ರೇಣುಕಾಸ್ವಾಮಿ ಕೊಲೆ ಪ್ರಕರಣ: ಮೆಜೆಸ್ಟಿಕ್‌ ದಾಸ... 6 ದಿನ ಪೊಲೀಸ್ ಕಸ್ಟಡಿಯಲ್ಲಿ ವಾಸ!

By Gowthami K  |  First Published Jun 11, 2024, 7:05 PM IST

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ , ಎರಡನೇ ಪತ್ನಿ ಪವಿತ್ರಾ ಗೌಡ ಸೇರಿ 13 ಮಂದಿಯನ್ನು ನ್ಯಾಯಾಲಯ  3 ದಿನ  ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.


ಬೆಂಗಳೂರು (ಜೂ.11): ಚಿತ್ರದುರ್ಗ ಮೂಲದ ವ್ಯಕ್ತಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್‌ ನಟ ದರ್ಶನ್  (Actor Darshan), ಅವರ ಎರಡನೇ ಪತ್ನಿ ಪವಿತ್ರಾ ಗೌಡ  (Darshan Second Wife Pavithra Gowda) ಮತ್ತು ನಟನ ಆಪ್ತರು ಸೇರಿ 13 ಮಂದಿಗೆ  6 ದಿನ ಪೊಲೀಸ್‌ ಕಸ್ಟಡಿಗೆ ನ್ಯಾಯಾಲಯ ಒಪ್ಪಿಸಿದೆ.

ಬೌರಿಂಗ್ ಆಸ್ಪತ್ರೆಯಲ್ಲಿ ಆರೋಪಿಗಳ ಮೆಡಿಕಲ್ ಟೆಸ್ಟ್‌ ಮಾಡಿದ ಬಳಿಕ 13 ಆರೋಪಿಗಳನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಪೊಲೀಸರು ಹಾಜರುಪಡಿಸಿದ್ದರು. ಪ್ರಕರಣದಲ್ಲಿ ಪವಿತ್ರಗೌಡ ಆರೋಪಿ ನಂಬರ್ 1 ಆಗಿದ್ದು, ದರ್ಶನ್ ಆರೋಪಿ ನಂಬರ್ 2 ಆಗಿದ್ದಾರೆ.

Tap to resize

Latest Videos

ಬೆಳಗಿನವರೆಗೂ ಪಾರ್ಟಿ ಮಾಡಿದ್ದ ದರ್ಶನ್&ಗ್ಯಾಂಗ್! ಹತ್ಯೆಗೂ ಮುನ್ನ ಏನೇನಾಯ್ತು? ಕಂಪ್ಲೀಟ್‌ ಡೀಟೆಲ್ಸ್

ಆರೋಪಿಗಳ ಪಟ್ಟಿ ಇಂತಿದೆ
A1.ಪವಿತ್ರಾಗೌಡ
A2.ದರ್ಶನ್
A3.ಪವನ್
A4.ವಿನಯ್
A5.ಪ್ರದೋಶ್
A6.ನಂದೀಶ್
A7.ದೀಪಕ್
A8.ಲಕ್ಷ್ಮಣ್
A9.ನಾಗರಾಜು
A10.ಕಾರ್ತಿಕ್
A11.ನಿಕಿಲ್
A12.ಕೇಶವಮೂರ್ತಿ
A13.ರಾಘವೇಂದ್ರ

ದರ್ಶನ್‌ ಎರಡನೇ ಪತ್ನಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿರುವ ಆರೋಪದ ಹಿನ್ನೆಲೆ ಜೂನ್ 8ರಂದು ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ತಂದು ಪಟ್ಟಣಗೆರೆ ಸಮೀಪದ ಶೆಡ್‌ನಲ್ಲಿಟ್ಟು ಚಿತ್ರಹಿಂಸೆ ನೀಡಿ ಕೊಲ್ಲಲಾಗಿತ್ತು. ಜೂನ್‌ 9ರಂದು ಮೃತದೇಹ ಸುಮನಹಳ್ಳಿ ಬ್ರಿಡ್ಜ್‌ ಬಳಿ ಪತ್ತೆಯಾಗಿತ್ತು. ತನಿಖೆ ನಡೆಸಿದಾಗ ಪೊಲೀಸರಿಗೆ ದರ್ಶನ್ ಮತ್ತು ಗ್ಯಾಂಗ್ ಪಾತ್ರವಿರುವ ಬಗ್ಗೆ ತಿಳಿದುಬಂದಿತ್ತು. ಜೂನ್‌ 10 ರಂದು ಮೂವರ ಬಂಧನವಾಗಿತ್ತು. ಜೂನ್‌ 11 ರಂದು ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ.

ದರ್ಶನ್ ಬಂಧನ ಬೆನ್ನಲ್ಲೇ ಒಡೆದ ಹೃದಯ ಸ್ಟೇಟಸ್‌ ಹಾಕಿ ಡಿಲೀಟ್‌ ಮಾಡಿದ ನಟಿ ರಕ್ಷಿತಾ, ರಮ್ಯಾ ರೀಟ್ವೀಟ್!

ದರ್ಶನ್‌ ಮತ್ತು ಪವಿತ್ರಗೌಡ ಸೇರಿ 13 ಮಂದಿಯ ಬಂಧನವಾಗಿದೆ. ದರ್ಶನ್ ಸ್ನೇಹಿತ ವಿ.ವಿನಯ್, ದರ್ಶನ್ ಮ್ಯಾನೇಜರ್ ಆರ್ ನಾಗರಾಜು, ಎಂ.ಲಕ್ಷ್ಮಣ್, ಎಸ್ ಪ್ರದೋಶ್, ಕೆ.ಪವನ್, ದೀಪಕ್ ಕುಮಾರ್, ನಂದೀಶ್, ಕಾರ್ತಿಕ್, ನಿಖಿಲ್ ನಾಯಕ್, ಕೇಶವ ಮೂರ್ತಿ, ರಾಘವೇಂದ್ರ ಅಲಿಯಾಸ್ ರಾಘು ಬಂಧಿತ ಆರೋಪಿಗಳಾಗಿದ್ದು, ಹೆಚ್ಚಿನವರು ದರ್ಶನ್ ಬಾಡಿಗಾರ್ಡ್ಸ್ ಆಗಿದ್ದಾರೆ.

click me!