* 103 ಬಂಧಿತರಲ್ಲಿ 89 ಮಂದಿ ಕಲಬುರಗಿ ಜೈಲಿಗೆ ಶಿಫ್ಟ್
* ನಮ್ ಮಕ್ಕಳು ಅಮಾಯಕರು
* ಈಗಾಗಲೇ 12 ಪ್ರಕರಣಗಳನ್ನು ಆರೋಪಿಗಳ ವಿರುದ್ಧ ದಾಖಲು
ಹುಬ್ಬಳ್ಳಿ(ಏ.20): ಹಳೇ ಹುಬ್ಬಳ್ಳಿಯಲ್ಲಿ(Hubballi) ಶನಿವಾರ ತಡರಾತ್ರಿ ನಡೆದಿದ್ದ ಗಲಭೆಯ(Riot) ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು(Police), ಮಂಗಳವಾರ ಮತ್ತೆ 10 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಈ ನಡುವೆ ಉದ್ವಿಗ್ನಗೊಂಡಿದ್ದ ಹಳೇಹುಬ್ಬಳ್ಳಿ ಸಹಜಸ್ಥಿತಿಗೆ ಮರಳುತ್ತಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಈವರೆಗೂ 103 ಜನರನ್ನು ಬಂಧಿಸಿರುವ ಪೊಲೀಸರು, ಎಲ್ಲರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿ ಜೈಲಿಗೆ(Jail) ಕಳುಹಿಸಿದ್ದಾರೆ. ಮಂಗಳವಾರ ಕೂಡ 10ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದಿದ್ದಾರೆ. ಈ ನಡುವೆ ನ್ಯಾಯಾಂಗ ವಶಕ್ಕೆ ಒಪ್ಪಿಸಿರುವ 89 ಆರೋಪಿಗಳನ್ನು(Accused) ಧಾರವಾಡ ಕೇಂದ್ರ ಕಾರಾಗೃಹದಿಂದ ಕಲಬುರಗಿ ಜೈಲಿಗೆ ಪೊಲೀಸರು ಶಿಫ್ಟ್ ಮಾಡಿದ್ದಾರೆ.
undefined
Hubli Violence ತಪ್ಪಿತಸ್ಥನ ಶಿರಚ್ಛೇದಕ್ಕೆ ಹುಬ್ಬಳ್ಳಿ ಉದ್ರಿಕ್ತರ ಘೋಷಣೆ ವೈರಲ್!
ಈಗಾಗಲೇ 12 ಪ್ರಕರಣಗಳನ್ನು ಆರೋಪಿಗಳ ವಿರುದ್ಧ ದಾಖಲಿಸಲಾಗಿದೆ. ದೇವಸ್ಥಾನ, ಮನೆ, ಆಸ್ಪತ್ರೆ ಹಾಗೂ ಪೋಸ್ಟ್ ಆಫೀಸ್ ಮೇಲೆ ಕಲ್ಲು ತೂರಾಟ ನಡೆಸಿರುವ ಬಗ್ಗೆ ಹಲವು ಪ್ರಕರಣಗಳು ದಾಖಲಾಗಿವೆ. ಸರ್ಕಾರಿ ಹಾಗೂ ಖಾಸಗಿ ಆಸ್ತಿಗಳ ಹಾನಿಯ ಬಗ್ಗೆಯೂ ಕೇಸ್ ದಾಖಲಾಗಿವೆ.
ನಮ್ ಮಕ್ಕಳು ಅಮಾಯಕರು:
ಈ ನಡುವೆ ಸಂಶಯ ಬಂದು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆ ತರುತ್ತಿದ್ದಂತೆ ಪಾಲಕರು ಆಗಮಿಸಿ, ನಮ್ಮ ಮಕ್ಕಳು ಅಮಾಯಕರು. ಆತ ಕಾಲೇಜ್‌ಗೆ ಹೋಗುತ್ತಾನೆ. ಪರೀಕ್ಷೆಯಿದೆ ಬಿಟ್ಟು ಕಳುಹಿಸಿ, ಆತನಿಗೆ ಹುಷಾರಿಲ್ಲ ಬಿಟ್ಟುಬಿಡಿ ಎಂದು ಗೋಳಾಡುವುದು ಮಾಮೂಲಿಯಾಗಿದೆ. ಕೆಲ ಪಾಲಕರಂತೂ ಕಣ್ಣೀರು ಸುರಿಸುತ್ತಲೇ ಠಾಣೆಗೆ ಆಗಮಿಸಿ ನಮ್ಮ ಮಗನದ್ದೇನೂ ತಪ್ಪಿಲ್ಲ. ಆತ ಅಮಾಯಕ. ಆತ ಕೆಲಸಕ್ಕೆ ಹೋಗಿದ್ದ. ನಮಾಜ್‌ಗೆ ಹೋಗಿದ್ದ ಬಿಟ್ಟುಬಿಡಿ ಎಂದು ಗೋಗರೆಯುತ್ತಿದ್ದ ದೃಶ್ಯ ಮಂಗಳವಾರ ಕಂಡು ಬಂತು.
ಕಮಿಷನರ್ ಕಾರ್ ಮೇಲೆ ನಿಂತು ಪ್ರಚೋದನೆ ನೀಡಿದ್ದ ಮೌಲ್ವಿ ತರ ಕಾಣುತ್ತಿದ್ದ ಆ ವ್ಯಕ್ತಿ ಯಾರು?
ಹಿಂಸಾಚಾರ ಪ್ರೀಪ್ಲಾನ್ ಆಗಿತ್ತಾ?ಸ್ಥಳದಲ್ಲಿ 3 ಟ್ರ್ಯಾಕ್ಟರ್ ಕಲ್ಲು ಪತ್ತೆ!
ಕಳೆದ ಶನಿವಾರ ರಾತ್ರಿ ಹುಬ್ಬಳ್ಳಿಯಲ್ಲಿ ಹಠಾತ್ತನೆ ಸಂಭವಿಸಿದ ಗಲಭೆ, ಹಿಂಸಾಚಾರಕ್ಕೆ ಸಂಬಂಧಿಸಿದ ಒಂದೊಂದೇ ದೃಶ್ಯಾವಳಿಗಳು ಹಾಗೂ ಧ್ವನಿ ಸಂದೇಶಗಳು ಬಹಿರಂಗವಾಗುತ್ತಿದ್ದು, ಇಡೀ ಘಟನೆ ಪೂರ್ವನಿಯೋಜಿತವಾಗಿತ್ತಾ? ಕೆಲ ಕಾಣದ ಕೈಗಳ ಕುಮ್ಮಕ್ಕಿನಿಂದಾಗಿ ವಾಣಿಜ್ಯ ನಗರಿ ಕಂಗೆಡುವಂತಾಯಿತಾ ಎಂಬಿತ್ಯಾದಿ ಪ್ರಶ್ನೆಗಳು ಉದ್ಭವವಾಗಿವೆ.
ಮೆಕ್ಕಾ ಮಸೀದಿಯ ಮೇಲೆ ಕೇಸರಿ ಧ್ವಜ ಹಾರಿದಂತೆ ಎಡಿಟ್ ಮಾಡಿದ ವಿಡಿಯೋವೊಂದನ್ನು ಕಿಡಿಗೇಡಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಹಾಕಿದಲ್ಲಿಂದ ಆರಂಭವಾದ ವಿವಾದ ಏ.16ರ ಶನಿವಾರ ರಾತ್ರಿ ಭಾರೀ ಗಲಭೆ, ಕಲ್ಲು ತೂರಾಟ, ಹಿಂಸಾಚಾರ ಆಗುವ ಮಟ್ಟಿಗೆ ಮುಂದುವರಿದಿತ್ತು. ಪಿಎಸ್‌ಐ ಸೇರಿ 12 ಪೊಲೀಸರು ಗಾಯಗೊಂಡಿದ್ದರು. ದೇಗುಲವೊಂದರ ಮೇಲೂ ದಾಳಿ ನಡೆದಿತ್ತು. ಬಸ್ಸು, ಪೊಲೀಸ್ ಜೀಪು ಸೇರಿ 12 ವಾಹನಗಳು ಜಖಂಗೊಂಡಿದ್ದವು. ಶಾಂತವಾಗಿದ್ದ ಹುಬ್ಬಳ್ಳಿ ನಗರ ಕೆಲವೇ ತಾಸುಗಳಲ್ಲಿ ಉದ್ವಿಗ್ನತೆಯಿಂದ ಬೇಯುವಂತಾಯಿತು. ಹಾಗಾದರೆ ಅಲ್ಪಾವಧಿಯಲ್ಲಿ ಇಷ್ಟುದೊಡ್ಡ ಪ್ರಮಾಣದ ಗಲಭೆ ಸಂಭವಿಸಿದ್ದು ಹೇಗೆ? ಇದರ ಹಿಂದೆ ಯಾರಿದ್ದಾರೆ? ಇದೊಂದು ಯೋಜಿತ ಕೃತ್ಯವೇ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪೊಲೀಸರು ತನಿಖೆ ನಡೆಸಿದ್ದಾರೆ.