Belagavi ಅಕ್ರಮ ಮರಳು ತೆರವಿಗೆ ಆಗ್ರಹಿಸಿದ ಕುಟುಂಬಕ್ಕೆ ಕಾಂಗ್ರೆಸ್ ಮುಖಂಡನ ಜೀವ ಬೇದರಿಕೆ!

By Suvarna News  |  First Published Apr 19, 2022, 6:15 PM IST

ಹುಕ್ಕೇರಿ ತಾಲೂಕಿನಲ್ಲಿ ಅನಧಿಕೃತವಾಗಿ  ಮರಳು ದಾಸ್ತಾನು ಮಾಡುವ ಕಾಂಗ್ರೆಸ್ ಮುಖಂಡ ದೇವಪ್ಪ ಹೂನ್ನೂರಿ ಎಂಬಾತ ಈರಪ್ಪಾ ಬರಗಾಲಿ ಎಂಬುವವರ ಗದ್ದೆಯಲ್ಲಿ ಸಂಗ್ರಹ ಮಾಡಿದ್ದ ಮರಳು ಖಾಲಿ ಮಾಡುವ ಬದಲು ಇಡೀ ಕುಟುಂಬದ ಮೇಲೆ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾನೆ.


ವರದಿ: ಮುಷ್ತಾಕ್ ಪೀರಜಾದೇ, ಏಷ್ಯಾನೆಟ್ ಸುವರ್ಣನ್ಯೂಸ್

ಚಿಕ್ಕೋಡಿ(ಏ.19): ಆತನಿಗೆ ಅಕ್ರಮ ಮರಳುಗಣಿಗಾರಿಕೆ ಮುಖ್ಯ ಉದ್ಯೋಗ ಘಟಪ್ರಭಾ (Ghataprabha) ಒಡಲನ್ನ ಬಗೆದು ಅಕ್ರಮವಾಗಿ ಮರಳು ಸಂಗ್ರಹಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದೆ ಆತನ ಕಾಯಕವಾಗಿದೆ. ಬಡವರ ಬಡಪಾಯಿಗಳ ಜಮೀನಿನಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿ ನಂತರ ಮಾರಾಟ ಮಾಡಿ ಹಣ ಮಾಡಿಕೊಳ್ಳುತ್ತಿದ್ದ. ಮರಳು ತೆಗೆದು ಜಮೀನು ಖಾಲಿ ಮಾಡಿ ಎಂದ ಮಾತ್ರಕ್ಕೆ ತನ್ನ ಬೆಂಬಲಿಗರ ಜೊತೆ ಸೇರಿ ಇಡೀ ಕುಟುಂಬದ ಮೇಲೆ ಹಲ್ಲೆ ಮಾಡಿದ್ದಾನೆ. ಸಾಲದಿದ್ದಕ್ಕೆ ಚಿಕ್ಕ ಮಕ್ಕಳು ಬಾಣಂತಿಯ ಮೇಲು ಹಲ್ಲೆ ನಡೆಸಿ ಇಡೀ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿದ್ದು ಸದ್ಯ ಕುಟುಂಬ ನ್ಯಾಯಕ್ಕಾಗಿ ಅಲೆದಾಡುವಂತಾಗಿದೆ. 

