗಂಡನ ಹತ್ಯೆಗೆ ಇಬ್ಬರು ಸೇರಿ ಸ್ಕೆಚ್ ಹಾಕ್ತಾರೆ. ಮೊದಲು ಸುಪಾರಿ ಆನಂತರ ನಿದ್ದೆ ಮಾತ್ರೆ ಹಾಕಿ ಕೊಲೆ ಮಾಡಲು ಪ್ಲಾನ್ ಹಾಕ್ತಾರೆ. ಇದ್ಯಾವುದು ವರ್ಕೌಟ್ ಆಗಗಿದ್ದಾಗ ತಾವೇ ಕೊಲೆ ಮಾಡಲು ಪ್ಲಾನ್ ಮಾಡುತ್ತಾರೆ. ಸ್ವಾಮಿರಾಜ್ ಮಲಗಿದ್ದಾಗ ಸ್ಪ್ಯಾನರ್‌ನಿಂದ ಹೊಡೆದು ಕೊಲೆ ಮಾಡುತ್ತಾರೆ ಈ ಜೋಡಿ.