ಕೊಡಗಿನಲ್ಲಿ 2 ವರ್ಷದ ಮಗುವಿನ ಮೇಲೆ ಅತ್ಯಾಚಾರ: ಕಾಮುಕ ಅರೆಸ್ಟ್‌

Published : Feb 15, 2024, 01:05 PM IST
ಕೊಡಗಿನಲ್ಲಿ 2 ವರ್ಷದ ಮಗುವಿನ ಮೇಲೆ ಅತ್ಯಾಚಾರ: ಕಾಮುಕ ಅರೆಸ್ಟ್‌

ಸಾರಾಂಶ

ಕೊಡಗು ಜಿಲ್ಲೆಯ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿದ್ದಾಪುರದಿಂದ ಸುಮಾರು 20 ಕಿ.ಮೀ ದೂರದ ಎಸ್ಟೇಟ್‌ನಲ್ಲಿ ಬುಧವಾರ ಸಂಜೆ ಕೃತ್ಯ ನಡೆದಿದೆ. ಮಣಿ ಎಂಬ ಕಾರ್ಮಿಕ ಕುಡಿದ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಕಾಮುಕನ ಪೈಶಾಚಿಕ ಕೃತ್ಯದಿಂದ ಅಸ್ವಸ್ಥಗೊಂಡು ಗಂಭೀರವಾಗಿ ಗಾಯಗೊಂಡಿರುವ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಡಿಕೇರಿ(ಫೆ.15): ಕೊಡಗಿನಲ್ಲೊಂದು ಪೈಶಾಚಿಕ ಕೃತ್ಯವೊಂದು ನಡೆದಿದ್ದು, ಇನ್ನೂ ಜಗತ್ತು ಅಂದರೆ ಏನು ಎಂದು ತಿಳಿಯದ ಪುಟಾಣಿ ಮಗುವಿನ ಮೇಲೆ ಕಾಮುಕನೊಬ್ಬ ದೌರ್ಜನ್ಯ ನಡೆಸಿದ್ದಾನೆ.

ಕೇವಲ ಎರಡು ವರ್ಷದ ಮಗುವಿನ ಮೇಲೆ 45 ವರ್ಷದ ಕಾಮುಕನೊಬ್ಬ ಅತ್ಯಾಚಾರವೆಸಗಿದ್ದಾನೆ. ಜಿಲ್ಲೆಯ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿದ್ದಾಪುರದಿಂದ ಸುಮಾರು 20 ಕಿ.ಮೀ ದೂರದ ಎಸ್ಟೇಟ್‌ನಲ್ಲಿ ಬುಧವಾರ ಸಂಜೆ ಕೃತ್ಯ ನಡೆದಿದೆ. ಮಣಿ ಎಂಬ ಕಾರ್ಮಿಕ ಕುಡಿದ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಕಾಮುಕನ ಪೈಶಾಚಿಕ ಕೃತ್ಯದಿಂದ ಅಸ್ವಸ್ಥಗೊಂಡು ಗಂಭೀರವಾಗಿ ಗಾಯಗೊಂಡಿರುವ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಂಕೋಲಾ: ಮೈದುನ ಮೇಲೆ ಮಾನಭಂಗ ಆರೋಪ, ದೂರು

ಅದು ಜಾರ್ಖಂಡ್‌ ಮೂಲದ ಸಂಸಾರ. ಮನೆಯಲ್ಲಿ ಮಗು ಆಡುತ್ತಿತ್ತು. ಮಗುವಿನ ತಂದೆ ಬೇರೇನೋ ಕೆಲಸಕ್ಕೆ ಹೊರಗೆ ಹೋಗಿದ್ದರು. ಆಗ ಅಲ್ಲಿಗೆ ಬಂದ ಕಾಮುಕ ಮಗುವಿನ ಮೇಲೆ ರಕ್ಕಸನಂತೆ ಎರಗಿದ್ದಾನೆ. ಮಗು ಒಂದೇ ಸಮನೆ ಬೊಬ್ಬೆ ಹೊಡೆದಾಗ ತಂದೆ ಓಡಿ ಬಂದಿದ್ದು, ಮಣಿ ನಡೆಸುತ್ತಿದ್ದ ದುಷ್ಕೃತ್ಯ ಬಯಲಾಗಿದೆ. ಎಷ್ಟರ ಮಟ್ಟಿಗೆ ಕ್ರೌರ್ಯ ಮೆರೆದಿದ್ದಾನೆಂದರೆ ಮಗುವಿನ ಜನನಾಂಗದಲ್ಲಿ ರಕ್ತ ಬರುತ್ತಿತ್ತು. ಮಗುವಿನ ಮಗುವನ್ನು ಪರಚಿ, ಕಚ್ಚಿದ್ದ ಎಂದು ಹೇಳಲಾಗಿದೆ. ಮಹಿಳಾ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದು, ಆರೋಪಿ ಮಣಿಯನ್ನು ಬಂಧಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು: ಡ್ರಿಪ್ಸ್ ತೆಗೆಯುವಾಗ ದಾದಿಯಿಂದ 6 ತಿಂಗಳ ಮಗುವಿನ ಬೆರಳು ಕಟ್‌! ಆಸ್ಪತ್ರೆಯಲ್ಲಿ ಕಂದನ ಚೀತ್ಕಾರ!
10ನೇ ಕ್ಲಾಸ್ ಪರೀಕ್ಷೆ ನಡುವೆ ವಾಶ್‌ರೂಂಗೆ ತೆರಳಿ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