Tap to resize

Latest Videos

ಈ ಘಟನೆ ನಡೆದಿರೋದು ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರ್ಡಿ ಆರ್ ಸಿ ಗ್ರಾಮದಲ್ಲಿ. ಅದೆ ಗ್ರಾಮದ ಕಾಂಗ್ರೆಸ್ ಮುಖಂಡ ದೇವಪ್ಪ ಹೂನ್ನೂರಿ ಎಂಬಾತ ಗ್ರಾಮದ ಹೊರವಲಯದ ಹಿಡಕಲ್ ಜಲಾಶಯದಿಂದ ಅನಧಿಕೃತವಾಗಿ  ಮರಳು ದಾಸ್ತಾನನ್ನ ಅದೇ ಗ್ರಾಮದ ಈರಪ್ಪಾ ಬರಗಾಲಿ ಎಂಬುವವರ ಗದ್ದೆಯಲ್ಲಿ ಸಂಗ್ರಹ ಮಾಡಿದ್ದ ಕಳೆದ ಆರು ತಿಂಗಳಿನಿಂದಲು ಅಕ್ರಮವಾಗಿ ಮರಳನ್ನ ಇವರ ಜಮೀನಿನಲ್ಲೆ ಸಂಗ್ರಹ ಮಾಡುತ್ತ ಬಂದಿದ್ದ ದೇವಪ್ಪಾ. ಕಳೆದ ಒಂದು ವಾರದಿಂದ ಮಳೆ ಸುರಿಯುತ್ತಿರುವ ಹಿನ್ನೆಲೆ ಸ್ವಲ್ಪ ಬೆಳೆ ಮಾಡಬೇಕು ಎಂದು ಯೋಚಿಸಿದ್ದ.

Karnataka Mutt Commission Row ದಿಂಗಾಲೇಶ್ವರ ವಿರುದ್ಧ ಕರಾವಳಿಯ ಮಠಾಧೀಶರುಗಳ

ಈರಪ್ಪಾ ತನ್ನ ಜಮೀನಿಗೆ ತೆರಳಿ ಮರಳು ಮಾಲಿಕ ದೇವಪ್ಪನಿಗೆ ನಿಮ್ಮ ಮರಳು ತೆಗೆದುಕೊಂಡು ಜಮೀನು ಖಾಲಿ ಮಾಡಿಕೊಡಿ ನಾನು ಬೆಳೆ ಬೆಳೆಯಬೇಕು ಎಂದಿದ್ದ ಅಷ್ಟೇ, ಜಮೀನು ಖಾಲಿ ಮಾಡು ಎಂದ ಮಾತ್ರ ನಾನು ಜಮೀನು ಖಾಲಿ ಮಾಡಲು ಆಗಲ್ಲಾ ಎಂದು ಜಮೀನು ಮಾಲಿಕನಿಗೆ ಧಮಕಿ ಹಾಕಿ ಕಳುಹಿಸಿದ್ದ ಅಲ್ಲದೆ ಈರಪ್ಪನ ಮಗ ಲಖನ ಮೇಲು ಸಹ ಹಲ್ಲೆ ನಡೆಸಿ ಗುಂಡಾವರ್ತನೆ ಪ್ರದರ್ಶಿಸಿದ್ದ. 

ಇನ್ನು ತಮ್ಮ ಮೇಲೆ ಆಗಿರುವ ಹಲ್ಲೆಗೆ ಈರಪ್ಪ ಬರಗಾಲಿ ಕುಟುಂಬ ಪೊಲೀಸ ಠಾಣೆ ಮೆಟ್ಟಿಲೇರಿ ನ್ಯಾಯ ದೊರಕಿಸಿಕೊಡುವಂತೆ ಕೇಳಿಕೊಂಡಿದೆ. ಯಾವಾಗ ಈರಪ್ಪ ಪೊಲೀಸರ ಬಳಿ ಹೋಗಿರುವ ಮಾಹಿತಿ ಸಿಗುತ್ತಿದ್ದಂತೆ ಮತ್ತೆ ಅವತ್ತೆ ರಾತ್ರಿ ತನ್ನ ಬೆಂಬಲಿಗರ ಜೋತೆಗೆ ಮನೆಗೆ ತೆರಳಿ ಮನೆಯವರ ಮೇಲೆ ಹಲ್ಲೆ ನಡೆಸಿದ್ದಾನೆ. ಸಾಲದಕ್ಕೆ ಮನೆಯಲ್ಲಿದ್ದ ಹೆಣ್ಣು ಮಕ್ಕಳು ಹಾಗೂ ಬಾಣಂತಿಯ ಮೇಲೂ ಹಲ್ಲೆ ನಡೆಸಿ ಮತ್ತೋಮ್ಮೆ ಪೊಲೀಸರ ಬಳಿ ಹೋದರೆ ನಿಮ್ಮನ್ನ ಗ್ರಾಮದಿಂದಲೆ ಓಡಿಸುವುದಾಗಿ ಬೆದರಿಕೆ ಹಾಕಿದ್ದ. 

Chikkamagaluru ಸಿಎಂ ಆದ ಬಳಿಕ ಮೊದಲ ಬಾರಿ ಕಾಫಿನಾಡಿಗೆ ಬೊಮ್ಮಾಯಿ ಭೇಟಿ 

ಇನ್ನು ಘಟನೆಯಿಂದ ಗಾಬರಿಗೊಂಡ ಕುಟುಂಬ ಮೊದಲು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಎರಡು ದಿನಗಳ ಬಳಿಕೆ ಮತ್ತೆ ಪೊಲೀಸರ ಬಳಿ ತೆರಳಿದ್ದಾರೆ. ನ್ಯಾಯ ಕೊಡಿಸಬೇಕಾದ ಪೊಲೀಸರ ರಾಜಕೀಯ ಮುಖಂಡನ ಮಾತು ಕೇಳಿಕೊಂಡು ಪ್ರಕರಣವನ್ನು ದಾಖಲಿಸಿಕೊಳ್ಳದೆ ಅಲ್ಲಿಯೆ ಹೋಗಿ ಸಮಸ್ಯೆ ಬಗೆ ಹರಿಸಿಕೊಳ್ಳಿ ಎಂದಿದ್ದಾರೆ. ರಾಜಕೀಯ ಮುಖಂಡರು ಸಹವಾಸ ಬಿಟ್ಟು ಅವರು ಹೇಳಿದಂತೆ ಕೇಳಿಕೊಂಡು ಹೋಗಿ ಎಂದಿದ್ದಾರೆ ಎಂದು ಹಲ್ಲೆಗೊಳಗಾದ ಲಖನ್ ಪೊಲೀಸರ ಮೇಲೆ ಆರೋಪ ಮಾಡಿದ್ದಾರೆ. 

ಇನ್ನು ಘಟನೆ ನಡೆದು ನಾಲ್ಕು ದಿನಗಳೆ ಕಳೆದರು ಇದುವರೆಗೂ ಪೊಲೀಸರ ನಮ್ಮ ಪ್ರಕರಣವನ್ನ ದಾಖಲಿಕೊಂಡಿಲ್ಲಾ ನಮಗೆ ನ್ಯಾಯ ಕೊಡಿಸಿ ಎಂದು ಮಾಧ್ಯಮಗಳ ಮುಂದೆ ತಮ್ಮ ಅಳಲನ್ನ ತೊಂಡಿಕೊಂಡಿದ್ದಾರೆ. 

ಒಟ್ಟಿನಲ್ಲಿ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನಲ್ಲಿ ಅಕ್ರಮವಾಗಿ ಮರಳು ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಅಧಿಕಾರಿಗಳು  ಕಣ್ಣಮಚ್ಚಿ ಕುಳಿತಿದ್ದಾರೋ ಅಥವಾ ಗೋತ್ತಿದ್ದು ರಾಜಕೀಯ ಒತ್ತಡದಿಂದ ಸುಮ್ಮನಿದ್ದಾರೋ ಎಂಬುವದು ಜನ ಸಾಮಾನ್ಯರ ಪ್ರಶ್ನೆಯಾಗಿದೆ. ಇತ್ತ ತನ್ನ ಜಮೀನನ್ನೆ ಅಕ್ರಮ ಮರಳುಧಂದೆ ಕೋರರು ಅತಿಕ್ರಮಿಸಿಕೊಂಡಿದ್ದು ನನಗೆ ನ್ಯಾಯ ಕೊಡಿಸಿ ಒಂದು ಈರಪ್ಪ ಕುಟುಂಬ ಕಣ್ಣೀರು ಹಾಕುತ್ತಿದೆ. ಇನ್ನಾದರು ಪೊಲೀಸರು ಎಚ್ಚೆತ್ತುಕೊಂಡು ನೊಂದ ಕುಟುಂಬಕ್ಕೆ ನ್ಯಾಯ ಕೊಡಿಸಬೇಕಾಗಿದೆ.

click me!