ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದ ಲಾಡ್ಜ್‌ನಲ್ಲಿ ಮತ್ತೊಂದು ಸುಸೈಡ್

Published : Apr 19, 2022, 02:16 PM ISTUpdated : Apr 19, 2022, 02:21 PM IST
ಸಂತೋಷ್ ಪಾಟೀಲ್ ಆತ್ಮಹತ್ಯೆ  ಮಾಡಿಕೊಂಡಿದ್ದ ಲಾಡ್ಜ್‌ನಲ್ಲಿ ಮತ್ತೊಂದು ಸುಸೈಡ್

ಸಾರಾಂಶ

* ಶಾಂಭವಿ ಲಾಡ್ಜ್ ನಲ್ಲಿ ಮತ್ತೊಂದು ಆತ್ಮಹತ್ಯೆ * ಮಂಗಳೂರು ಮೂಲದ ಮೆಡಿಕಲ್ ರೆಪ್ ಆತ್ಮಹತ್ಯೆ * ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದ ಖಾಸಗಿ ಹೋಟೆಲ್

ಉಡುಪಿ, (ಏ.19): ಇತ್ತೀಚೆಗೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ (Santosh Patil Suicide) ಮಾಡಿಕೊಂಡಿದ್ದ ಲಾಡ್ಜ್‌ನಲ್ಲಿ( Lodge) ಮತ್ತೊಂದು ಆತ್ಮಹತ್ಯೆ  (Suicide) ಆಗಿದೆ.

ಹೌದು...ಉಡುಪಿಯ(Udupi) ಶಾಂಭವಿ ಲಾಡ್ಜ್‌ನಲ್ಲಿ (Shambhavi Lodge) ವ್ಯಕ್ತಿಯೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಗಳೂರು ಮೂಲದ ಮೆಡಿಕಲ್ ರೆಪ್ ಶರಣ್(33) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಶಾಂಭವಿ ಲಾಡ್ಜ್‌ಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇತ್ತೀಚೆಗೆ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಂತೋಷ್ ಆತ್ಮಹತ್ಯೆ ಬಳಿಕ ಲಾಡ್ಜ್ ಹೆಸರು ಬದಲಿಸಿದ್ದರು. ಆದರೆ ಇದೀಗ ಮತ್ತೊಬ್ಬ ವ್ಯಕ್ತಿ ಲಾಡ್ಜ್‌ನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Suicide Case: ಸಂತೋಷ್ ಪಾಟೀಲ್ ಸಾವಿಗೆ ಕಾರಣವಾದ ವಿಷ ಯಾವುದು ಗೊತ್ತಾ ?

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದ ಖಾಸಗಿ ಹೋಟೆಲ್​ನಲ್ಲೇ ಮತ್ತೊಂದು ಆತ್ಮಹತ್ಯೆ ಆಗಿರುವುದು ಅನೇಕ ಶಂಕೆಗಳಿಗೆ ಕಾರಣವಾಗಿದೆ. ಎರಡು ದಿನದ ಹಿಂದಷ್ಟೇ ಈ ಲಾಡ್ಜ್ ನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿ ಹೆಸರು ಬದಲಾಯಿಸಲಾಗಿತ್ತು. ಅಲ್ಲದೇ ಲಾಡ್ಜ್ ದ್ವಾರದ ದಿಕ್ಕು ಬದಲಾಯಿಸಲು ಯೋಜಿಸಲಾಗಿತ್ತು.  ಆದ್ರೆ ಈಗ ಮತ್ತೆ ಅಲ್ಲೇ ಅನಾಹುತ ನಡೆದಿದೆ. ಈ ರೀತಿ ಖಾಸಗಿ ಲಾಡ್ಜ್ ಸೂಸೈಡ್ ಸ್ಪಾಟ್ ಆದಂತಿದೆ.

ಸಂತೋಷ್ ಪಾಟೀಲ್ ಮೂಲತಃ ಬೆಳಗಾವಿ ಜಿಲ್ಲೆಯವರಾಗಿದ್ದರೂ ಪ್ರವಾಸಕ್ಕೆಂದು ಹೋಗಿ ಉಡುಪಿ ಶಾಂಭವಿ ಲಾಡ್ಜ್‌ನಲ್ಲಿ ಜ್ಯೂಸ್‌ಗೆ ವಿಷ ಬೆರಿಸಿ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅದರಕ್ಕೂ ಮೊದಲ ಈಶ್ವರಪ್ಪ ಅವರೇ ನನ್ನ ಸಾವಿಗೆ ಕಾರಣ ಎಂದು ಹೇಳಿದ್ದರು. ಇದು ಈ ಪ್ರಕರಣ ದೊಡ್ಡ ಸಂಚಲನ ಮೂಡಿಸಿತ್ತು.ಇಪ್ಪತ್ತು ನಾಲ್ಕು ಗಂಟೆ ಸಹ ಲಾಡ್ಜ್‌ನಲ್ಲೇ ಮೃತದೇಹವಿತ್ತು.

ಇನ್ನು ಇದೀಗ ಮಂಗಳೂರು ಮೂಲಕ ಶರಣ್, ಉಡುಪಿಯ ಶಾಂಭವಿ ಲಾಡ್ಜ್‌ನಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ. ಬೇರೆ ಜಿಲ್ಲೆಯಿಂದ ಬಂದು ಇಲ್ಲಿ ಸುಸೈಡ್ ಮಾಡಿಕೊಂಡಿದ್ಯಾಕೆ? ಎನ್ನುವ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು